ವಿದ್ಯಾರ್ಥಿ ದಶೆಯಲ್ಲಿ ಕಾನೂನು ಅರಿವಿನ ಮಹತ್ವ ಮತ್ತು ಸಮಾಜದಲ್ಲಿ ಬದುಕಲು ಅದರ ಸಹಕಾರಬೇಕು
The importance of legal knowledge during student life and its contribution to living in society
ಮುಂಡಗೋಡ 07; ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳನ್ನು ಅರಿತು ಕೊಳ್ಖುವುದು ಮೊದಲ ಕರ್ತವ್ಯ, ಆಗಬೇಕು ಮಾನವ ಹಕ್ಕುಗಳ ಮತ್ತುಮೂಲಭೂತ ಹಕ್ಕುಗಳ ಅರಿತು ನಮ್ಮ ಬದುಕನ್ನು ರೂಪಿಸುವ ಪ್ರಯತ್ನ ಮಾಡಬೇಕು ವಿದ್ಯಾರ್ಥಿ ದಶೆಯಲ್ಲಿದ್ದಾಗಲೇ ಕಾನೂನಿನ ಅರಿವು ಬೆಳಸಿಕೊಂಡರೆ ಭವಿಷ್ಯದಲ್ಲಿ ಸಮಾಜದಲ್ಲಿ ಬದುಕಲು ಸಹಕಾರಿಯಾಗುತ್ತದೆ. ಮತ್ತು ಪೋಕೋ ಕಾಯಿದೆಯನ್ನು ಸಮಾಜದಲ್ಲಿರುವ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಗೌರವಾನ್ವಿತ ಸಿವಿಲ್ ನ್ಯಾಯಾಧೀಶರು ಅಕ್ಷತಾ ಸಿ.ಆರ್ ರವರು ಹೇಳಿದರು. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ, ಸಂವಿಧಾನ ಸಂರಕ್ಷಕರ ಪಡೆ, ಮುಂಡಗೋಡ ತಾಲ್ಲೂಕಾ ಉಚಿತ ಕಾನೂನು ನೆರವು ಪ್ರಾಧಿಕಾರ, ಸಾಧನಾ ಮಹಿಳಾ ಸಾಂತ್ವನ ಕೇಂದ್ರ, ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಯುವತಿಯರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೆಹರು ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೊಕ್ಸೊ (ಕಓಅಖಓ) ಕಾಯಿದೆಯ ಜಾಗೃತಿ, ಸಂವಿಧಾನದ ಮಹತ್ವ ಮತ್ತು ಅದರ ಸಂರಕ್ಷಣೆಯ ಕಾರ್ಯಕ್ರಮವನ್ನು ಇಲ್ಲಿಯ ಜೆಎಮ್‌ಎಫ್ಸಿ ನ್ಯಾಯಾಧೀಶರಾದ ಅಕ್ಷತಾ ಸಿ.ಆರ್ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕ.ಸಾ.ಪ. ಅಧ್ಯಕ್ಷರು ವಸಂತ ಎಸ್.ಕೊಣಸಾಲಿ ರವರು ಮಾತನಾಡುತ್ತ ಯುವ ಜನತೆ ದಾರಿ ತಪ್ಪಲು ಸಂಸ್ಕಾರದ ಕೊರತೆ ಮತ್ತು ಮೊಬೈಲ್ ಕಾರಣ ಎಂದರು ಮತ್ತು ಕುಡು ಕುಟುಂಬದ ಮಾನ್ಯತೆ ಕಡಿಮೆ ಆಗುತ್ತಾ ಇರುವುದು ಸಹ,ಮಕ್ಕಳು ಬಾಲ್ಯದಲ್ಲೇ ದಾರಿ ತಪ್ಪುಲು ಕಾರಣವಾಗಿದೆ ಎಂದು ಹೇಳಿದರು.
ಮುಂಡಗೋಡದ ವಕೀಲರು ಸಾಧನಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಆದ ಸುಜೀತ ಸದಾನಂದ ಇವರು ಪೋಕ್ಸೋ ಕಾಯಿದೆಯು ಹೆಣ್ಣು ಮಕ್ಕಳಿಗೆ ಪಾಲನಾ ಕೇಂದ್ರಗಳ ದಾರಿ ತೋರಿಸಿದೆ ಪುರುಷರಿಗೆ ಸೆರೆವಾಸ ಕಲಿಯುವ ಪ್ರಾಯದಲ್ಲಿ ಉತ್ತಮವಾಗಿ ಕಲಿಯಿರಿ ಸಂಸ್ಕಾರ ರೂಪಿಸಿಕೊಳ್ಳಲು ಕರೆ ನೀಡಿದರು. ಸಿಡಿಪಿಒ ಕಾರ್ಯಾಲಯದಮೇಲ್ವಿಚಾರಕ ರೂಪಾ ಅಂಗಡಿ ಯವರು ಪೋಕ್ಸೋ ಕಾಯಿದೆಯ ಸಾಧಕ ,ಭಾದಕ ಮತ್ತು ಸವಾಲುಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯತಿಥಿಗಳಾಗಿ ಶ್ರೀಮತಿ ಸುಮಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ,ತಮ್ಮ ಮಾರ್ಮಿಕ ನುಡಿಗಳಿಂದ ಮಹಿಳೆಯರು ಮನಸ್ಸು ಮಾಡಿದರೆ ಉತ್ರಮಸಮಾಜದ ನಿರ್ಮಾಣ ಸಾಧ್ಯವೆಂದರು.
ಎಸ್.ಡಿ ಮುಡೆಣ್ಣವರ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಾಧನಾ ಸಂಸ್ಥೆಯು ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದು ವಿವಿಧ ಸಂಘಸಂಸ್ಥೆಗಳ ಜೊತೆಯಲ್ಲಿ ಹತ್ತಾರು ಕಾರ್ಯಕ್ರಮ ಆಯೋಜನೆ ಮಾಡಿದೆ.ಸಂವಿಧಾನ ಜಾಗೃತಿ ಮೂಡಿಸಲು ಶಾಲಾ ಕಾಲೇಜು ವಿಧ್ಯಾರ್ಥಿ ಅಸಂಘಟಿತ ಯುವಕರ ಜೊತೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂವಿಧಾನದ ಪ್ರಾಮುಖ್ಯತೆ ತಿಳಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಗೌರವಾನ್ವಿತ ಸಿವಿಲ್ ನ್ಯಾಯಾಧಿಶರು ಅಕ್ಷತಾ ಸಿ ಆರ್ ರವರಿಗೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ವಿಚಾರಕರಾದ ಶ್ರೀಮತಿ.ಶೀವಲಿಲಾ ಘಂಟಾಮಠ ಇವರು ಸಂವಿಧಾನ ಪಿಠೀಕೆ ಸಮರೆ್ಣ ಮಾಡಿದರು.ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು.
ಅಕ್ಷತಾ ಬುದ್ನಿ ಧನ್ಯವಾದ ಸಮರೆ್ಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಎಸ್ ಫಕೀರ್ಪ ಅಧ್ಯಕ್ಷರು ಆದಿ ಜಾಂಬವ ಶಿಕ್ಷಣ ಸಂಸ್ಥೆ, ಅಶೋಕ ಪವಾರ ಸಾಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಸಂಗಪ್ಪ. ಕೊಳೂರು, ಎಸ್. ಬಿ. ಹೂಗಾರ, ಎಸ್. ಕೆ. ಬೋರಕರ, ಎಚ್. ಎನ್. ತಪೇಲಿ, ಶ್ರೀಮತಿ. ಶಿವಲೀಲಾ ಘಂಟಾಮಠ, ಅಕ್ಷತಾ. ಬುದ್ನಿ, ಜ್ಯೋತಿ, ಆನಂದ,ಹೊಸೂರು, ಮಂಗಳಾ. ಮೊರೆ, ವಿನಾಯಕ. ಶೇಟ್, ಮಾಳಿ ಸರ್, ಗೌರಮ್ಮ. ಕೊಳ್ಳಾನವರ ಮುಂತಾದವರು ಹಾಜರಿದ್ದರು.ರಮೇಶ ಪವಾರ ಸಾಹಿತಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಎಲ್ ವಿ. ಕೆ ಸಂಸ್ಥೆಯ ಮಂಗಳಾ ಮೊರೆ, ಇನ್ನಿತರು ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 