100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲಿಗೆ ಕೊಡುತ್ತಿರುವ ಪ್ರೋತ್ಸಾಹ ಧನ

100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲಿಗೆ ಕೊಡುತ್ತಿರುವ ಪ್ರೋತ್ಸಾಹ ಧನ  The incentive given by the central government per quintal for purchasing 100 quintals of maize

ಬ್ಯಾಡಗಿ 05: ರಾಜ್ಯದ ರೈತರು ಬೆಳೆದ ಮೆಕ್ಕೆಜೋಳ,ಭತ್ತ, ರಾಗಿ ಹಾಗೂ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಕೇಂದ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ರಾಜ್ಯ ಸರ್ಕಾರ ರೈತರನ್ನು ವಂಚಿಸುತ್ತಿದೆ. ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಹೇಳುವ ಬದಲು ರೈತರಿಗೆ ತಕ್ಷಣ ಬೆಂಬಲ ಬೆಲೆ ಘೋಷಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ  ಒತ್ತಾಯಿಸಿದರು.

ಬ್ಯಾಡಗಿಯ ಭಾರತೀಯ ಜನತಾ ಪಾರ್ಟಿ ವತಿಯಿಂದ ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಹಾಗೂ ಮೆಕ್ಕೆಜೋಳ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ತೆರೆಯಲು . ರೈತ ವಿರೋಧಿ ಸರ್ಕಾರದ ವಿರುದ್ಧ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ  ಮಾತನಾಡಿದವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜ್ಯದ, ರೈತರ ಹಿತ ಕಡೆಗಣಿಸಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಇವರ ಕಿತ್ತಾಟದಿಂದ ಆಡಳಿತ ಸಂಪೂರ್ಣ ಕುಸಿದು ಜನ ಭ್ರಮನಿರಸನಗೊಂಡಿದ್ದಾರೆ ಬಿಟ್ಟಿ ಭಾಗ್ಯದ ಹೆಸರಿನಲ್ಲಿ ರಾಜ್ಯದ ಖಜಾನೆ ಖಾಲಿ ಮಾಡಿ ಕೊಂಡಿರುವ ರಾಜ್ಯ ಸರ್ಕಾರ ಹಣದ ಕೊರತೆ ಎದುರಿಸುತ್ತಿದೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದ ರೈತರು ಕಂಗಾಲಾಗಿದ್ದಾರೆ ಶೀಘ್ರವೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೈತರು ಬೆಳೆದ ಮೆಕ್ಕೆಜೋಳಕ್ಕೆ ಖರೀದಿಗೆ ಎರಡು ಕೇಂದ್ರ ತೆಗೆಯಬೇಕು, ಪ್ರತಿ ರೈತರಿಂದ ಕನಿಷ್ಠ ಪಕ್ಷ 100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲಿಗೆ ಕೊಡುತ್ತಿರುವ ಪ್ರೋತ್ಸಾಹ ಧನ 2400 ರೂ ಜೊತೆಗೆ ಹೆಚ್ಚುವರಿಯಾಗಿ 600 ರೂ ಸೇರಿಸಿ ಒಟ್ಟು 3000 ಪ್ರೋತ್ಸಾಹ ಧನವನ್ನು ಕೊಡಬೇಕು.ಎಂದು ಆಗ್ರಹಿಸಿದರು. 

ತಾಲೂಕು ರೈತ ಮೋರ್ಚ ಅಧ್ಯಕ್ಷ ಶಿವಾನಂದ್ ಕಡಗಿ ಮಾತನಾಡಿ ತಾಲೂಕಿನಲ್ಲಿ ರೈತರ ಬೆಳೆ ಹಾನಿಯ ಸಮೀಕ್ಷೆಯು ಸರಿಯಾಗಿ ನಡೆದಿಲ್ಲ ಕೇವಲ ಬೆರಳಣಿಕೆ ಅಷ್ಟು ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಸಿದ್ದಾರೆ ರಾಜ್ಯ ಸರ್ಕಾರದ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ನಾವು ಮತ್ತು ನಮ್ಮ ನಾಯಕರು ಸೇರಿ ಪ್ರತಿ ಹಳ್ಳಿಗಳಲ್ಲಿ ಭೇಟಿ ನೀಡಿ ಪ್ರತಿ ಜಮೀನುಗಳನ್ನು ವೀಕ್ಷಣೆ ಮಾಡಿ ಸಮೀಕ್ಷೆ ಮಾಡಲಾಗಿದೆ ನಾವು ಮಾಡಿದ ಸಮೀಕ್ಷೆಯಲ್ಲಿ ಅರ್ಧದಷ್ಟು ಸಹ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ ಕೂಡಲೇ ಸರ್ಕಾರವು ಎಚ್ಚೆತ್ತು ರೈತರು ಕಳೆದುಕೊಂಡ ಬೆಳಗೆ ಸೂಕ್ತ ಪರಿಹಾರ ನೀಡಿ ಮತ್ತು ಕುಲಂಕುಶವಾಗಿ ಪ್ರತಿ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಬೆಳೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.ತಾಲೂಕು ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ ಮಾತನಾಡಿ ರಾಜ್ಯದ ಹಲವು ಜಿಲ್ಲೆಗಳಲ್ಲಿ 45 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯಲಾಗಿದೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರು ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ರೈತ ವಿರೋಧಿ ಸರ್ಕಾರ ಬಡಿದೆಬ್ಬಿಸುವ ಹೋರಾಟ ನಮ್ಮದಾಗಿದೆ.ಈ ಹಿಂದೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಅನೇಕ ರೈತಪರ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ಥಗಿತಗೊಳಿಸುತ್ತಿದೆ’ ರಾಜ್ಯ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ 4,000 ಕುಟುಂಬಕ್ಕೆ ಹಾಗೂ ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಇಂತಹ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರವು ಬಂದ್ ಮಾಡಿದೆ ಎಂದು ಆರೋಪಿಸಿದರು. *ಸಿ.ಎಂ, ಡಿಸಿಎಂ ನಿತ್ಯ ಕುರ್ಚಿ ಉಳಿಸಿಕೊಳ್ಳುವ ್ಡ್ಣ್ಝ್ದಹಿ ಏಣಿ ಆಟದಲ್ಲಿ ತೊಡಗಿದ್ದಾರೆ. ಇವರಿಗೆ ಜನಪರ ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ನೀಡಿ ತೊಲಗಲಿ.ಕಾಂಗ್ರೆಸ್ ಹೈಕಮಾಂಡ್ ಕುರ್ಚಿ ಕದನಕ್ಕೆ ಪೂರ್ಣ ವಿರಾಮ ಹಾಕಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಬಿಹಾರದಲ್ಲಿ ಕಲಿಸಿರುವ ಪಾಠವನ್ನು ರಾಜ್ಯದಲ್ಲೂ ಜನರು ಮುಂದೆ ಕಲಿಸಲಿದ್ದಾರೆ’ಇದೇ ರೀತಿ ರೈತ ವಿರೋಧಿ ನೀತಿ ನಿರ್ಧಾರಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ಶವದ ಪೆಟ್ಟಿಗೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಕಿ ಮುಚ್ಚಿ ಮಳೆ ಬಡೆದು ಪೆಟ್ಟಿಗೆಯನ್ನು ಮಣ್ಣಿನಲ್ಲಿ ಹೂಳುವ ಪರಿಸ್ಥಿತಿ ಬರುತ್ತದೆ ಎಂದು ಬಿಜೆಪಿ  ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಎಂದು ಹೇಳಿದರು

ಬೃಹತ್ ಪ್ರತಿಭಟನೆಯು ಪಟ್ಟಣದ ಸುಭಾಷ್ ಸರ್ಕಲ್ನಿಂದ ಎತ್ತಿನ ಬಂಡೆಯ ಮೂಲಕ ಪ್ರಾರಂಭವಾದ ಪಾದಯಾತ್ರೆ  ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಹಶೀಲ್ದಾರ್ ಕಚೇರಿ ತಲುಪಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಚತ್ರದ. ನಿಕಟಪೂರ್ವ ಅಧ್ಯಕ್ಷ ಹಾಲೇಶ ಜಾದವ್,  ಹಿರಿಯ ಮುಖಂಡ ಮುರಿಗೆಪ್ಪ ಶೆಟ್ಟರ್, ಸುರೇಶ್ ಆಸಾದಿ. ಎಂ ಎಸ್ ಪಾಟೀಲ, ಶಂಕರಗೌಡ ಪಾಟೀಲ, ಶಿವಯೋಗಿ ಶಿರೂರ, ವಿಜಯ್ ಭರತ್ ಬಳ್ಳಾರಿ, ಶಂಕ್ರಣ್ಣ ಅಕ್ಕಿ, ಪ್ರಶಾಂತ್ ಹಾಲನಗೌಡ್ರ, ಶಂಬಣ್ಣ ಬಿದರಿ, ವಿದ್ಯಾ ಶೆಟ್ಟಿ, ಗಾಯತ್ರಿ ರಾಯ್ಕರ್, ಸರೋಜಮ್ಮ ಉಳ್ಳಾಗಡ್ಡಿ, ಲೀಲಾವತಿ ಬಡಿಗೇರ್, ಹಾಗೂ ಎಲ್ಲಾ ಬಿಜೆಪಿಯ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು,