ಜನವರಿ 31ಕ್ಕೆ ‘ರಾವುತ’ ಚಲನಚಿತ್ರ ಬಿಡುಗಡೆ
The movie 'Rauta' will release on January 31
ಬೆಂಗಳೂರ 08: ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ ‘ರಾವುತ' ಕನ್ನಡ ಚಲನಚಿತ್ರವು ಒಂದು ವಿಭಿನ್ನ ಪ್ರಯತ್ನದ ಸಿನಿಮಾ.
ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ. ಆದರೆ ಸಿನಿಮಾ ಎಂದರೆ ಸಾಹಸ, ಪ್ರೀತಿ, ದ್ವೇಷ, ಅಂಥ ಹಲವು ಮಜಲು ಇಟ್ಟುಕೊಂಡು ಬರುತ್ತವೆ. ರಾವುತ ಸಿನಿಮಾ ಹಾಗಿಲ್ಲ, ಅದರ ಎಳೆಯೇ ಕುತೂಹಲ ಭರಿತವಾಗಿದೆ, ಅದೇನೆಂದರೆ ಸಾವಿನ ನಂತರ ಏನಾಗುತ್ತೆ ಅನ್ನೋದನ್ನ ಕಥೆಯ ಸಾರವಾಗಿಸಿದ್ದಾರೆ ಕಥೆಗಾರ ಸಿದ್ದುವಜ್ರ್ಪ. ಇದರ ವಿಭಿನ್ನ ಕ್ಲೈಮ್ಯಾಕ್ಸ್ ಅರ್ಥವೇ ಸಿನಿಮಾದ ಸಾವಿನ ನಂತರದ ಪಯಣ ತಿಳಿಸುತ್ತದೆ ಎಂದು ಹೇಳಿದ್ದಾರೆ ನಿರ್ಮಾಪಕರು. ಈ ಸಿನಿಮಾವು ಕನ್ನಡದ ಇನ್ನೊಂದು ನಾಗಮಂಡಲ ಆಗುವ ಲಕ್ಷಣವಿದೆ. ಅದಕ್ಕೆ ಕಾರಣ ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿಯ ದೃಶ್ಯ ಚಿತ್ರಣವಿರುವುದೇ ಇದಕ್ಕೆ ಕಾರಣ ಎಂದು ಇತ್ತೀಚಿಗೆ ನಡೆದ ಪ್ರೀಮಿಯರ್ ಶೋ ನೋಡಿದ ಗಣ್ಯರು ಮಿತ್ರರು ತಿಳಿಸಿದ್ದಾರೆ. ಜನವರಿ 31 ಕ್ಕೆ ಜನ ಮನ್ನಣೆ ಪಡೆಯಲು ರಾಜ್ಯಾದ್ಯಂತ ಚಿತ್ರಮಂದಿರಕ್ಕೆ ಬರಲಿದೆ ‘ರಾವುತ'. ಏನೇ ಆಗಲಿ ಕನ್ನಡಕ್ಕೆ ಸೈದ್ಧಾಂತಿಕ ಪ್ರಯತ್ನ ನಡೆಯುವುದು ವಿರಳ. ಈ ಪ್ರಯತ್ನಕ್ಕೆ ಜ .31ಕ್ಕೆ ಹೆಸರಾಂತ ನಿರ್ಮಾಪಕ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಸಂಸ್ಥೆಯ ಮುಖಾಂತರ ರಾಜ್ಯಾದ್ಯಂತ ಬಿಡುಗಡೆಗೊಂಡು ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ ‘ರಾವುತ'.
ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್, ಹಾಗೂ ಇನ್ನುಳಿದ ಕಲಾವಿದರೂ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ಮಾಪಕ ಈರಣ್ಣ ಶುಭಾಷ್ ಬಡಿಗೇರ್, ನಿರ್ದೇಶಕ ಸಿದ್ದುವಜ್ರ್ಪ ಮೊದಲ ಚಿತ್ರ ಪ್ರದರ್ಶನದ ತಯಾರಿಯ ಉತ್ಸಾಹದಲ್ಲಿ ಇದ್ದಾರೆ. ಜ.31ಕ್ಕೆ ಬಿಡುಗಡೆ ಇರುವ ಕಾರಣ ಸಧ್ಯದಲ್ಲೇ ಟ್ರೈಲರ್, ಟಿಸರ್ ಬಿಡುಗಡೆ ಆಗಲಿವೆ. ಚಿತ್ರಕ್ಕೆ ಛಾಯಾಗ್ರಹಣ ವಿನಯ್ ಗೌಡ, ಸಂಗೀತ ಸುಚಿನ್ ಶರ್ಮ, ಸಂಕಲನ ಅರವಿಂದ ರಾಜ್, ನೃತ್ಯ ಸೂರಿ ಮಾಸ್ಟರ್,ಸಾಹಿತ್ಯ ಸುರೇಶ ಕಂಬಳಿ, ಅಲ್ಲದೆ ಲಕ್ಷ್ಮೀಕಾಂತ,ರಾಜಶೇಖರ್,ಸಂತು, ಮಾರೇಶ ಕನಕಗಿರಿ, ರಾಘವ ಗೌಡಪ್ಪ, ಯಮನೂರ , ನಾಗರಾಜ ಮದ್ದಾಲಗುಂಡಿ, ಡಿ.ಐ ಕಲರಿಷ್ಟ ಕಿರಣ ಜಯ್ ಕೃಷ್ಣ, ಡಿಜಟಲ್ ಪ್ರಚಾರ ರಮಿತ್ ಏಲಕ್ಕಿ, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿಯವರದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 