ಬಹುಮುಖ ಪ್ರತಿಭೆಯ ಸಾಹಿತಿ ಡಾ. ರಾ ಯ ಧಾರವಾಡಕರ

ಬಹುಮುಖ ಪ್ರತಿಭೆಯ ಸಾಹಿತಿ ಡಾ. ರಾ ಯ ಧಾರವಾಡಕರ  The multi-talented writer Dr. Dharwadkar

ಧಾರವಾಡ 28: ಡಾ. ರಾ ಯ ಧಾರವಾಡಕರ ಅವರು ಉತ್ತಮ ವಾಗ್ಮಿ ಗಳಾಗಿದ್ದರು. ಕನ್ನಡ ಭಾಷಾ ಶಾಸ್ತ್ರ ಉದಯಕಾಲದ ಕನ್ನಡ ಸಾಹಿತ್ಯ ಚರಿತ್ರೆ, ಧೂಮ್ರವಲಯಗಳು, ತೂರಿದ ಚಿಂತನೆಗಳು ಮೊದಲಾದ ಶ್ರೇಷ್ಠ ಕೃತಿಗಳನ್ನು ರಚಿಸಿದ ಆದರ್ಶ ಕನ್ನಡ ಇಂಗ್ಲಿಷ್ ಪ್ರಾಧ್ಯಾಪಕರು, ದಕ್ಷ ಆಡಳಿತಗಾರರು, ಶಿಷ್ಯ ವತ್ಸಲರಾಗಿದ್ದರೆಂದು ಡಾ. ಜಿನದತ್ತ ಹಡಗಲಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಭವನದಲ್ಲಿ ಏರಿ​‍್ಡಸಿದ್ದ ಡಾ. ರಾ ಯ ಧಾರವಾಡಕರ,  ಈಶ್ವರ ಸಣಕಲ್ಲ  ಸ್ಮಾರಕ ದತ್ತಿ, ಪ್ರೊ  ಭೂಪಾಲಪ್ಪ ಬಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.  

ಪ್ರೊ. ಭೂಪಾಲಪ್ಪ ಬಾಗಿ ಅವರು ಗಣಿತಶಾಸ್ತ್ರ ಭೋಧಿಸುವ ಅಪರೂಪದ ಪ್ರಾಧ್ಯಾಪಕರಾಗಿದ್ದರು.ಅವರ ಗಣಿತ ಭೋದನೆ ಸಾಹಿತ್ಯ ಭೋಧನಯಂತೆ ಆಕರ್ಷಕವಾಗಿತ್ತು  ಎಂದು ಡಾ.  ಜಿನದತ್ ಹಡಗಲಿ ತಿಳಿಸಿದರು.  ಕವಿ ಈಶ್ವರ ಸಣಕಲ್ಲ ಬಾಳ ಬಟ್ಟೆಯಲ್ಲಿ ನೊಂದು ಬೆಂದ ಅವರು ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ಬಂದಿದ್ದರೂ ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದು ಹಾಡಿ ಬದುಕಿದ ಕವಿಯನ್ನು ನಮ್ಮ ಸಾಹಿತ್ಯ ವಿಮರ್ಶಕರು ಗಮನಿಸದಿದ್ದದ್ದು  ಖೇದವನ್ನುಂಟು ಮಾಡಿದೆ ಎಂದು ಡಾ. ವಾಯ್ ಎಮ್ ಭಜಂತ್ರಿ ಈಶ್ವರ ಸಣಕಲ್ಲರ ಕವನಗಳನ್ನು ವಿಶ್ಲೇಷಿಸಿದರು. 

ಡಾ .ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆರು ಮಹಿಳಾ ತಂಡಗಳು ದೀಪಾವಳಿ ಕುರಿತು ಧಾರವಾಡದ ಕವಿಗಳು ರಚಿಸಿದ ಕವನಗಳ ಗೀತ ಗಾಯನವನ್ನು ಪ್ರಸ್ತುತಪಡಿಸಿದರು. ದತ್ತಿ ದಾನಿಗಳಾದ ಶ್ರೀಮತಿ ನಂದಿನಿ ಅಶೋಕ್ ಬಾಗಿ, ಎಚ್ ಎಸ್ ಪ್ರತಾಪ್, ವಿಶ್ವನಾಥ್ ಅಂಗಡಿ, ಪತ್ರಕರ್ತ  ಲಿಂಗರಾಜ ಪಾಟೀಲ , ಎಫ್ ಬಿ ಕಣವಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು. ಡಾ. ಎಸ್ ಎಸ್ ದೊಡಮನಿ ಸ್ವಾಗತಿಸಿದರು. ಸುನಂದಾ ಯಡಾಲ ವಂದಿಸಿದರು. ಮಹಾಂತೇಶ ನರೇಗಲ್ ನಿರೂಪಿಸಿದರು. ವಿಜಯಲಕ್ಷ್ಮೀ ಕಲ್ಯಾಣ ಶೆಟ್ಟರ್, ಸುಜಾತಾ ಹಡಗಲಿ, ನೇಹಾ ಬುದ್ನಿ, ಸಿ ವಿ ಮಮದಾಪೂರ, ಎಮ್ ಕೆ ನದಾಫ  ಮೊದಲಾದವರು ಉಪಸ್ಥಿತರಿದ್ದರು.