ಅಜಾತ ನಾಗಲಿಂಗ ಶಿವಯೋಗಿಗಳ ಪುರಾಣ ಆರಂಭ
The myth of the unborn Nagalinga Shivayogi begins
ದೇವರಹಿಪ್ಪರಗಿ 02: ಪಟ್ಟಣದ ಸಮೀಪವಿರುವ ಸುಕ್ಷೇತ್ರ ಕೊಕಟನೂರ ಗ್ರಾಮದ ಮಡಿವಾಳೇಶ್ವರ ಗದ್ದಗಿ ಮಠದ ಲಿಂ, ಸಿದ್ದಲಿಂಗ ಮಹಾ ಶಿವಯೋಗಿಗಳ 32ನೇ ಪುಣ್ಯ ಸ್ಮರಣೆ ಮತ್ತು ಮಡಿವಾಳೇಶ್ವರ ಮಹಾಸ್ವಾಮಿಗಳ ಇವರ 17ನೇ ವರ್ಷದ ಪಟ್ಟಾಧಿಕಾರ ನಿಮಿತ್ಯ ದೇವರಹಿಪ್ಪರಗಿ ಪಟ್ಟಣದ ಜಡಿ ಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರಿಂದ ಅಜಾತ ನವಲಗುಂದ ನಾಗಲಿಂಗ ಶಿವಯೋಗಿಗಳವರ ಪುರಾಣ ಪ್ರವಚನ ಆರಂಭಗೊಂಡಿತು.
ರವಿವಾರದಂದು ಜಡಿ ಸಿದ್ದೇಶ್ವರ ಶಿವಾಚಾರ್ಯರು ತಮ್ಮ ಪ್ರವಚನದಲ್ಲಿ ಸುಮಾರು 15 ದಿನಗಳ ಕಾಲ ನಡೆಯುವ ಪ್ರವಚನ ಈಗಾಗಲೇ ಪ್ರಾರಂಭವಾಗಿದೆ. ತಮ್ಮ ಅದ್ವೆತ ಶಕ್ತಿಯಿಂದಲೇ ಲೋಕಕ್ಕೆ ಬೆಳಕನ್ನು ನೀಡುವ ಮೂಲಕ ಜನರ ದಾರಿದ್ರ್ಯ ದೂರ ಮಾಡಿದ ಪುಣ್ಯ ಪುರುಷರ ಸಾಲಿನಲ್ಲಿ ಅಗ್ರಜರಾಗಿ ನಿಲ್ಲುವವರು ಅಜಾತ ನಾಗಲಿಂಗ ಶಿವಯೋಗಿಗಳು. ಶರಣರ ಜೀವನ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿ, ಭಕ್ತರ ಮನಸ್ಸಿನ ನೆಮ್ಮದಿಗೆ ಭೌತಿಕ ಸಂಪತ್ತು ಬೇಕಾಗಿಲ್ಲ, ಮಾನಸಿಕ ನೆಮ್ಮದಿ ಬೇಕಾದರೆ ಪುರಾಣ ಪ್ರವಚನದಿಂದ ನೆಮ್ಮದಿ ಇದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾದದ್ದು ವಿಶ್ವಗುರು ಎನಿಸಿದ ಬಸವಣ್ಣನವರಿಂದ. ಜಾತಿ, ಮತ, ಪಂಥ, ವರ್ಗ, ವರ್ಣ ವ್ಯವಸ್ಥೆಯಿಂದ ಹೊರಬರಲು ಇರುವ ಮನುಕುಲದ ಅಂಧಕಾರವನ್ನು ದೂರ ಮಾಡಲು ಬಸವಣ್ಣನವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.ಹಲವು ಆತಂಕ ಅಡೆತಡೆಗಳನ್ನು ಎದುರಿಸಿ ಸಮತಾ ತತ್ವದಿಂದ ಸಮಾನತೆಯ ಲೋಕವನ್ನು ಸಷ್ಠಿಸಿದ್ದರಿಂದ ಅವರು ವಿಶ್ವಗುರುವಾಗಿ ಬೆಳೆದರು ಅವರ ಬೆಳಕಿನಲ್ಲಿ ಸಾಗುತ್ತಿರುವ ನಾವೆಲ್ಲ ಸಮಾನತೆ ತತ್ವ ಪಾಲಿಸಬೇಕಾಗಿದೆ ಎಂದು ಹೇಳಿದರು. ಸಂಗೀತ ಸೇವೆಯನ್ನು ವೀರೇಶಕುಮಾರ ಕೆಂಭಾವಿ ಹಾಗೂ ಉಮೇಶ ಹಿರೇಮಠ ತಬಲಾ ಸಾಥ್ ನೀಡಿದರು. ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 