ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರ: ಶ್ರೀಶೈಲಶ್ರೀ

ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರ: ಶ್ರೀಶೈಲಶ್ರೀ The light of Shiva knowledge removes the bondage of human existence: Srisailashree

ಮಾಂಜರಿ 20: ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಹೃದಯ ಭಗವಂತನಿಗಿರುವ ಗುಡಿ. ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರವಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವಸ್ಥಾನ ಮತ್ತು ಕಾಡ ಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು. 

ಗುರುವಾರರಂದು ಚಿಕ್ಕೋಡಿ  ತಾಲೂಕಿನ ಯಡೂರ ಗ್ರಾಮದಲ್ಲಿ ವೀರಭದ್ರ ದೇವಸ್ಥಾನ ಕಾಡದೇವರ ಮಠ ರಾಜಗೋಪುರ ಲೋಕಾರೆ​‍್ಣ ಲಕ್ಷ ದೀಪೋತ್ಸವ ಹಾಗೂ ಕೃಷ್ಣಾರತಿ ಮತ್ತು ಮಹಾಕುಂಭ ಅಭಿಷೇಕ ಕಾರ್ಯಕ್ರಮದ ನಿಮಿತ್ಯವಾಗಿ ವೀರಭದ್ರ ಮತ್ತು ಭದ್ರಕಾಳಿ ತುಲಾ ಬಾರ್ ಮತ್ತು ಗುಡ್ಡಾಪುರ್ ದಾನಮ್ಮ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಸ್ವಾಮೀಜಿಗಳು  ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮ ನಿಜವಾದ ಸಂಪತ್ತು. ದೇವರಿಲ್ಲದ ಜಾಗ ಎಲ್ಲಿಯೂ ಇಲ್ಲ. ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಬೀಜ ಬಿತ್ತಿ ಮಾಧುರ್ಯದ ಫಲಗಳನ್ನು ಪಡೆದುಕೊಳ್ಳಬೇಕು. ಆಸೆ, ಆಮಿಷ ಅಳಿದುಎಚ್ಚರದಿಂದ ಈ ಭವಸಾಗರ ದಾಟಬೇಕಾಗಿದೆ. ದುಷ್ಟ ಜನರ ಸಹವಾಸ ಬಿಟ್ಟು ಭವಬಂಧನ ಬಿಡಿಸುವ ಗುರುವನ್ನು ಕೂಡಿ ಬಾಳೋ ಎಂದು ಮಹಾನುಭಾವರು ಎಚ್ಚರಿಸಿದ್ದಾರೆ ಎಂದರು. 

ಸಾಯಂಕಾಲ 6 ರಿಂದ 8ರವರೆಗೆ ಬಡೂರ್ ಇಲಕಲ್ ಮಠದ ಅನ್ನದಾನ ಶಾಸ್ತ್ರಿಗಳು ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ನೀಡಿದರು. ಸಮಾರಂಭದ ದಿವ್ಯ ನೇತೃತ್ವವನ್ನು ಅಂಬಿಕಾ ನಗರದ ಈಶ್ವರ ಪಂಡಿತರಾದ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಕಲಿಯ ಗೋಮ್ಮಟೇಶ  ಶಿಕ್ಷಣ ಸಂಸ್ಥೆಯ ಡಾ. ಎನ್ ಎ ಮಗದುಮ್ ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಗೌಡ ಪಾಟೀಲ್ ಅಮರ್ ಯಾದವ್, ಸುರೇಶ್ ಪಾಟೀಲ್, ಬಸವರಾಜ್ ಕರಾಡ್ಕರ್, ನರಸಗೌಡ ಪಾಟೀಲ್, ಲಕ್ಷ್ಮಣ್ ಹಕಾರೆ, ಮಾಂದ್ರಿಯ ಪ್ರಖಾತ್, ವೈದ್ಯರಾದ ಶಾಮಗೌಡ ಪಾಟೀಲ್, ನಿಜ ಗೌಡ ಪಾಟೀಲ್, ಪಾಂಡುರಂಗ ಮಾನೆ, ವಿಶಾಲ್ ಪಾಟೀಲ್, ಅಣ್ಣ ಸಾಹೇಬ್ ಸಂಕೇಶ್ವರೀ, ಬಸವಾಣಿ ನರವಾಡೇ, ಮಾಂಜರಿ ಗ್ರಾ ಪಂ ಉಪಾಧ್ಯಕ್ಷ ಸಂಜಯ್ ನರವಾಡೇ, ಹಿರಾ ಸುಗರ್ ಸಕ್ಕರೆ ಕಾರ್ಖಾನೆಯ ಶಿವನಾಯಕ್ ನಾಯಕ್ ಯುವರಾಜ್ ಪಾಟೀಲ್ ಹಾಗೂ ಹಿನ್ನೆಲೆಗಳನ್ನು ಸನ್ಮಾನಿಸಲಾಯಿತು.  

ಯಡೂರ್ ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪ ಸಾಹೇಬ ಬೆಳವಿ ದಾಂಪತ್ಯ ಮತ್ತು ಕುಟುಂಬ ಸಮೇತ ವೀರಭದ್ರ ಭದ್ರಕಾಳಿ ದೇವರ ತುಲಾಭಾರವನ್ನು ಮಾಡಲಾಯಿತು. ವೀರಭದ್ರ ದೇವರ ಅಸಂಖ್ಯ ಭಕ್ತಾದಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಮಲ್ಲಪ್ಪ ಸಿಂದೂರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.