ವೀರ ಯೋಧರಿಗೆ ದೇಶದ ರಕ್ಷಣೆಯೇ ಮುಖ್ಯ ಗುರಿಯಾಗಿರುತ್ತದೆ: ಶಫಿ ಹೊಸಕಟ್ಟಿ

ವೀರ ಯೋಧರಿಗೆ ದೇಶದ ರಕ್ಷಣೆಯೇ ಮುಖ್ಯ ಗುರಿಯಾಗಿರುತ್ತದೆ: ಶಫಿ ಹೊಸಕಟ್ಟಿ  The main goal of brave soldiers is to protect the country: Shafi Hosakatti

"ಪ್ರಿಯದರ್ಶನಿ" ಚಿಕ್ಕ ಉದ್ಯಮದಾರರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ   

ರಾಣೇಬೆನ್ನೂರು : ಅ 17 ಭಾರತ ದೇಶದ ಭದ್ರತೆಗೆ ಯುದ್ಧಭೂಮಿಯಲ್ಲಿ ವೀರ ಯೋಧರು ಹಗಲಿರಳು ಶ್ರಮಿಸುತ್ತಿದ್ದಾರೆ. ಅಂಥವರ ತ್ಯಾಗ ಮತ್ತು ಪರಿಶ್ರಮ ದೇಶದ ಪ್ರತಿಯೊಬ್ಬ ನಾಗರಿಕರು ಅಭಿನಂದಿಸಲೇ ಬೇಕಾಗಿದೆ ಎಂದು ವೀರಯೋಧ ರಾಣೇಬೆನ್ನೂರಿನ ಶಫಿ ಅಹಮದ್ ಹೊಸಕಟ್ಟಿ ಹೇಳಿದರು.  

ಅವರು, ನಗರದ ಪ್ರಧಾನ ಅಂಚೆ ಕಚೇರಿ ಬಳಿಯ, ನಗರ ಸಭೆ ನಿರ್ಮಿತ  ಸ್ವಾಮಿ ವಿವೇಕಾನಂದ ವಾಣಿಜ್ಯ ಮಳಿಗೆಗಳ, "ಪ್ರಿಯದರ್ಶಿನಿ" ಚಿಕ್ಕ  ಉದ್ಯಮದಾರರ ಸಂಘವು ಆಯೋಜಿಸಿದ್ದ, 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.    ಯುದ್ಧ ಭೂಮಿಯಲ್ಲಿ ಕರ್ತವ್ಯ ನಿಭಾಯಿಸುವ ಯಾವುದೇ ಯೋಧರಿರಲಿ ಅವರಲ್ಲಿ ತಂದೆ, ತಾಯಿ, ತಮ್ಮ ಕುಟುಂಬ ಹಾಗೂ  ಯಾವುದೇ ಜಾತಿ, ಮತ,  ಭೇದ,ಭಾವ ಇರುವುದಿಲ್ಲ, ಅವರ ಏಕೈಕ ಗುರಿ ಯುದ್ಧಭೂಮಿಯಲ್ಲಿ ನಿಂತು ದೇಶ ರಕ್ಷಣೆ ಮಾಡುವುದೊಂದೇಯಾಗಿರುತ್ತದೆ  ಎಂದರು. ದೇಶದಲ್ಲಿ ಹುಟ್ಟಿದ್ದೇವೆ, ನಂತರ ಪ್ರತಿಯೊಬ್ಬರೂ ಸಾಯಲೇಬೇಕು. ಸಾವಿಗೆ ಹೆದರಬಾರದು. ಭವಿಷ್ಯದ ಮಕ್ಕಳು ದೇಶ ಮತ್ತು ನಾಡಿನ  ಅಭಿಮಾನ ಆಯಾ ಭಾಷೆ,ನಾಡು, ನುಡಿ, ಗುಡಿ ಮತ್ತು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿಸಿಕೊಂಡು ಮಾತೃ ಭೂಮಿಗೆ  ಶರಣಾಗಿ ನೆಲದ ಕಾನೂನಿಗೆ ತಲೆಬಾಗಿ   ಗೌರವ ನೀಡಿ, ಬದುಕಿ ಬಾಳಿದಾಗ ಮಾತ್ರ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಸಾಧ್ಯವಾಗುವುದು ಎಂದರು.       

ತಮ್ಮನ್ನು ಯುದ್ಧ ಭೂಮಿಗೆ ಕಳಿಸುವಾಗ ಮಾಡುವ ವೃತ್ತಿ   ಯಾವುದೇ ಇರಲಿ ಅಲ್ಲಿ ಪ್ರತಿಯೊಬ್ಬ ಯೋಧರು  ಕರ್ತವ್ಯ ನಿಭಾಯಿಸಲೇಬೇಕು. ತಾವು 23 ವರ್ಷಗಳ ಕಾಲ ಜಮ್ಮು, ಕಾಶ್ಮೀರ್, ಅರುಣಾಚಲ ಪ್ರದೇಶ ಪಂಜಾಬ್, ರಾಜಸ್ಥಾನ್ ಮತ್ತು ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿ ತಾಯಿನಾಡಿಗೆ ಮರಳಿದ್ದು, ಅತ್ಯಂತ ಸಂತೋಷವಿದೆ, ನಾನು ಒಬ್ಬ ಯೋಧ ಎನ್ನುವುದು ಹೆಮ್ಮೆಯಿದೆ  ಎಂದರು. 79ನೇ  ಧ್ವಜಾರೋಹಣದ ಅಧ್ಯಕ್ಷತೆ ವಹಿಸಿದ್ದ, ಸಂಘದ ಅಧ್ಯಕ್ಷ ಹನುಮಂತಪ್ಪ ಹಾವನೂರು, ಅವರು ವೀರಯೋಧ ಶಫಿ ಅಹಮದ್ ಹೊಸಕಟ್ಟಿ ಅವರನ್ನು ಅಭಿನಂದಿಸಿ, ನಾಗರೀಕ ಸನ್ಮಾನ ನೀಡಿ ಗೌರವಿಸಿದರು. ಕಾರ್ಯದರ್ಶಿ, ಶ್ರೀನಿವಾಸ್ ರಾಯಚೂರು ಅವರು, ಧ್ವಜಾರೋಹಣ ನೆರವೇರಿಸಲು ಆಹ್ವಾನಿಸಿ, ಸ್ವಾಗತಿಸಿದರು. ಸಂಘದ ಗೌರವ ಸದಸ್ಯ ಕೆ.ಎಸ್‌. ನಾಗರಾಜ್  ಸಂಘಟನೆ ನಡೆದು ಬಂದ ದಾರಿ  ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ, ಸಂಘಟನೆಯ ಮುಖಂಡರಾದ ಅಶೋಕ ಟಿಕಾರೆ, ಶ್ರೀಕಾಂತ ಭೂತೆ, ಬಸವರಾಜ ಬಿಸಲಹಳ್ಳಿ, ಮಿಥುನ ಟಿಕಾರೆ, ಸುನಿಲ್ ಭೂತೆ, ಶ್ರೀಪಾದ್ ಕೋಟಿ, ಪತ್ರಕರ್ತ ಎಂ ಚಿರಂಜೀವಿ,ಪವನ್ ಸೋಳಂಕೆ, ಮಂಜುನಾಥ ಶಿಗ್ಗಾವಿ, ಸಾಗರ ಗುಜ್ಜರ್, ಸಿಕಂದರ್ ಪಾಣಿಗಟ್ಟಿ, ಜಾಫರ್ ಷರೀಫ್ ಅಶೋಕ ರಾಯಚೂರ, ಗೌಸಸಾಬ್ ನಾಲಬಂದ್  ಸೇರಿದಂತೆ ಬಾಪೂಜೆ ವೃತ್ತದಲ್ಲಿರುವ ಹಿರಿಯ ಮತ್ತು ಕಿರಿಯ ವಿವಿಧ ಉದ್ಯಮಗಳ  ವ್ಯಾಪಾರಸ್ಥರು, ಗಣ್ಯರು ಪಾಲ್ಗೊಂಡಿದ್ದರು  ಶಿವಾ ಟಿಕಾರೆ ನಿರೂಪಿಸಿ ವಂದಿಸಿದರು. ನಂತರ ನೂರಾರು ಮಕ್ಕಳಿಗೆ ಸಿಹಿ ಹಂಚಲಾಯಿತು.