ಮರ ಬಿದ್ದು ಕುಸಿದ ಬಡವನ ಬದುಕು: ಸ್ವಂತ ಖರ್ಚಿನಲ್ಲಿ ನೆರವಾದ ಸದಸ್ಯ ಮಹಾಂತೇಶ್; ಸಚಿವರ ಭೇಟಿಗೆ ಸಂತ್ರಸ್ತರ ನೀರೀಕ್ಷೆ!
The life of a poor man who was devastated by a falling tree: Member Mahantesh helped at his own expe
ಗದಗ 23: ಜಿಲ್ಲೆಯಾದ್ಯಂತ ಇತ್ತೀಚೆಗೆ ಸಂಭವಿಸಿದ ಭೀಕರ ಬಿರುಗಾಳಿ ಮಳೆಯ ರೌದ್ರಾವತಾರಕ್ಕೆ ಸಿಲುಕಿ, ಇಲ್ಲಿನ ನಗರಸಭೆ 19ನೇ ವಾರ್ಡ್ ವ್ಯಾಪ್ತಿಯಲ್ಲಿ ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ದೈತ್ಯ ಆಲದ ಮತ್ತು ಬೇವಿನ ಮರವು ನಾಸೀರುದ್ದೀನ್ ಮುಲ್ಲಾ ಎಂಬುವವರ ಮನೆ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಇಡೀ ವಾಸದ ಮನೆ ಸಂಪೂರ್ಣವಾಗಿ ಜಖಂಗೊಂಡಿದ್ದು, ಬಡ ಕುಟುಂಬ ಬೀದಿಗೆ ಬಿದ್ದಿದೆ. ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಾರ್ಡಿನ ಜನಪ್ರಿಯ ನಗರಸಭೆ ಸದಸ್ಯರಾದ ಮಹಾಂತೇಶ್ ನೆಲೋಡಿ ಅವರು, ಇಡೀ ಆಡಳಿತ ಯಂತ್ರವನ್ನು ಸ್ಥಳಕ್ಕೆ ಕರೆತಂದು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ನೊಂದ ಕುಟುಂಬಕ್ಕೆ ಆಸರೆಯಾಗಿದ್ದಾರೆ. *ಕ್ರೇನ್ ಮೂಲಕ ತೆರವಿಗೆ ಪೌರಾಯುಕ್ತರ ಭರವಸೆ:* ನಗರಸಭೆ ಸದಸ್ಯ ಮಹಾಂತೇಶ್ ನೆಲೋಡಿ ಅವರ ತ್ವರಿತ ಮುಂದಾಳತ್ವದಲ್ಲಿ ನಗರಸಭೆ ಪೌರಾಯುಕ್ತರು, ಹಿರಿಯ ಅಧಿಕಾರಿಗಳು ಫಾರೆಸ್ಟರ್ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಸಿಬ್ಬಂದಿ ವರ್ಗ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿತು. ಬಿದ್ದಿರುವ ಮರವು ಅತ್ಯಂತ ಬೃಹದಾಕಾರದ್ದಾಗಿದ್ದರಿಂದ, ಅದರ ದೊಡ್ಡ ಬುಡವನ್ನು ಸ್ಥಳಾಂತರಿಸಲು ಜೆಸಿಪಿ ಯಂತ್ರಕ್ಕೂ ಸಾಧ್ಯವಾಗಲಿಲ್ಲ. ಇದಕ್ಕಾಗಿ ಬೃಹತ್ ಕ್ರೇನ್ ನೆರವು ಅನಿವಾರ್ಯವಾಗಿದ್ದರಿಂದ, ಸದ್ಯಕ್ಕೆ ಬುಡವನ್ನು ಹೊರತುಪಡಿಸಿ ಉಳಿದೆಲ್ಲಾ ರೆಂಬೆ-ಕೊಂಬೆಗಳನ್ನು ಪೌರಕಾರ್ಮಿಕರ ಸಹಾಯದಿಂದ ಸಂಪೂರ್ಣವಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇನ್ನೆರಡು ದಿನಗಳಲ್ಲಿ ಕ್ರೇನ್ ಸಹಕಾರದೊಂದಿಗೆ ಉಳಿದಿರುವ ದೊಡ್ಡ ಬುಡವನ್ನೂ ಸಹ ತೆರವು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ. *ಮಾನವೀಯತೆ ಮೆರೆದ ಜನಪ್ರಿಯ ಸದಸ್ಯ:* ಆಪತ್ಕಾಲದಲ್ಲಿ ಸಂಕಷ್ಟಕ್ಕೀಡಾದ ಕುಟುಂಬದ ಜೊತೆಯಾಗಿ ನಿಂತು, ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಧೈರ್ಯ ತುಂಬಿದ ಮಹಾಂತೇಶ್ ನೆಲೋಡಿ ಅವರು, ಸಂತ್ರಸ್ತರ ತಕ್ಷಣದ ಸಣ್ಣಪುಟ್ಟ ಅಗತ್ಯಗಳನ್ನು ಮತ್ತು ತೆರವು ಕಾರ್ಯದ ಕೆಲವು ತುರ್ತು ವೆಚ್ಚಗಳನ್ನು ತಮ್ಮ ಸ್ವಂತ ಖರ್ಚಿನಿಂದಲೇ ಭರಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಸಕಾಲಿಕ ಜನಪರ ಸ್ಪಂದನೆಗೆ ವಾರ್ಡಿನ ಸಾರ್ವಜನಿಕರು ತೀವ್ರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತ ಕುಟುಂಬದ ಯಜಮಾನ ನಾಸೀರುದ್ದೀನ್ ಮುಲ್ಲಾ ಹಾಗೂ ಅವರ ಕುಟುಂಬಸ್ಥರು, "ನಮ್ಮ ಬದುಕು ಕಣ್ಣೆದುರೇ ಕುಸಿದು ಬಿದ್ದಾಗ ತಕ್ಷಣವೇ ಬಂದು ನಿಂತ ಸದಸ್ಯ ಮಹಾಂತೇಶ್ ನೆಲೋಡಿ ಅವರ ಕ್ರಮಕ್ಕೆ, ನಗರಸಭೆ ಮತ್ತು ಫಾರೆಸ್ಟರ್ ಅಧಿಕಾರಿಗಳಿಗೆ ಹಾಗೂ ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರಾದ ಹೇಮೇಶ್ ಮತ್ತು ಒಟ್ಟಾರೆ ಸಿಬ್ಬಂದಿ ವರ್ಗಕ್ಕೆ ನಾವು ಸದಾ ಕೃತಜ್ಞರಾಗಿರುತ್ತೇವೆ" ಎಂದು ಹೃತ್ಪೂರ್ವಕ ಧನ್ಯವಾದ ಅರ್ಿಸಿದ್ದಾರೆ. *ಭರವಸೆಯ ಬೆಳಕಿಗಾಗಿ ಸಚಿವರ ಭೇಟಿಗೆ ಕಾಯುತ್ತಿರುವ ಕುಟುಂಬ:* ಮನೆ ಸಂಪೂರ್ಣ ಹಾನಿಯಾಗಿ, ಇಡೀ ಕುಟುಂಬ ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ಜಿಲ್ಲೆಯ ಪ್ರಭಾವಿ ಹಾಗೂ ಸದಾ ಜನಪರ ಕಳಕಳಿಯುಳ್ಳ ಹಿರಿಯ ಸಚಿವರಾದ ಎಚ್.ಕೆ. ಪಾಟೀಲರು, ಹಿರಿಯರಾದ ಡಿ.ಆರ್. ಪಾಟೀಲರು ಹಾಗೂ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲರು ಅತಿ ಶೀಘ್ರದಲ್ಲಿಯೇ ನಮ್ಮ ಮನೆಗೆ ಭೇಟಿ ನೀಡಲಿದ್ದಾರೆ ಎನ್ನುವ ಬಲವಾದ ನಂಬಿಕೆಯಲ್ಲಿ ಕುಟುಂಬ ಕಾಯುತ್ತಿದೆ. "ನಮ್ಮ ಇಡೀ ಬದುಕು ಕಣ್ಣೆದುರೇ ಕುಸಿದು ಬಿದ್ದಿದೆ. ಜಿಲ್ಲೆಯ ಧೀಮಂತ ನಾಯಕರುಗಳು ನಮ್ಮ ಕಷ್ಟಗಳಿಗೆ ಸ್ಪಂದಿಸಿ, ಮುಂದಿನ ಜೀವನಕ್ಕೆ ಆಸರೆಯಾಗುತ್ತಾರೆ ಎನ್ನುವ ದೊಡ್ಡ ಭರವಸೆ ಅವರದ್ದಾಗಿದೆ. ಸಂಕಷ್ಟದಲ್ಲಿರುವ ನಮಗೆ ಅವರ ಆಶ್ವಾಸನೆ ಮತ್ತು ಭೇಟಿಯೊಂದೇ ಈಗಿರುವ ಏಕೈಕ ಆಶಾಕಿರಣವಾಗಿದೆ" ಎಂದು ನೊಂದ ಮುಲ್ಲಾ ಕುಟುಂಬವು ಭಾವುಕರಾಗಿ ನುಡಿದಿದೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 