ಗುರು-ಶಿಷ್ಯ ಪರಂಪರೆ ಶಾಶ್ವತ: ಪ್ರೊ. ನಾಗರಾಜ

ಲೋಕದರ್ಶನವರದಿ

ಹಾವೇರಿ24: ಭಾರತೀಯ ಸಂಸ್ಕೃತಿಯಲ್ಲಿ ಅವಿಚ್ಛಿನ್ನವಾಗಿ ಬೆಳೆದು ಬಂದಿರುವ ಗುರು-ಶಿಷ್ಯ ಪರಂಪರೆಯು ಅಂದು-ಇಂದು-ಮುಂದೆ ಶಾಶ್ವತವಾಗಿ ಇರುವಂತಹುದಾಗಿದೆ ಎಂದು ಶಿಗ್ಗಾಂವಿ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ನಾಗರಾಜ ದ್ಯಾಮನಕೊಪ್ಪ ಅಭಿಪ್ರಾಯಪಟ್ಟರು.  

       ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ವಿಭಾಗಗಳ ಪ್ರಥಮ ವರ್ಷದ ವಿದ್ಯಾಥರ್ಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  

ವಿಶ್ವಕ್ಕೆ ಮಾದರಿ ಸಂದೇಶವನ್ನು ಸಾರಿದ ಭಾರತದಲ್ಲಿ ಗುರುಕುಲ ಪದ್ಧತಿ ಶಿಕ್ಷಣವನ್ನು ಉತ್ತುಂಗಗೊಳಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪುರಾತನ ನಾಗರಿಕತೆ, ಸಂಸ್ಕೃತಿ ಮತ್ತು ಪರಂಪರೆಗಳು ಮಾನವೀಯ ಮೌಲ್ಯಗಳ ವರ್ಧನೆಗೆ ಕಾರಣವಾಗಿವೆ. ಬಾಲ್ಯದಿಂದಲೇ ಮೂಲ ತಳಪಾಯದಂತೆ ಆದರ್ಶ ತತ್ವಚಿಂತನೆಗಳನ್ನು ಮೈಗೂಡಿಸಿಕೊಂಡು ಭವ್ಯ ಭಾರತ ಕಟ್ಟುವಲ್ಲಿ ವಿದ್ಯಾಥರ್ಿಗಳು ಹೆಗಲು ನೀಡಬೇಕಾಗಿದೆ. ಪರಸ್ಪರ ಹೊಂದಾಣಿಕೆ ಮನೋಭಾವ, ಮಾನವೀಯತೆಯ ಅಂಶಗಳ ಅಳವಡಿಕೆ, ಗುರುಹಿರಿಯರ ಬಗ್ಗೆ ಗೌರವ, ನಂಬಿಕೆ, ವಿಶ್ವಾಸಗಳನ್ನು ರೂಢಿಸಿಕೊಂಡು ಜೀವನವನ್ನು ಮುನ್ನಡೆಸಬೇಕಿದೆ. ಸರ್ವಧರ್ಮಗಳಲ್ಲಿ ಸಮನ್ವಯ ಭಾವನೆಯನ್ನು ಇಟ್ಟುಕೊಂಡು ಪರರ ಹಿತಕಾಯುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ. ಹದಿಹರೆಯದ ವಯಸ್ಸಿನಲ್ಲಿ ಉತ್ತಮ ಸಂಸ್ಕಾರವನ್ನು ಹೊಂದುವುದರ ಮೂಲಕ ಭಾರತೀಯ ಸಂಸ್ಕೃತಿ ರಕ್ಷಣೆಯಾಗಬೇಕಿದೆ. ಸಂಸ್ಕಾರಬದ್ಧತೆಯನ್ನು ಹೊಂದಿರುವ ಈ ಕನ್ನಡ ನಾಡನ್ನು ಒಟ್ಟು 18 ರಾಜಮನೆತನಗಳು ಆಳಿ ಸುಂದರ-ಬಂಧುರ ಸಂಸ್ಕೃತಿಯನ್ನು ಗಟ್ಟಿಗೊಳಿಸಿವೆ. ತನು-ಮನಗಳನ್ನು ಸಮಪರ್ಿಸಿ ತ್ಯಾಗ-ಯೋಗ ಭೂಮಿಯನ್ನಾಗಿಸಿದ್ದು ಇತಿಹಾಸ. ಇತಿಹಾಸ ಮರೆತರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ವಿದ್ಯಾಥರ್ಿಗಳು ಈ ದೆಸೆಯಲ್ಲಿಯೇ ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕಿವಿಮಾತುಗಳನ್ನು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಪ್ರಾಚಾರ್ಯ ಪ್ರೊ. ಜ್ಯೀತಿಬಾ ಸಿಂಧೆ ಮಾತನಾಡಿ ವಿದ್ಯಾಥರ್ಿಗಳಾದವರು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆಯಬೇಕಾಗುತ್ತದೆ. ತಾಯಿ-ತಂದೆಗಳು ಯೋಜಿತ ರೀತಿಯಲ್ಲಿ ತಮಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಮಾಡುತ್ತಿರುವ ಪ್ರಯತ್ನಕ್ಕೆ ತಾವುಗಳು ಯಶಸ್ವಿಯತ್ತ ಹೆಜ್ಜೆ ಹಾಕಬೇಕಾಗುತ್ತದೆ. ಪರೀಕ್ಷೆ ಸವಾಲು, ಅಭ್ಯಾಸದ ಕಾಳಜಿ, ವಾಸ್ತವದ ಅರಿವು, ಭವಿಷ್ಯತ್ತಿನ ನಿಣರ್ಾಯಕತೆ ಪ್ರತಿಯೊಬ್ಬರಲ್ಲೂ ಮೂಡಿ ಬಂದಾಗ ಸಾಧನೆ ಸರಳವಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆಗೈದ ಮಂಜುನಾಥ ಕುರಿ, ಪೂಜಾ ಪಾಟೀಲ, ಪೂಜಾ ಸಾಲಿಮಠ, ನಬೀರಾ ವಧರ್ೀ, ಸಿದ್ಧಲಿಂಗೇಶ ಹೆಚ್.ಕೆ. ಅವರುಗಳನ್ನು ಗೌರವಿಸಲಾಯಿತು. 

ವೇದಿಕೆ ಮೇಲೆ ಡಾ. ರೇಷ್ಮಾ ಇನಾಮದಾರ, ಪ್ರೊ. ಅನಿತಾ ಉಗರಗೋಳ ಉಪಸ್ಥಿತರಿದ್ದರು. ಶಮಾ ಸಂಗಡಿಗರು ಪ್ರಾಥರ್ಿಸಿದರು. ಹೇಮಾ ಕನವಳ್ಳಿ ಸ್ವಾಗತಿಸಿದರು. ಪ್ರೊ. ಮಹೇಶ ಬೆಂಡಿಗೇರಿ ಪರಿಚಯಿಸಿದರು. ಐಶ್ವರ್ಯ ಮನೇಗಾರ ಹಾಗೂ ಕುಷಿ ಜೈನ್ ನಿರ್ವಹಿಸಿದರು. ಪ್ರೊ. ಬಿ. ಆರ್. ಪಾಟೀಲ ವಂದಿಸಿದರು. ಪ್ರೊ. ಎಸ್. ಎಸ್. ಸಣ್ಣಶಿವಣ್ಣವರ ಪ್ರಶಸ್ತಿ ನೀಡಿದರು.