ಬಿಸಿಲಿನ ಬೇಗೆ ಸಂಕಟಕ್ಕೆ ಒಳಗಾಗುವಂತೆ ಮಾಡುತ್ತಿದೆ.ಮಾರ್ಚ್‌ ಆರಂಭವಾಗುತ್ತಿದ್ದಂತೆ ಎಲ್ಲೆಡೆಯೂ ಬಿಸಿಲು ಹೆಚ್ಚು

ಬಿಸಿಲಿನ ಬೇಗೆ ಸಂಕಟಕ್ಕೆ ಒಳಗಾಗುವಂತೆ ಮಾಡುತ್ತಿದೆ.ಮಾರ್ಚ್‌ ಆರಂಭವಾಗುತ್ತಿದ್ದಂತೆ ಎಲ್ಲೆಡೆಯೂ ಬಿಸಿಲು ಹೆಚ್ಚು The heat of the sun is making us suffer. As March begins, the sun is shining everywhere

ಲೋಕದರ್ಶನ ವರದಿ 

ಮಾಂಜರಿ 04  : ನಿಂತಲ್ಲಿ ನಿಲ್ಲಲಾಗದೆ, ಒಂದೆಡೆ ಕುಳಿತರೆ ಸಮಾಧಾನವೂ ಆಗದೆ ಸದಾ ತಂಪು ಬೇಕು ಎಂದು ಬಯಸುವಷ್ಟು ಬಿಸಿಲು ಕಾಡುತ್ತಿದೆ. ಮಕ್ಕಳು, ವಯಸ್ಕರು ಹಾಗೂ ಹಿರಿಯರಲ್ಲಿ ಅರೆಝಳದ ಸಂಕಟವಾಗುತ್ತಿದ್ದು, ಬಿಸಿಲಿನ ಬೇಗೆ ಸಂಕಟಕ್ಕೆ ಒಳಗಾಗುವಂತೆ ಮಾಡುತ್ತಿದೆ.ಮಾರ್ಚ್‌ ಆರಂಭವಾಗುತ್ತಿದ್ದಂತೆ ಎಲ್ಲೆಡೆಯೂ ಬಿಸಿಲು ಹೆಚ್ಚು. ಅದರಲ್ಲಿಯೂ ಉತ್ತರ  ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ ವಾರ ಒಂದಷ್ಟು ಮಳೆ ಸುರಿದಿದ್ದರೂ ಅರೆಝಳವಿದೆ. ಮಾರ್ಚ್‌ ಮಧ್ಯಭಾಗದಿಂದಲೇ ಬಿಸಿಲು ಹೆಚ್ಚಾಗುತ್ತಲೇ ಇದೆ. 

 ಉತ್ತರ ಕರ್ನಾಟಕದ ತಾಲೂಕಿನಲ್ಲಿ   ಹಾಗೂ ಸುತ್ತಮುತ್ತಲೂ ಜನರ ಬಿಸಿಲಿನ ದಾಹ ತಣಿಸಲು ಎಲ್ಲೆಂದರಲ್ಲಿ ತಂಪು ಪಾನೀಯಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಎಳೆನೀರಿನ ಬೆಲೆ ಸಾಮಾನ್ಯ ದಿನಕ್ಕಿಂತಲೂ ಹೆಚ್ಚಾಗಿದೆ. ಎಲ್ಲಿ ಹೋದರೂ ಬೇಸಿಗೆ ಸಮಯದಲ್ಲಿ ಎಳೆನೀರು ಸಿಗುವುದು ಕಷ್ಟ, ಆದ್ದರಿಂದ ಬೆಲೆ ?50' ಎನ್ನುವ ಮಾತು ವ್ಯಾಪಾರಿಗಳಿಂದ ಕೇಳಿ ಬರುತ್ತಿದೆ. ಜನ ಎಳೆನೀರಿನ ಜೊತೆಗೆ ವಿವಿಧ ತಂಪು ಪಾನೀಯಗಳು, ಕಲ್ಲಂಗಡಿ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. 

ಮಾರ್ಚ್‌ ಕೊನೆಯ ವಾರದಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ  ಗರಿಷ್ಠ ಉಷ್ಣಾಂಶ 36 ಡಿಗ್ರಿಗೆ ತಲುಪಿದ್ದು ಧಗೆ ಹೆಚ್ಚಾಗುತ್ತಲೇ ಇದೆ. ಆಗಾಗ ಮೋಡ ಕವಿದ ವಾತಾವರಣ ಹಾಗೂ ಅಲ್ಪಸಲ್ಪ ಮಳೆ ಬೀಳುವುದರಿಂದ ವಾತಾವರಣದಲ್ಲಿ ಮತ್ತಷ್ಟು ಬದಲಾವಣೆಯಾಗುತ್ತಿದೆ. ಸೆಕೆ ಜಾಸ್ತಿಯಾಗಿ ವೃದ್ಧರು ಹಾಗೂ ಖಮಾ ರೋಗಿಗಳ ಆರೋಗ್ಯದಲ್ಲಿಯೂ ಏರುಪೇರಾಗುತ್ತಿದೆ. 

ಮನೆಗಳಲ್ಲಿ ಕೂರಲು ಆಗದಷ್ಟು ಸೆಕೆಯಿದೆ. ಸದಾ ಫ್ಯಾನ್ ತಿರುಗುತ್ತಿರಲೇಬೇಕು, ಜಾನುವಾರು, ಪ್ರಾಣಿ, ಪಕ್ಷಿ ಸಂಕುಲ ಕೂಡ ಬೇಸಿಗೆಯಲ್ಲಿ ನೀರಿನ ಬವಣೆ ಎದುರಿಸುವಂತಾಗಿದೆ. ಮಾರ್ಚ್‌ ಆರಂಭದಲ್ಲಿ ಬಿಸಿಲಿನಿಂದ ಚಿಕ್ಕಮಕ್ಕಳ ಮೇಲೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಮಕ್ಕಳಿಗೆ ತೀವ್ರ ಜ್ವರ, ವಾಂತಿ, ಭೇದಿ ಹೆಚ್ಚಾಗುತ್ತಿದೆ. ನೀರು ಕಡಿಮೆ ಕುಡಿಯುತ್ತಿವುದರಿಂದ ದೇಹದಲ್ಲಿ ನಿರ್ಜಲೀಕರಣ ಆಗುತ್ತದೆ. 

ಇನ್ನೊಂದೆಡೆ ಬದುಕಿನ ಬಂಡಿ ಸಾಗಿಸಲು ಹೂ, ಹಣ್ಣುಗಳು, ತರಕಾರಿ ಮಾರಾಟದಲ್ಲಿ ತೊಡಗಿರುವ ಮಹಿಳೆಯರು ಬಿರುಬಿಸಿಲಿನಿಂದ ತಮಗೆ ಆಗುತ್ತಿರುವ ಸಂಕಟವನ್ನೂ ಹತ್ತಿಕ್ಕಿಕೊಂಡು ದುಡಿಯುವಂತಾಗಿದೆ. ಬೀದಿಬದಿ ವ್ಯಾಪಾರಿಗಳು, ಗ್ರಾಮೀಣ ಭಾಗದ ಕೃಷಿಯಲ್ಲಿ  ದುಡಿಯುವ ಕಾರ್ಮಿಕರು ಹೀಗೆ ಅನೇಕರು ಬಿಸಿಲಿನ ನಡುವೆಯೂ ತಮ್ಮ ಕುಟುಂಬಕ್ಕೆ ತಂಪು ನೀಡುವಂತಾಗಿದೆ. 

ಆರೋಗ್ಯ ಇಲಾಖೆ ನೀಡಿದ ಸಲಹೆಗಳು ಏನು? 

*ಬೇಸಿಗೆ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು. ಮಜ್ಜಿಗೆ, ಎಳೆನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. 

* ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು  ಸುವುದು ಉತ್ತಮ. 

*ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಬೇಕು. 

*ಗಾಳಿಯಾಡುವ ಪಾದರಕ್ಷೆ ಧರಿಸಬೇಕು. ಹೊರಗಡೆ ತೆರಳುವ 

ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಉತ್ತಮ. 

* ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. 

*ರೇಡಿಯೊ, ದೂರದರ್ಶನ, ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗ (ಹೀಟ್ ವೇವ್) ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆ ಯೋಜಿಸಿಕೊಳ್ಳಬೇಕು. 

* ಬಿಸಿಲಿನಲ್ಲಿ ಹೊರಗಡೆ ಕಾರ್ಯನಿರ್ವಹಿಸುವವರು ಆದಷ್ಟು ಬೆಳಿಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೆಲಸ ಮಾಡುವುದು ಉತ್ತಮ.