ಕಾರವಾರ: ಗೋಕರ್ಣದ ಅಶೋಕೆ ಗ್ರಾಮದ ಕೃಷ್ಣ ಬೀರಾ ಗೌಡ (32) ಅವರು ಗದ್ದೆಯಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಅಸ್ವಸ್ಥರಾಗಿದ್ದು, ಅವರನ್ನು ಕಾರವಾರದ ಕಿಮ್ಸ ಆಸ್ಪತ್ರೆಗೆ ಬುಧುವಾರ ದಾಖಲಿಸಲಾಗಿದೆ. ರವಿವಾರ ಬೆಳಿಗ್ಗೆ 9-30ರ ಸುಮಾರಿಗೆ ಕೃಷ್ಣ ಬೀರಾ ಗೌಡರಿಗೆ ಹಾವು ಕಚ್ಚಿತ್ತು. ತಕ್ಷಣ ಅವರನ್ನು ಗೋಕರ್ಣದ ಸಕರ್ಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬದವರು ಕಚ್ಚಿದ ಹಾವನ್ನು ಸಹ ಆಸ್ಪತ್ರೆಗೆ ತಂದಿದ್ದರು. ಕೃಷ್ಣ ಗೌಡನ ಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ವೈದ್ಯರು ಒಳ್ಳೆಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಸೋಮವಾರ ಕೃಷ್ಣ ಗೌಡರನ್ನುಅಂಕೋಲಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸಹ ಅವರ ಆರೋಗ್ಯ ಸುಧಾರಿಸಿದ ಕಾರಣ ಬುಧುವಾರ ಕಾರವಾರ ಕಿಮ್ಸಗೆ ತಂದು ದಾಖಲಿಸಲಾಗಿದೆ. ಅಂಕೋಲಾದಿಂದ ಕಾರವಾರಕ್ಕೆ ಕೃಷ್ಣ ಗೌಡರನ್ನು ತರಲು ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಸಹಾಯ ಮಾಡಿದ್ದರು. ಅಲ್ಲದೇ ಹಾವು ಕಚ್ಚಿದ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆ ಗೋಕರ್ಣದ ಪೊಲೀಸರಿಗೆ ಮಾಹಿತಿ ನೀಡಿದರು. ಹಾವು ಕಚ್ಚಿದ ಸಂಬಂಧ ಗೋಕರ್ಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೃಷ್ಣ ಬೀರಾ ಗೌಡರಿಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.
ಆರೋಗ್ಯ ಪರಿಸ್ಥಿತಿ ಚಿಂತಾಜನಕ: ಹಾವು ಕಚ್ಚಿರುವ ಕೃಷ್ಣ ಬೀರಾ ಗೌಡರ ಆರೋಗ್ಯ ಸ್ಥೀತಿ ಗಂಭೀರವಾಗಿದೆ. ಎಲ್ಲಾ ಚಿಕಿತ್ಸೆ ನೀಡಿ ಐಸಿಯುನಲ್ಲಿ ಅವರನ್ನು ಇರಿಸಲಾಗಿದೆ. 24 ತಾಸುಗಳ ತನಕ ಏನನ್ನು ಹೇಳಲಾಗದು ಎಂದು ಕಾರವಾರ ಕಿಮ್ಸ ವೈದ್ಯರು ತಿಳಿಸಿದ್ದಾರೆ.