ಉತ್ತರ ಸಿನಾಯ್ ಪ್ರಾಂತ್ಯದಲ್ಲಿ ಈಜಿಪ್ಟ್ ಸೇನೆಯಿಂದ 10 ಭಯೋತ್ಪಾದಕರ ಹತ್ಯೆ

ಕೈರೋ, ಫೆ 10, ಉತ್ತರ ಸಿನಾಯ್ ಪ್ರಾಂತ್ಯದ ಮಿಲಿಟರಿ ಚೆಕ್ ಪೋಸ್ಟ್ ಮೇಲೆ ಪ್ರಬಲ ದಾಳಿ ನಡೆಸಲು ಸಂಚು ರೂಪಿಸಿದ್ದ 10 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಈಜಿಪ್ಟ್ ಸೇನೆ ಘೋಷಿಸಿದೆ. ಉತ್ತರ ಸಿನಾಯ್ ನಲ್ಲಿರುವ ಭದ್ರತಾ ಚೆಕ್ ಪೋಸ್ಟ್ ಮೇಲೆ ಭಾನುವಾರ ನಡೆಸಲು ಉದ್ದೇಶಿಸಲಾಗಿದ್ದ ಭಯೋತ್ಪಾದಕ ದಾಳಿಯನ್ನು ಸೇನಾ ಪಡೆ ಹತ್ತಿಕಿದೆ ಎಂದು ಸೇನಾಪಡೆ ವಕ್ತಾರರ ಹೇಳಿಕೆ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಸಿಬ್ಬಂದಿಗೆ ಗಾಯಗಳಾಗಿವೆ. ಭಯೋತ್ಪಾದಕರು ಬಳಸಿದ ನಾಲ್ಕು ಚಕ್ರದ ವಾಹನವನ್ನೂ ನಾಶಪಡಿಸಲಾಗಿದ್ದು ದಾಳಿಯ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೇನಾ ಪಡೆ ಈ ಕಾರ್ಯಾಚರಣೆ ನಡೆಸಿತು ಎಂದು ಹೇಳಿಕೆ ತಿಳಿಸಿದೆ.  ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಿಷ್ಠರಾಗಿರುವ ಸಿನಾಯ್ ಮೂಲದ ಭಯೋತ್ಪಾದಕರ ಗುಂಪು ಈಜಿಪ್ಟ್ ನಲ್ಲಿ ಬಹುತೇಕ ದಾಳಿಗಳ ಹೊಣೆ ಹೊತ್ತುಕೊಂಡಿದೆ.