ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ಮಹಾಶಿವರಾತ್ರಿ ಉತ್ಸವ: ಎರಡು ದಿನಗಳ ವೈಭವಯುತ ಆಚರಣೆ!
The legendary Ramalingeshwara Mahashivratri festival: A two-day grand celebration!
ಲೋಕದರ್ಶನ ವರದಿ
ಮುಂಡಗೋಡ 15 : ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಮದ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಈ ವರ್ಷವೂ ಅತ್ಯಂತ ಭಕ್ತಿಭಾವದಿಂದ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಮಹಾಶಿವರಾತ್ರಿಯಂದು ಬೆಳಿಗ್ಗೆ 7.00 ಗಂಟೆಯಿಂದ ದೇವರಿಗೆ ಅಭಿಷೇಕ, ಕುಂಕುಮಾರ್ಚನೆ, ಮಂಗಳಾರತಿ, ಹಣ್ಣು-ಕಾಯಿ ಸೇವೆ, ಬಿಲ್ವಪತ್ರೆ ಅರ್ಚನೆ, ರುದ್ರ ಹವನ, ಉರುಳು ಸೇವೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಐದು ಈಶ್ವರ ಲಿಂಗಗಳಿದ್ದು, ಮಹಾಶಿವರಾತ್ರಿ ದಿನದಂದು ಈ ಲಿಂಗಗಳಿಗೆ ವಿಶೇಷ ಅಭಿಷೇಕ ಮಾಡುವ ಅವಕಾಶವನ್ನು ಭಕ್ತಾದಿಗಳಿಗೆ ನೀಡಲಾಗಿದೆ. ಈ ವರ್ಷ ನೂತನವಾಗಿ ಪ್ರತಿಷ್ಠಾಪನೆಯಾದ ಸೂರ್ಯನಾರಾಯಣ ದೇವರ ಮೂರ್ತಿಗೆ ಸಹ ಮಹಾಶಿವರಾತ್ರಿಯಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಅಕ್ಕಿ ಆಲೂರಿನ ವೈದ್ಯರಾದ ಗುರು ದೇಸಾಯಿ ಹಾಗೂ ಶೋಭಾ ದೇಸಾಯಿ ಅವರ ಕುಟುಂಬದವರು ವ್ಯವಸ್ಥೆ ಮಾಡುತ್ತಿದ್ದಾರೆ. ಹಾಗೆಯೇ ಬಿಸಿಲಕೊಪ್ಪ, ಮಳಗಿ ಹಾಗೂ ಮಾವಿನಕಟ್ಟಾ ಭಾಗಗಳಿಂದ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿದೆ. ರಾತ್ರಿ 10.30 ಗಂಟೆಗೆ ಮಹಾಶಿವರಾತ್ರಿ ಉತ್ಸವದ ಮಹಾ ಮಂಗಳಾರತಿ ನಡೆಯಲಿದೆ. ಮರುದಿನ ಬೆಳಿಗ್ಗೆ 5.00 ಗಂಟೆಗೆ ದೇವರ ಉತ್ಸವ ಮೂರ್ತಿಯೊಂದಿಗೆ ಊರೊಳಗೆ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಗಳೊಂದಿಗೆ, ಕಳಸ ಮೆರವಣಿಗೆಯೊಂದಿಗೆ ಜರುಗಲಿದೆ.
ಅದೇ ದಿನ ಬೆಳಿಗ್ಗೆ 10.30ರಿಂದ ಭಕ್ತರ ಹರಕೆಯಂತೆ ತುಲಾಭಾರ ಸೇವೆ ನಡೆಯುತ್ತದೆ. ಮರುದಿನ ಭಕ್ತರಿಗೆ ದಿವಂಗತ ಮುರುಗಯ್ಯ ಮಾಲಿಂಗಯ್ಯ ಹಿರೇಮಠ್ ಅವರ ಕುಟುಂಬದವರಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ನಡೆಯುತ್ತಿರುವ ಮಹಾಶಿವರಾತ್ರಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ರಾಮಲಿಂಗೇಶ್ವರ ಸೇವಾ ಸಮಿತಿ ಹಾಗೂ ಊರಿನ ಸಾರ್ವಜನಿಕರು ವಿನಂತಿಸಿಕೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 