ಜನಮನ ಸೆಳೆದ ‘ಜೋಕುಮಾರ ಮಹಿಮೆ’ ಕಿರುನಾಟಕ
The mini-drama 'Jokumara Mahime' attracted attention
ಹೂವಿನ ಹಡಗಲಿ 07: ಮಹಾಮಹಿಮ ಶ್ರೀ ಗವಿಸಿದ್ದೇಶ್ವರರ 31 ನೇ ಜಾತ್ರಾ ಮಹೋತ್ಸವದ ರಥೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಅಕ್ಕನ ಬಳಗದವರು ಪ್ರದರ್ಶಿಸಿದ ’ಜೋಕುಮಾರ ಮಹಿಮೆ’ ಕಿರುನಾಟಕ ಜನಮನ ಸೆಳೆಯಿತು. ಕೃಷಿ ಪ್ರಧಾನ ಹಳ್ಳಿಗಳ ಜನಸಾಮಾನ್ಯರ ಬದುಕನ್ನು ರೈತ ಮಹಿಳೆಯರು ಜೋಕುಮಾರ ಸ್ವಾಮಿ ಕಥೆ ಆಧಾರಿತವಾಗಿ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದರು.ಗ್ರಾಮೀಣ ಸೊಗಡಿನ ಭಾಷೆ ಕಾವ್ಯಮಯ ಪದಗಳು ನಾಟಕಕ್ಕೆ ಮೆರುಗು ತಂದವು. ಮಳೆ ಬೆಳೆ ಸುಗ್ಗಿ ಹಬ್ಬ ಮೊದಲಾದ ವಿಷಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಆಕರ್ಷಕವಾಗಿ ಮೂಡಿ ಬಂದಿತು.
ದೈನಂದಿನ ಬದುಕಿನ ನಿರ್ವಹಣೆ ಮರೆತು ಸಾಮಾಜಿಕ ಜಾಲತಾಣಗಳು ಧಾರಾವಾಹಿ ನೋಡುವುದರಲ್ಲಿಯೇ ಜನರು ಅತ್ಯಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಅನಾವರಣಗೊಳಿಸಿದರು. ಗವಿಸಿದ್ದೇಶ್ವರ ಅಕ್ಕನ ಬಳಗದ ಮುಖ್ಯಸ್ಥೆ ಕಲಾವಿದೆ ಸವಿತಾ ಕುಂಬಾರಿ ನಿರ್ದೇಶನದಲ್ಲಿ ಎಲ್ಲಾ ಮಹಿಳೆಯರು ಮನೋಜ್ಞ ಅಭಿನಯ ನೀಡಿದರು.ಕಲಾವಿದೆಯರಾದ ಶಶಿಕಲಾ ಹಿರೇಮಠ, ಮೇಘಾ, ಪುಷ್ಪಾ, ಕೊಟ್ರಮ್ಮ, ಹಿರಿಯರಾದ ಚೆನ್ನಮ್ಮ, ರತ್ನ ಇತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದರು. ಗ್ರಾಮೀಣ ಸೊಗಡಿನ ವೇಷಭೂಷಣ ಕಣ್ಮನ ಸೆಳೆದವು.ನಾಟಕಕ್ಕೆ ಪೂರಕವಾದ ಹಾಡು ಸಂಗೀತ ಉತ್ತಮವಾಗಿತ್ತು. ಎಂ ಪಿ ಎಂ ಪ್ರೇಮಾ ಪ್ರಸಾಧನ ಅಲಂಕಾರ ಅದ್ಭುತವಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಗವಿಸಿದ್ದೇಶ್ವರ ಅಕ್ಕನ ಬಳಗದ ವತಿಯಿಂದ ಮೂಡಿ ಬಂದ ಕಿರುನಾಟಕ ಜನಮನಸೆಳೆಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 