ಬೀಡದ ಮಳೆ ಬಾರದ ಬೆಳೆ ರೈತರನ ಬದುಕು ಮೂರಾಬಟ್ಟೆ : ಸಚೀನ ಇಂಡಿ
The lives of farmers are in danger due to the lack of rain and crop failure: Sachina Indi
ಇಂಡಿ 17: ಭಾರತ ಕೃಷಿ ಪ್ರಧಾನ ದೇಶವಾದಗಿದೆ ಇಲ್ಲಿ ಶೇಕಡಾ ಎಪ್ಪತ್ತು ಐದು ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಗತಿಸಿದರೂ ಕೂಡಾ ರೈತ ಸ್ವಾವಲಂಬನೆ ಜೀವನ ಸಾಧಿಸಲು ಸಾಧ್ಯವಾಗಿದೆ ಇರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದರು ತಪ್ಪಾಗಲಾರದು.ಈ ಬಾರಿ ಮುಂಗಾರು ಮಳೆ ವಾಡಿಕೆಯ ಮುಂಚೆ ಸುರಿದಾಗ ರೈತರು ಹರ್ಷ ವ್ಯಕ್ತವಾಗಿತ್ತು.ರೈತರು ಸಾಲ ಸುಲ ಮಾಡಿ ಬಿತ್ತನೆ ಮಾಡಿದರು ಈ ಬಾರಿ ಉತ್ತಮ ಫಸಲು ಬರಬಹುದು ಎಂಬ ನೀರೀಕ್ಷೆಯಲ್ಲಿ ಇದ್ದ ರೈತನ ಗೋಳು ಮೂರಾಬಟ್ಟೆ ಆಗಿ ಹೋಗಿದೆ ಸಾಲ ಸುಲ ಮಾಡಿ ಬಿತ್ತನೆ ಮಾಡಿದ ರೈತನ ಬೆಳೆ ಈ ಬಾರಿ ಸುರಿದ ಮಳೆಯಿಂದ ಬೆಳೆ ಕಳೆದುಕೊಳ್ಳುವ ಸ್ಥಿತಿ ಏರ್ಪಟಟಿದೆ.
ಏನೋ ಅಂತಾರಲ್ಲಾ ದೇವರ ವರ ಕೊಟ್ಟರು ಪೂಜಾರಿ ವರ ಕೊಡಲ್ಲ ಎನ್ನುವ ಹಾಗೆ ರೈತರ ಗೋಳು,ಇತ್ತ ಮಾಡಿದ ಸಾಲ ತೀರಿಸಲು ಸಾಧ್ಯವಿಲ್ಲ ಸ್ಥಿತಿಯಲ್ಲಿ ಇದ್ದಾನೆ ರೈತ.ಬರೇ ಕೃಷಿಯನ್ನೇ ನಂಬಿ ಮಕ್ಕಳ ಹಾಗೂ ಕುಟುಂಬವನ್ನು ಬದಿಕಿಸಲು ಸಾಧ್ಯವಾಗಿದೆ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ ರೈತ.ಆದರೆ ರೈತನ ಬಗ್ಗೆ ಸರ್ಕಾರದ ಕಥೆನೇ ಬೇರೆ ಹಾಗಾದರೆ ಆ ಕಥೆ ಏನು?ಅಂತ ತಾವು ಕುತುವಲದಲ್ಲಿ ಇರಬಹುದು? ಅದನ್ನೇ ಹೇಳುತ್ತಿವಿ ನೋಡಿ ಸರ್ಕಾರ ಬೆಳೆ ಹಾನಿ ಆದ ಬಗ್ಗೆ ಮಾಡಿದ್ದು ಆಯಿತು. ಆದರೆ ರೈತರಿಗೆ ಶೀಘದಲ್ಲಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತಿದೆ ಆದರೆ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ.ಇದು ಒಂದು ಕಥೆ ಆದರೆ ಇನ್ನೊಂದು ಕತೆ ಕಥೆನೇ ಬೇರೆ ಇದೆ ಅದು ಏನು ಅಂತಿರಾ ಅದನ್ನು ಹೇಳುತ್ತಿವಿ ನೋಡಿ ಪ್ರಧಾನ ಮಂತ್ರಿ ಭೀಮಾ ಫಸಲು ವಿಮೆ ಯೋಜನೆ ಅಡಿಯಲ್ಲಿ ಸಾಕಷ್ಟು ರೈತರು ಬೆಳೆ ವಿಮೆ ಕೊಟ್ಟಿದ್ದಾರೆ. ಅಧಿಕಾರಿಗಳು ರೈತರಿಂದ ಬೆಳೆ ವಿಮೆ ಕಟ್ಟಿಕೊಳ್ಳುವಾಗ ಇರುವ ಕಾಳಜಿ ರೈತರು ಬೆಳೆ ಹಾನಿಯಾದಾಗ ರೈತರು ಬೆಳೆ ವಿಮೆ ಬಗ್ಗೆ ಮಾಹಿತಿ ಕೇಳಿದಾಗ ಸರಿಯಾಗಿ ಸ್ಪಂದನೆ ಆಗುತ್ತಿಲ್ಲ ಅಂತಾರೆ ರೈತರು. ರೈತರು ಬೆಳೆ ಹಾನಿ ಆದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನೀವು ವಿಮೆ ಕಂಪನಿ ಕರೆ ಮಾಡಿ ಅವರೇ ನಿಮ್ಮ ಹೊಲಕ್ಕೆ ಬಂದು ಹಾನಿ ಬಗ್ಗೆ ಪರೀಶೀಲನೆ ಮಾಡುತ್ತಾರೆ ಎಂದು ಹೇಳಿ ಜಾರಿ ಕೊಳ್ಳುತ್ತಾರೆ.ರೈತರು ಬೆಳೆ ವಿಮೆ ಕಂಪನಿ ಟೂಲ್ ನಂಬರಿಗೆ ಕರೆ ಮಾಡಿದರೆ ಬೀಜಿ ಬರುತ್ತದೆ.ಆದರೆ ಇನ್ನೂ ಎಷ್ಟೋ ರೈತರು ಬೆಳೆ ಹಾನಿ ಆದರೂ ಕೂಡಾ ಬೆಳೆ ವಿಮೆ ಕಂಪನಿಗೆ ಕರೆ ಮಾಡಿಲ್ಲ ಏನೆ ಇರಲ್ಲಿ ಯಾವ ಸರ್ಕಾರವೂ ಅಧಿಕಾರಕ್ಕೆ ಬಂದರೂ ಕೂಡಾ ರೈತರು ಸ್ವಾವಲಂಬನೆ ಜೀವನ ಸಾಧಿಸಲು ಸಾಧ್ಯವಾಗುತ್ತಿಲ್ಲ.
ರೈತರು ಕಟ್ಟಿದ ಬೆಳೆ ವಿಮೆ ಬರುತ್ತಿಯೋ ಇಲ್ಲ ಎಂಬ ಆತಂಕದಲ್ಲಿ ಇದ್ದಾನೆ ರೈತ,ಈಗಲಾದರೂ ಕೂಡಾ ಸರ್ಕಾರ ಮಧ್ಯೆ ಪ್ರವೇಶಿಸಿ ಬೆಳೆ ಕಳೆದುಕೊಳ್ಳುವ ರೈತರಿಗೆ ವಿಮೆ ಬರುವಂತೆ ಮಾಡಿಲಿ ಎಂಬುದು ರೈತರ ಅಳಲು.1) *ಕಾಸುಗೌಡ ಬಿರಾದಾರ ಬಿಜೆಪಿ ಹಿರಿಯ ಮುಖಂಡರು ಇಂಡಿ*ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.ಈ ಬಾರಿ ಇಂಡಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಆಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಭೀಮಾ ಫಸಲು ವಿಮೆ ಯೋಜನೆಯನ್ನು ಸಮರ್ಕವಾಗಿ ಅಧಿಕಾರಿಗಳು ಹಾಗೂ ಕಂಪನಿಯವರು ಜಂಟಿಯಾಗಿ ಸರ್ವೆ ಮಾಡಿ ಬೆಳೆ ಹಾನಿಗೊಳಗಾದ ರೈತರಿಗೆ ಶೀಘದಲ್ಲಿ ಬೆಳೆ ವಿಮೆ ಹಣ ನೀಡಬೇಕು. 2) ಸುನಂದಾ ವಾಲಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಡವಲಗಾ*ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರದ ಅರವತ್ತು ನಾಲ್ಕು ಜನ ರೈತರು ವಿಮೆ ಕೊಟ್ಟಿದ್ದಾರೆ ಸರ್ಕಾರಿ ಅಧಿಕಾರಿಗಳು ಹಾಗೂ ವಿಮೆ ಕಂಪನಿ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಬೆಳೆ ಕಳೆದುಕೊಂಡ ನೊಂದ ರೈತರಿಗೆ ಈ ಬೆಳೆ ವಿಮೆ ಹಣ ಬರುವಂತೆ ನೋಡಿಕೊಳ್ಳಲಿ ಹಾಗೂ ಕಳೆದ ವರ್ಷ ಕೂಡಾ ಮಳೆ ಅಭಾವದಿಂದ ಬೆಳೆ ಕಳೆದುಕೊಂಡ ತಡವಲಗಾ ಗ್ರಾಮದ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ.3) *ಮಾದೇವಪ್ಪ ಏವೂರ ಸಾಹಯಕ ಕೃಷಿ ನಿರ್ದೇಶಕರು ಇಂಡಿ ಇಂಡಿ ತಾಲ್ಲೂಕಿನ್ಯಾದಂತ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆ ಆಗಿದೆ ಶೇಕಡಾ ಮೂವತ್ತು ರಷ್ಟು ಬೆಳೆ ಹಾನಿಯಾಗಿದೆ.ಹಾಗೂ ತಗ್ಗು ಪ್ರದೇಶದಲ್ಲಿ ನೀರು ನಿಂತು ಬೆಳೆ ಕಳೆದುಕೊಳ್ಳುವ ಸ್ಥಿತಿ ಏರ್ಪಟಟಿದೆ.ಈ ಬಾರಿ ಇಂಡಿ ತಾಲ್ಲೂಕಿನಲ್ಲಿ ಹನ್ನೊಂದು ಸಾವಿರದ ಎರಡೂ ನೂರ ಹದಿನಾಲ್ಕು ರೈತರು ಬೆಳೆ ವಿಮೆ ಕೊಟ್ಟಿದ್ದಾರೆ.ಬೆಳೆ ಹಾನಿಯಾದ ಎಪ್ಪತ್ತು ಎರಡು ಗಂಟೆಯಲ್ಲಿ ರೈತರು ಬೆಳೆ ವಿಮೆ ಕಂಪನಿಯವರಿಗೆ ಮಾಹಿತಿ ನೀಡಬೇಕು. 4) *ಚನ್ನಬಸಪ್ಪ ಝಳಕಿ ವಿಮೆ ಕಂಪನಿ ಪ್ರತಿನಿಧಿ ಇಂಡಿ ತಾಲೂಕು*ಹಾನಿಯಾದ 72 ಗಂಟೆಗೊಳಗಾಗಿ ವಿಮೆ ಕಂಪನಿ ಟೋಲ್ 18004256678 ಈ ನಂಬರಿಗೆ ದೂರು ದಾಖಲಿಸಬೇಕು.ಈ ಬಾರಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ರೈತರು ಬೆಳೆ ವಿಮೆ ಕೊಟ್ಟಿದ್ದಾರೆ. ಇವತ್ತಿನ ವರಿಗೆ ಒಂದು ಸಾವಿರ ರೈತರು ಮಾತ್ರ ದೂರು ದಾಖಲು ಮಾಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 