ಶರಣ ದಂಪತಿಗಳ ಆದರ್ಶ ಬದುಕು ಸಮಾಜಕ್ಕೆ ಮಾದರಿ: ಡಾ. ಮಾಧವ ಗುಡಿ

ಶರಣ ದಂಪತಿಗಳ ಆದರ್ಶ ಬದುಕು ಸಮಾಜಕ್ಕೆ ಮಾದರಿ: ಡಾ. ಮಾಧವ ಗುಡಿ  The ideal lives of Sharan couples serve as a model for society: Dr. Madhava Gudi


ವಿಜಯಪುರ, ಸೆ.2: ಬಸವಣ್ಣನವರ ಆದರ್ಶಗಳನ್ನು ಮೆಚ್ಚಿ ಪತ್ನಿ ಸಾತವ್ವೆಯೊಂದಿಗೆ ಕಲ್ಯಾಣಕ್ಕೆ ಬಂದ ಕೇತಯ್ಯ ಅವರು ತಮ್ಮ ಕಾಯಕ ನಿಷ್ಠೆಯ ಮೂಲಕ ಬದುಕು ಕಟ್ಟಿಕೊಂಡರು. ಬಿದಿರು ಕಡಿದು ಮರ, ಬುಟ್ಟಿ, ತೊಟ್ಟಿಲುಗಳನ್ನು ತಯಾರಿಸಿ ಕಲ್ಯಾಣದ ರಾಜಬೀದಿಯಲ್ಲಿ ಮಾರಾಟ ಮಾಡಿ ಬಂದ ಹಣದಿಂದಲೇ ಪ್ರಸಾದ ಹಾಗೂ ಜಂಗಮ ಸೇವೆ ಮಾಡುತ್ತಿದ್ದ ಶರಣ ದಂಪತಿಗಳ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಅಭಿಪ್ರಾಯಪಟ್ಟರು.  

ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಹಾಗೂ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಆಯೋಜಿಸಿದ್ದ 20ನೇ ಅನುಭಾವಿಗಳ ಮರುಭೇಟಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕೇತಯ್ಯರು ಕಾಯಕದ ಮೂಲಕವೇ ಭಗವಂತನನ್ನು ಒಲಿಸಿಕೊಂಡ ಮಹಾನ್ ಶರಣರಾಗಿದ್ದರು ಎಂದು ಹೇಳಿದರು. ಬಿ.ಎಂ. ಪಾಟೀಲ ಪ್ರಾರ್ಥಿಸಿದರು. ಡಾ. ವಿ.ಡಿ. ಐಹೊಳಿ ಪರಿಚಯಿಸಿ ಸ್ವಾಗತಿಸಿದರು. ಡಾ. ಸುಭಾಷ ಕನ್ನೂರ ನಿರೂಪಿಸಿದರು. ಅಮರೇಶ ಸಾಲಕ್ಕಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಡಾ. ಎಂ.ಎಸ್‌. ಮದಭಾವಿ, ಡಾ. ಸೋಮಶೇಖರ ವಾಲಿ, ಸುಭಾಷ ಯಾದವಾಡ, ಅರವಿಂದ ಕಂಚಾಣ, ಎಂ.ಎಸ್‌. ರಜುಳಕಿ, ಎಸ್‌.ಎನ್‌. ಶಿವಣಗಿ, ಅಂಬಾದಾಸ ಜೋಶಿ, ವಿ.ಎಸ್‌. ತೇಲಿ, ಆರಿ​‍್ಜ. ಬಾಯಕೋಡ, ಪ್ರಭಾವತಿ ದೇಸಾಯಿ, ಎಸ್‌.ಎಂ. ಶೇಖ್, ಎನ್‌.ಆರ್‌. ಕುಲಕರ್ಣಿ, ಸವಿತಾ ಕಟ್ಟಿ, ಬಿ.ಟಿ. ಈಶ್ವರಗೊಂಡ, ಎಸ್‌.ಬಿ. ದೊಡಮನಿ, ಜಿ.ಬಿ. ಸಾಲಕ್ಕಿ, ವಿ.ಎಸ್‌. ಖಾಡೆ, ನಾಗಮ್ಮ ಚೋಳಕೆ, ಎಂ.ಎಸ್‌. ಚಾಂದಕವಟೆ, ಸಿ.ಎಂ. ಭಂಡಗರ್, ಅಂಜುಂ ಖಾದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.