ಧಾರವಾಡ ಸಂಸ್ಕೃತಿಯ ಮಹತ್ವ ಬಹಳ ದೊಡ್ಡದು

ಧಾರವಾಡ 09: ಮನುಷ್ಯ ನಿತ್ಯ ಜೀವನ ಒತ್ತಡದಲ್ಲಿ ಕಳೆಯುತ್ತಿದ್ದಾನೆ. ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದುಷ್ಚಟಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಅದರಲ್ಲೂ ಯುವ ಸಮುದಾಯದ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಅವರೇ ಹೀಗೆ ದಾರಿ ತಪ್ಪುತ್ತಿರುವುದು ಸಮಾಜಕ್ಕೆ ಕಳಂಕ ತರುವ ಸಂಗತಿಯಾಗಿದೆ. ಅದರ ಬದಲು ತಮ್ಮಗೆ ಇಷ್ಟವಾದ ಕಲೆಗಳಲ್ಲಿ ತೊಡಗಿಕೊಂಡು ಮನಸ್ಸಿನ ನೆಮ್ಮದಿಯನ್ನು ಕಂಡುಕೊಂಡು ಉತ್ತಮ ಸಮಾಜದ ನಿಮರ್ಾಣದತ್ತ ಹೆಜ್ಜೆ ಇಡಬೇಕಾದ ಅನಿವಾರ್ಯತೆಯಿದೆ. ಎಲ್ಲ ಪ್ರಕಾರದ ಕಲೆಗಳಲ್ಲಿ ತೊಡಗಿಕೊಂಡ ಕಲಾವಿದರನ್ನು ಗೌರವದಿಂದ ಕಾಣವುದರ ಜತೆಯಲ್ಲಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಾಗಿದೆ ಎಂದು   ಜೆ.ಜಿ.ಕೆ.ಪಿ.ಟಿ ಟ್ರೇನಿಂಗ ಕಾಲೇಜಿನ ಪ್ರಾಚಾರ್ಯ ಬಿ.ಬಿ.ನಾಯಕ ಹೇಳಿದರು. 

ರಂಗಸಂಗ ಸಂಸ್ಥೆ ಅಪರ್ಿಸುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ದಿ. ರಶ್ಮಿ ಮಂಜುನಾಥ ನಾಯಕ ಇವರ ನೆನಪಿನಲ್ಲಿ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡ ರಂಗೋತ್ಸವ-2019 ರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡುತ್ತಾ ಧಾರವಾಡ ಸಂಸ್ಕೃತಿಯ ಮಹತ್ವ ಬಹಳ ದೊಡ್ಡದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಎಂದು ನಾಯಕ ಹೇಳಿದರು. 

ಮುಖ್ಯ ಅತಿಥಿಗಳಾದ ಗಾಯಕರು, ಶಿಕ್ಷಕ ಶಿವಾನಂದ ಹೂಗಾರ ಮಾತನಾಡುತ್ತಾ ಕಲಾ ಪ್ರಕಾರಗಳಲ್ಲಿ ತೊಡಗಿಕೊಂಡ ನಂತರ ಕಲೆಯ ಹಿನ್ನಲೆಯ ಮಹತ್ವವನ್ನು ಅರಿತು ಶ್ರದ್ಧೆಯೊಂದಿಗೆ ಶ್ರಮವಹಿಸಿದರೆ ಒಬ್ಬ ಉತ್ತಮ ಕಲಾವಿದನಾಗಲು ಸಾಧ್ಯ. ಆ ಉತ್ತಮ ಕಲಾವಿದರಿಗೆ ಕಲಾಸಕ್ತರ ಮುಂದೆ ಪ್ರದರ್ಶನ ನೀಡಲು ವೇಧಿಕೆ ಸಿಕ್ಕು ಚಪ್ಪಾಳೆಯಿಂದ ಸಿಗುವ ಸಂತೋಷ ಮತ್ತೇಲಿಯೂ ಸಿಗಲಾರದು. ಅಂತಹ ವೇಧಿಕೆಯನ್ನು ಕಲ್ಪಿಸಿಕೊಡುವ ಕಾರ್ಯವನ್ನು ನಿರಂತರವಾಗಿ ನಾಗರಾಜ ಪಾಟೀಲ ಮತ್ತು ಮಾತರ್ಾಂಡಪ್ಪ ಕತ್ತಿ ಮಾಡುತ್ತಿದ್ದಾರೆ. ಅಲ್ಲದೆ ಮಾತರ್ಾಂಡಪ್ಪನವರುಯವರು ಬರಹದೊಂದಿಗೆ ಎಲ್ಲ ವರ್ಗದವರನ್ನು ಸಮರ್ಥವಾಗಿ ಸಮಾನ ಮನಸಿನಿಂದ ಒಗ್ಗುಡಿಸಿಕೊಂಡು ಹೋಗುತ್ತಿರುವುದು ಧಾರವಾಡ ಸಾಂಸ್ಕೃತಿಕ ವಲಯಕ್ಕೆ ಒಂದು ಶಕ್ತಿಯಾಗಿ ಕಾರ್ಯಮಾಡುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು. 

ಕೆ.ಎಚ್.ನಾಯಕ ಮಾತನಾಡಿ ಬದುಕಿನಲ್ಲಿ ಅತೀ ಆನಂದವನ್ನು ನೀಡುವುದು ಮತ್ತು ನಮ್ಮ ತಪ್ಪುಗಳಿಗೆ ಸರಿಯಾದ ಮಾರ್ಗದರ್ಶನವನ್ನು ಸಮರ್ಥವಾಗಿ ನಿಭಾಯಿಸುವಂತೆ ಸಲಹೆಗಳನ್ನು ನಾಟಕಗಳು ಘಟನೆಯಾದರಿತವಾಗಿ ಅನುಭವದೊಂದಿಗೆ ನೀಡುತ್ತವೆ. 

ಅಧ್ಯಕ್ಷತೆ ವಹಿಸಿದ್ದ  ರಂಗಾಯಣದ ರಂಗಕಲಾವಿದ ಕಿಟ್ಟಿ (ಕೃಷ್ಣಮೂತರ್ಿ) ಗಾಂವಕರ ಅಧ್ಯಕ್ಷೀಯ ಮಾತುಗಳನಾಡುತ್ತಾ ಇತ್ತೀವೆಗೆ ಧಾರವಾಡದಲ್ಲಿ ಹೆಚ್ಚು ಪ್ರೇಕ್ಷಕರನ್ನು ರಂಗಭೂಮಿಯತ್ತ ಗಮನಹರಿಸುವಂತೆ ಮಾಡುತ್ತಿರುವ ಸಂಸ್ಥೆ ಇದು. ಅದರ ಜತೆಯಲ್ಲಿ ನಿರಂತರವಾಗಿ ಅನುಭವಿ ಕಲಾವಿದರೊಂದಿಗೆ ಹೊಸ ಕಲಾವಿದರನ್ನು ಸೇರಿಸಿಕೊಂಡು ರಂಗಭೂಮಿಯ ಕುರಿತು ಚರ್ಚಎಯಾಗುವಂತೆ ಮಾಡುತ್ತಿರುವ ಮಾತರ್ಾಂಡಪ್ಪ ಕತ್ತಿ ಮತ್ತು ನಾಗರಾಜ ಪಾಟೀಲ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

ಮೇರು ಐಎಎಸ್ ಮತ್ತು ಕೆಎಎಸ್ ಸ್ಟಡಿ ಸೆಂಟರಿನ ನಿದರ್ೇಶಕರಾದ ಡಾ.ರುದ್ರೇಶ ಮೇಟಿ ಮಾತನಾಡಿ ಹಿಂದಿನ ಕಾಲದ ಕಂಪನಿ ನಾಟಕದ ಕಲಾವಿದರು ಮತ್ತು ಮಾಲಿಕರು ಇಡೀ ತಮ್ಮ ಜೀವನವನ್ನೇ ರಂಗಭೂಮಿಗಾಗಿ ಸಲ್ಲಿಸಿದ ನೆನಪನ್ನು ಈ ನಾಟಕ ಕಟ್ಟಿಕೊಟ್ಟಿದೆ. ನಾವೆಲ್ಲರೂ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ನಾಟಕೋತ್ಸವದ ಸಂಚಾಲಕರು, ಸಾಹಿತಿಗಳಾದ ಮಾತರ್ಾಂಡಪ್ಪ ಎಮ್.ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಬರಹಗಾರ ಪವನ ಆದಿ ಸ್ವಾಗತಿಸಿದರು. ರಾಜ್ ಕವಡೆನವರ ವಂದಿಸಿದರು.

ಗಾಯಕರಾದ, ಮಲ್ಲಿಕಾಜರ್ೂನ ಚಿಕ್ಕಮಠ, ಪ್ರಕಾಶ ಗೌಡರ, ಚಂದ್ರು ಶೀಲವಂತ, ಡಾ. ಮೇಟಿ, ರಂಗಾಯಣದ ಕಲಾವಿದರು,ಕೇಶವ ಬಡಿಗೇರ, ಮುಂತಾದವರು ಇದ್ದರು. 

ಕಾರ್ಯಕ್ರಮದ ನಂತರ "ಹೀರೋಯಿನ್ ಬೇಕಾಗಿದ್ದಾಳೆ.?" ನಾಟಕ ಪ್ರದರ್ಶನಗೊಂಡಿತು.