ಅಜರ್ಿ ಕೊಟ್ಟ ದಿನವೇ ಸಾಲ ಮಂಜೂರು: ಅಧ್ಯಕ್ಷ ಬಳ್ಳಾರಿ
ಬಾಗಲಕೋಟೆ: ಸರಕಾರಿ ನೌಕರರು ರಜೆ ದಿನವನ್ನು ಹೊರತು ಪಡಿಸಿದರೆ ಉಳಿದೆಲ್ಲ ದಿನಗಳನ್ನು ಕಚೇರಿಯಲ್ಲಿ ಕಳೆಯುತ್ತಿದ್ದು, ಇದರಿಂದ ಸಂಸಾರದತ್ತ ಗಮನ ಹರಿಸದ ಕಾರಣ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸರಳ ಸಾಲ ಕೊಡುವ ಕಾರ್ಯ ಆರೋಗ್ಯ ಇಲಾಖೆಯ ನೌಕರರ ಪತ್ತಿನ ಸಂಘದಿಂದ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರಿ ನೌಕರರ ಜಿಲ್ಲಾ ಘಟಕ ಅಧ್ಯಕ್ಷ ಎಂ.ಬಿ.ಬಳ್ಳಾರಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆರೋಗ್ಯ ಇಲಾಖೆಯ ಸಭಾಭವನದಲ್ಲಿಂದು ಜರುಗಿದ ಕಳೆದ ಸಾಲಿನ ವಾಷರ್ಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಖಂಡ ವಿಜಯಪುರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದ ಈ ಪತ್ತಿನ ಸಂಘ 1997 ರಲ್ಲಿ ಬಾಗಲಕೋಟೆ ಸ್ವತಂತ್ರ ಜಿಲ್ಲೆಯಾದಾಗ ವಿಜಯಪುರದ ಸಂಘದವರು ನಮಗೆ ಸ್ವತಂತ್ರವಾಗಿ ಸಂಘ ನಿರ್ವಹಿಸಲು ಅವಕಾಶ ಕೊಡದ ಹಿನ್ನಲೆಯಲ್ಲಿ ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಸ್.ಹೆಬ್ಬಳ್ಳಿ ಅವರ ಪ್ರೇರಣೆ ಮೇರೆಗೆ ಸ್ವಂತ ಪತ್ತಿನ ಸಂಘ ಸ್ಥಾಪಿಸಲಾಯಿತು ಎಂದರು.
ಇಲಾಖಾ ನೌಕರರು ಇಂದಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಅನೇಕ ವಿವಿಧ ರೀತಿಯ ಕಾಗದ ಪತ್ರ ಹೊಂದಿಸಿ ಕೊಡುವಲ್ಲಿಯೇ ಸಮಯ ಹೋಗುದಲ್ಲದೇ ಸಾಲವೇ ಬೇಡ ಎಂಬ ಮನೋಸ್ಥಿತಿಗೆ ಬಂದ ಹಿನ್ನಲೆಯಲ್ಲಿ ನಮ್ಮ ಇಲಾಖಾ ನೌಕರರ ಹಿತದೃಷ್ಠಿಯಿಂದ ನೌಕರರು ಅಜರ್ಿ ಕೊಟ್ಟ ದಿನದಂದೇ ಸಾಲ ಮಂಜೂರು ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದರು. ಸಂಘವು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗಿರದೇ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ರಾಜ್ಯ ಆಟೋಟಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದರೆ ಅಂತಹ ಮಕ್ಕಳಿಗೆ ಪುರಸ್ಕಾರ ನೀಡುವಂತಹ ಕಾರ್ಯ ಮಾಡಲಾಗುತ್ತಿದೆ ಎಂದರು.
ಸಂಸ್ಥೆಯ ಸದಸ್ಯರು ಸಾಲ ಪಡೆಯುವದರ ಜೊತೆಗೆ ಸಕಾಲಕ್ಕೆ ಮರು ಪಾವತಿಸಿ ತಾವು ಅಭಿವೃದ್ದಿ ಹೊಂದುವದರ ಜೊತೆಗೆ ಸಂಘವನ್ನು ಅಭಿವೃದ್ದಿ ಪಡಿಸಬೇಕು ಎಂದರು. ಪತ್ತಿನ ಸಂಘವು 8 ಲಕ್ಷ ನಿವ್ವಳ ಲಾಭದಲ್ಲಿದ್ದು, 1 ಕೋಟಿ ರೂ.ಗಳ ವ್ಯವಹಾರ ನಡೆಯುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಯಶ್ರೀ ಎಮ್ಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಬಿ.ಡಿ.ಪಟ್ಟಣಶೆಟ್ಟಿ ಸೇರಿದಂತೆ ಸುನಿತಾ ಕಾಳಗಿ. ಸಿ.ಬಿ.ಸೋಲಾಪೂರ, ಎಂ.ಎಚ್.ನಗರುಂದ, ಎಸ್.ಡಿಪಾಟೀಲ, ಎಂ.ಡಿ.ಅಂಬಿಗೇರ ಹಾಗೂ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 