ಕುಡಿಯುವ ನೀರಿನ ಜಲ ಕುಂಭ ಉದ್ಘಾಟನೆ

ಲೋಕದರ್ಶನ ವರದಿ

ಹಿಡಕಲ್ ಡ್ಯಾಮ 10 : ಕುಡಿಯುವ ನೀರಿನ ಜಲ ಕುಂಭ ಉದ್ಘಾಟನೆಯನ್ನು ತಾಲೂಕಾ ಪಂಚಾಯಿತಿ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಬಾಲಚಂದ್ರ ಅಕ್ಕತಂಗೇರಹಾಳ ಪತ್ರಕರ್ತರು, ರಾಜ್ಯ ಪತ್ರಿಕಾ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷ ರವೀಂದ್ರ ಜಿಂಡ್ರಾಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಂ.ಟಿ.ಮುಲ್ಲಾ ನೌಕರ ಸಂಘದ ಅಧ್ಯಕ್ಷರು, ಶಾಲಾ ಮುಖ್ಯೋಧ್ಯಾಪಕ ರಾಜಗೋಪಾಲ ಮಿತ್ರನ್ನವರ, ರಹಮಾನ ಫೀರಜಾದೆ, ಸಾಹಿತ್ಯ ಪರಿಷತ ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಹೋಸಮನಿ, ಹಿರಿಯ ಸಾಹಿತಿ ಕಾ.ಹೊ.ಶಿಂದೆ, ಹೋಸಪೇಟೆ ಗ್ರಾಮ ಪಂಚಾಯಿತ ಅಧ್ಯಕ್ಷ ಬಸವರಾಜ ಚಿಕ್ಕೋಡಿ, ಪಿಡಿಓ ಎಂ.ಬಿ.ಪೂಜೇರಿ, ದೀಪಕ ನಾಡಗೌಡ, ರಮೇಶ ನಾಯಿಕ, ಗುರುಗಳಾದ ದುರದುಂಡಿ, ಡಾ.ಕಮತೆ, ಲೇಬರ ಕ್ಯಾಂಪ ಮುಖ್ಯೋಧ್ಯಾಪಕರು ಎಚ್.ಎನ್.ಮಗದುಮ್ಮ, ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಮುದ್ದು ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಎ.ಎ.ಪಾಟೀಲ ದೈಹಿಕ ಶಿಕ್ಷಕರು ನೆರವೇರಿಸಿಕೊಟ್ಟರು