ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದ್ದು ; ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ ಮಹಾಬಳಶೆಟ್ಟಿಗೆ ಸನ್ಮಾನ
The medical profession is a sacred calling dedicated to saving lives; Gynecologist Dr. Nirmala Mahab
ಲೋಕದರ್ಶನ ವರದಿ
ಧಾರವಾಡ 13 : ವೈದ್ಯರು ನೀಡುವ ಚಿಕಿತ್ಸೆಯ ಪ್ರತಿಯೊಂದೂ ಆಯಾಮವೂ ರೋಗಿಯ ಜೀವ ಮತ್ತು ಆರೋಗ್ಯವನ್ನು ಕಾಪಾಡುವುದೇ ಆಗಿದ್ದು, ಮನುಕುಲದ ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದಾಗಿದೆ ಎಂದು ಹಿರಿಯ ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ ಮಹಾಬಲಶೆಟ್ಟಿ ಹೇಳಿದರು.ಅವರು ನಗರದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದ ಮಹಿಳಾ ವಿಭಾಗವು ವೈದ್ಯರ ದಿನಾಚರಣೆಯ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ರೋಗಿಯೊಂದಿಗೆ ಮೃದು ಮಾತು, ಸಹಾನುಭೂತಿಯ ಜೊತೆಗೆ ರೋಗ ನಿವಾರಣೆಗೆ ಪೂರಕವಾದ ಹೃದ್ಯ ಸ್ಪಂದನೆಯಿಂದ ರೋಗಿಯು ಆತ್ಮವಿಶ್ವಾಸದಿಂದ ಮಾನಸಿಕ ಚೈತನ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಇದರಿಂದ ಚಿಕಿತ್ಸೆ ಬೇಗ ಫಲಕಾರಿಯಾಗುತ್ತದೆ ಎಂದರು. ವೈಜ್ಞರ ವೃತ್ತಿಯ ಬದ್ಧತೆ, ಜ್ಞಾನ ಕ್ಷಿತಿಜ, ಕೌಶಲ, ಹೊಸ ವೈದ್ಯಕೀಯ ಅನ್ವೇಷಣೆಗಳ ಅವಲೋಕನ ವಿಸ್ತಾರವಾದಂತೆ ಪ್ರತೀ ವೈದ್ಯರೂ ತಮ್ಮ ವಿಶೇಷತೆಯ ರೋಗ ನಿವಾರಣೆಯ ಕ್ಷೇತ್ರಗಳಲ್ಲಿ ವ್ಯಾಪಕ ಸಾಧನೆ ಮಾಡಿ ಜನಪ್ರಿಯತೆ ಹೊಂದಲು ಸಾಧ್ಯವಾಗುತ್ತದೆ ಎಂದೂ ಡಾ. ನಿರ್ಮಲಾ ಮಹಾಬಲಶೆಟ್ಟಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಐಎಂಎ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಸಿದ್ದಗಂಗಾ ಹಳ್ಳಿಕೇರಿ, ಸಮಾಜದ ಮೇಲೆ ಶಾಶ್ವತವಾದ ಪ್ರಭಾವ ಬೀರಿರುವ ವೈದ್ಯರ ಸೇವೆಯನ್ನು ಮತ್ತು ಅವರ ಜೀವಮಾನದ ಸಾಧನೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಐಎಂಎ ಮಹಿಳಾ ವಿಭಾಗವು ನಿರಂತರ ಮಾಡುತ್ತಿದೆ. ಅತ್ಯಂತ ಸರಳ ವ್ಯಕ್ತಿತ್ವದಿಂದ ವೈದ್ಯಕೀಯ ಮೌಲ್ಯಗಳೊಂದಿಗೆ ಬದುಕಿರುವ ಹಿರಿಯ ಪ್ರಸೂತಿ ತಜ್ಞರಾದ ಡಾ. ನಿರ್ಮಲಾ ಮಹಾಬಲಶೆಟ್ಟಿ ಅವರು ಹೊಸ ತೆಲೆಮಾರಿನ ಎಲ್ಲಾ ವೈದ್ಯರುಗಳಿಗೆ ಮಾದರಿಯಾಗಿದ್ದಾರೆ ಎಂದರು.
ಐಎಂಎ ಮಾಜಿ ಅಧ್ಯಕ್ಷರುಗಳಾದ ಡಾ. ವಾಣಿ ಇರಕಲ್, ಡಾ. ಕವಿತಾ ಮಂಕಣಿ ಹಾಗೂ ಡಾ. ಪಲ್ಲವಿ ದೇಶಪಾಂಡೆ, ಹಿರಿಯ ತಜ್ಞರುಗಳಾದ ಡಾ. ವಿಜಯಾ ನಾಡಕರ್ಣಿ ಹಾಗೂ ಡಾ. ಸೌಭಾಗ್ಯ ಕುಲಕರ್ಣಿ ಅವರು ಡಾ. ನಿರ್ಮಲಾ ಮಹಾಬಲಶೆಟ್ಟಿ ಕುರಿತು ಅಭಿನಂದನಾಪರ ಮಾತನಾಡಿದರು. ಡಾ. ಕಾತ್ಯಾಯಿನಿ ಪಾಟೀಲ ನಿರೂಪಿಸಿದರು. ಐಎಂಎ ಮಹಿಳಾ ವಿಭಾಗದ ಕಾರ್ಯದರ್ಶಿ ಡಾ. ಸ್ವಪ್ನಾ ಪಾಂಡುರಗಿ ವಂದಿಸಿದರು. ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಾಗಿರುವ ಹಲವಾರು ಹಿರಿಯ ವೈದ್ಯರು ಪಾಲ್ಗೊಂಡಿದ್ದರು.
ಆಗಸ್ಟ್ 6ರ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜಸ್ಥಾನದ ಬಾಲೋತ್ರಾ-ಜೋಧ್ಪುರ ಹೆದ್ದಾರಿಯಲ್ಲಿ ಎಸ್ಯುವಿ-ಡಂಪರ್ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ 