ಯುವಜನತೆಗೆ ಹಿರಿಯರ ಬದುಕಿನ ಮೌಲ್ಯ ತಿಳಿಸುವದು ಇಂದಿನ ಅಗತ್ಯತೆ : ಗೌತಮಿ

ಯುವಜನತೆಗೆ ಹಿರಿಯರ ಬದುಕಿನ ಮೌಲ್ಯ ತಿಳಿಸುವದು ಇಂದಿನ ಅಗತ್ಯತೆ : ಗೌತಮಿ  The need of the day is to make the youth aware of the value of the lives of the elderly: Gautami

ಬೆಳಗಾವಿ 07: ಪಾಶ್ವಿಮಾತ್ಯ ಸಂಸ್ಕೃತಿಯ ದಾಸರಾಗಿ ಯುವಜನತೆ ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮುಂದಿನ ತಲೆಮಾರಿಗೆ ಸೇತುವೆಯಾಗಿ ಕೆಲಸಮಾಡಬೇಕಾಗಿದ್ದ ಹಿರಿಯನಾಗರಿಕರು ಅನೇಕ ಸಮಸ್ಯೆಗಳಿಗೆ ಒಳಗಾಗಿ ವೃದ್ಧಾಶ್ರಮದಲ್ಲಿ ಕಾಲಕಳೆಯುವ ಅನಿವಾರ್ಯತೆ ಉಂಟಾಗಿದ್ದು ಇದರಿಂದ ಹೊರಗೆ ಬರಬೇಕಾದರೆ ಯುವಜನತೆಗೆ ಹಿರಿಯರ ಬದುಕಿನ ಹೋರಾಟ ಮತ್ತು ಮೌಲ್ಯ ತಿಳಿಸಿ ಮಾನವೀಯ ಮೌಲ್ಯಗಳನ್ನು ಯುವಕರಿಗೆ ಕಲಿಸಿಕೊಡಬೇಕಾದ ಅಗತ್ಯತೆ ಇದೆೆಂದು ಕಿತ್ತೂರ ಚೆನ್ನಮ್ಮ ಪದವಿ ಮಹಾವಿದ್ಯಾಲಯದ ಚೇರಮನ್ ಗೌತಮಿ ಬಾಳೆಮನೆ ಅಭಿಪ್ರಾಯಪಟ್ಟರು.  

ಬೈಲಹೊಂಗಲದ ಕಿತ್ತೂರ ಚೆನ್ನಮ್ಮ ಸಂಸ್ಥೆಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಗರದ ದೇವರಾಜ ಅರಸ ಬಡಾವಣೆಯ ನಾಗನೂರು ಶಿವಬಸವೇಶ್ವರ ಟ್ರಸ್ಟಿನ್ ವೃದ್ಧಾಶ್ರಮಕ್ಕೆ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  

ಹಿರಿಯರೊಂದಿಗೆ ಮಾನವೀಯತೆ, ಪ್ರೀತಿ, ಗೌರವ ಬೆಳೆಸುವದು ಮತ್ತು ಪೀಳಿಗೆಯ ನಡುವಿನ ಬಾಂಧವ್ಯ ಬಲಪಡಿಸುವ ಉದ್ದೇಶದಿಂದ ಇಂತಹ ಶೈಕ್ಷಣಿಕ ಪ್ರವಾಸವನ್ನು ಏರಿ​‍್ಡಸಿ ಸಮಾಜಕ್ಕೆ ಹಿರಿಯರ ಕೂಡುಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.  

ಸಂಸ್ಥೆಯ ಸದಸ್ಯರಾದ ಎಸ್‌.ಎಂ.ಪಾಟೀಲ ಉಪನ್ಯಾಸಕರಾದ ಸೀಮಾ ದೊಡವಾಡ, ಅಶ್ವಿನಿ ಸೀನಣ್ಣವರ, ಸ್ಮೀತಾ ಹರಕುಣಿ ಹಾಗೂ ವಿದ್ಯಾರ್ಥಿಗಳ ಉಪಸ್ಥಿತರಿದ್ದರು. ಹಿರಿಯ ನಾಗರಿಕರಿಗಾಗಿ ದಿನಬಳಕೆ ವಸ್ತುಗಳನ್ನು ದೇಣಿಗೆಯಾಗಿ ನೀಡಿದರು. ಪೂರ್ಣಿಮಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಾನಕಿ ವಂದಿಸಿದರು. ಯಮುನಾ ನಿರೂಪಿಸಿದರು.