ಹೆಚ್ಚು ಕಲಿತವರಿಂದಲೇ ಸಮಾಜ, ದೇಶಕ್ಕೆ ಕಂಟಕ: ಸಚಿವ ಯು.ಟಿ. ಖಾದರ್
The highly educated themselves pose a threat to society and the country: Minister U.T. Khader
ಹೂವಿನಹಡಗಲಿ, ಸೆ. 4: “ಅನಕ್ಷರಸ್ಥರಿಗಿಂತ ಹೆಚ್ಚಾಗಿ ಜಾಸ್ತಿ ಕಲಿತವರಿಂದಲೇ ಸಮಾಜಕ್ಕೆ ಹಾಗೂ ದೇಶಕ್ಕೆ ಹೆಚ್ಚಿನ ಕಂಟಕ ಎದುರಾಗುತ್ತಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣ ಹೊರವಲಯದ ತಿಪ್ಪಾಪುರ ಸಮೀಪದ ಮಸ್ದರ್ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮೂರು ದಿನಗಳ ಸಾಹಿತ್ಯೋತ್ಸವ ಹಾಗೂ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೇವಲ ಪದವಿ ಪಡೆದಿರುವುದು ಮುಖ್ಯವಲ್ಲ. ಸಂಸ್ಕಾರ ಮತ್ತು ಮಾನವೀಯತೆ ಮುಖ್ಯ. ದೊಡ್ಡ ಪದವಿಗಳನ್ನು ಪಡೆದ ತಕ್ಷಣ ವ್ಯಕ್ತಿ ಉತ್ತಮ ನಾಗರಿಕನಾಗುವುದಿಲ್ಲ. ನೈತಿಕತೆ ಇಲ್ಲದ ಶಿಕ್ಷಣ ಸಮಾಜದ ಹಾದಿ ತಪ್ಪಿಸಲು ಕಾರಣವಾಗಬಹುದು ಎಂದು ಹೇಳಿದರು.
ಶಿಕ್ಷಣವು ಕೇವಲ ಪಠ್ಯ ಮತ್ತು ಜ್ಞಾನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ, ಮಾನವೀಯತೆ, ್ಲ್ಘ್ಥೃ್ತಿಹ್ಝ್ತ್ಞ್ಲ್ಝ್ಣ್ಠಿ, ತಾಳ್ಮೆ ಹಾಗೂ ಪ್ರಾಮಾಣಿಕತೆಯನ್ನು ಬೆಳೆಸಬೇಕು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.
ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಹಾಫಿಜ್ ಸುಫ್ಯಾನ್ ಸಖಾಫಿ ಮಾತನಾಡಿ, ದಾನಿಗಳ ಸಹಕಾರದಿಂದ ಇಂತಹ ಬೃಹತ್ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮದ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಶಿಕ್ಷಕ ಎಚ್. ಶೇಖ್ ಹಮೀದ್ ಹಾಗೂ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ಮಂಗಳೂರಿನ ಉದ್ಯಮಿ ಮುಸ್ತಫಾ ಭಾರತ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೃಷ್ಣ ನಾಯ್ಕ್ ಮಾತನಾಡಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಾಜ್ಯ ಮುಸ್ಲಿಂ ಜಮಾತ್ ಅಧ್ಯಕ್ಷ ಡಾ. ಮುಹಮ್ಮದ್ ಫಾರೂಕ್, ಸಯ್ಯದ್ ಅಲವಿ ಅಲ್ ಬುಖಾರಿ ಕರ್ಕಿ, ಉದ್ಯಮಿ ಮುಸ್ತಫಾ ಭಾರತ್, ಜಿ.ಎ. ಬಾವಾ ಬೆಂಗಳೂರು, ಹಬೀಬ್ ನಾಲ, ಅಬ್ದುಲ್ ಹಕೀಂ ಅಬುಧಾಬಿ, ರಜಬ್ ಉಚ್ಚಿಲ್, ವಾರದ ಗೌಸ್ ಮೊಯಿದ್ದೀನ್, ಕಾಗದ ಗೌಸ್ ಸಾಹೇಬ್, ಸಿ.ಎ. ನಾಸಿರ್, ಗೌಸ್ ಪೀರ್, ನೂರುದ್ದೀನ್ ಗಂಗಾವತಿ, ಸಲೀಂ ಅಳವಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 