21ರಿಂದ 24ವರೆಗೆ ಹೇಮಾವತಿ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೂತನ ದೇವಸ್ಥಾನ ಉದ್ಘಾಟನೆ ಜರುಗಲಿದೆ

 21ರಿಂದ 24ವರೆಗೆ ಹೇಮಾವತಿ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೂತನ ದೇವಸ್ಥಾನ ಉದ್ಘಾಟನೆ ಜರುಗಲಿದೆ The inauguration of the new temple for the installation of the Hemavati Devi idol will be held from

ಲೋಕದರ್ಶನ ವರದಿ 


21ರಿಂದ 24ವರೆಗೆ ಹೇಮಾವತಿ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೂತನ ದೇವಸ್ಥಾನ ಉದ್ಘಾಟನೆ ಜರುಗಲಿದೆ 


ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕು ಹೊನ್ನತ್ತಿ (ಹೇಮಾವತಿ ಪಟ್ಟಣ) ಗ್ರಾಮದಲ್ಲಿ ಅ.21ರಿಂದ ಅ.24ರ ವರೆಗೆ  ಹೊನ್ನನಾಗದೇವತಾ,  ಹೇಮಾವತಿ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು  ಹೊನ್ನನಾಗದೇವತಾ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಪ್ಪ ಲಮಾಣಿ ತಿಳಿಸಿದ್ದಾರೆ. 

    ಈ ಕುರಿತು ಪತ್ರಿಕಾ  ನೀಡಿದ ಅವರು ಅ.21ರಂದು ಸಂಜೆ 5ಕ್ಕೆ ಶ್ರೀ ದೇವರ ಮೂರ್ತಿ ಪುರ ಪ್ರವೇಶವಾಗಲಿದೆ. ರಾಣೇಬೆನ್ನೂರು, ಕೆರಿಮಲ್ಲಾಪುರ, ಗುಡಿಹೊನ್ನತ್ತಿ, ಹಳೇಹೊನ್ನತ್ತಿ ಗ್ರಾಮಗಳ ಮುಖಾಂತರ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಸುಮಂಗಲೆಯರ ಪೂರ್ಣ ಕುಂಭದೊಂದಿಗೆ ದೇವಸ್ಥಾನಕ್ಕೆ ತಲುಪಿಸಲಾಗುವುದು. ನಂತರ ಜಲವಾಸ ಹಾಗೂ ರಾತ್ರಿ 10 ರಿಂದ ಧಾನ್ಯವಾಸ ಮಾಡಿಸಲಾಗುವುದು. ಕರ್ನಾಟಕ ರಕ್ಷಣಾ ವೇದಿಕೆ ರಾಣೇಬೆನ್ನೂರು ಘಟಕದವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಅ.22ರಂದು ಮಧ್ಯಾಹ್ನ 12ರಿಂದ ಪುಷ್ಪವಾಸ, ಅ.23ರ ಬೆಳಗ್ಗೆ 6ಗಂಟೆಯವರೆಗೆ ನಡೆಯಲಿದೆ. ನಂತರ ದೇವಾಲಯ ಪ್ರವೇಶ ನಡೆಯಲಿದ್ದು, ಗಂಗೆ ಪೂಜೆ, ಗಣಪತಿ ಪೂಜೆ, ಉಮಾ ಮಹೇಶ್ವರ, ಅಷ್ಟದಿಕ್ಪಾಲಕರು, ಅಷ್ಟ ಲಕ್ಷಿ-್ಮಯರು, ಪುಣ್ಯಹ, ನಾಂ, ಬಿಂಬ, ಪರಿಗ್ರಹ, ಪೂಜಾ, ಮಂಟಪ, ಸಿದ್ದಿ ಸಂಸ್ಕಾರ ಹೀಗೆ ಪೂಜೆ ಕೈಂಕರ್ಯಗಳು ನಡೆಯಲಿವೆ. ಸಂಜೆ 6ಕ್ಕೆ ದೇವಾಲಯದಲ್ಲಿ ರಾಕ್ಷೊಘ್ನ ಹೊಮ, ವಾಸ್ತು ಹೋಮ, ನವಗ್ರಹ ಹೋಮ, ದುರ್ಗಾ ಹೋಮ ಕಾರ್ಯಕ್ರಮ ನಡೆಯಲಿವೆ. ಬಳಿಕ ಧರ್ಮ ಸಭೆ ನಡೆಯಲಿದೆ. ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗಿಶ್ವರ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಶ್ರೀಗಳು ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗುತ್ತಲದ ಗುರುಸಿದ್ದ ಸ್ವಾಮೀಜಿ ಸೇರಿದಂತೆ ಸ್ಥಳೀಯ ಜನಪ್ರತಿನಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಕಾರಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. 

ಅ.24ರಂದು ನಸುಕಿನಜಾವ 4ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಮಂಟಪ ಪೂಜೆ, ಅಭಿಷೇಕ, ಅಷ್ಠಬಂಧ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪೂರ್ಣಾಹುತಿ, ಅಷ್ಟೋತ್ತರ ಮತ್ತು ಮಹಾ ಮಂಗಳಾರತಿ ನಡೆಯಲಿದೆ. ನಂತರ ಬೆಳಗ್ಗೆ 10ಕ್ಕೆ ಧರ್ಮಸಭೆ ನಡೆಯಲಿದೆ. ಧರ್ಮ ಸಭೆಯಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಚೌಡಯ್ಯದಾನಪುರ ಚಿತ್ರಶೇಖರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ನೆಗಳೂರಿನ ಗುರುಶಾಂತೇಶ್ವರ ಶ್ರೀಗಳು, ಹಿರೇಕುರವತ್ತಿಯ ಸಿದ್ದನಂದೀಶ್ವರ ಶ್ರೀಗಳು, ಹನುಮನಹಳ್ಳಿಯ ಶಿವಯೋಗಿ ಸಣ್ಣ ಹಾಲಸ್ವಾಮಿಗಳು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರ​‍್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಮುಖ್ಯ ಅತಿಥಿಗಳಾಗಿ ಜಿಲ್ಲಾಕಾರಿ ವಿಜಯಮಹಾಂತೇಶ ದಾನಮ್ಮನವರ, ತಹಸೀಲ್ದಾರ ಆರ್‌.ಹೆಚ್ ಭಗವಾನ ಸೇರಿದಂತೆ ಸ್ಥಳೀಯ ಜನಪ್ರತಿನಿಗಳು, ಅಕಾರಿ ವರ್ಗದವರು, ಗಣ್ಯವರ್ತಕರು ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.