ಅನ್ನನೀಡುವ ಕೈಗೆ ಯಾವಾಗಲೂ ಅನ್ನ ಕಡಿಮೆ ಆಗುವುದಿಲ್ಲಾ: ಸುಭಾಷ ಮುಧೋಳ
The hand that feeds others never runs short of food: Subhash Mudhol
ಲೋಕದರ್ಶನ ವರದಿ
ಬೆಟಗೇರಿ: ಜನ ಮೆಚ್ಚುಗೆಗೆ ಪಾತ್ರವಾದ ಇಲ್ಲಿಯ ಗಜಾನನ ಗೆಳೆಯರ ಬಳಗದವರು ಹಲವು ವರ್ಷಗಳಿಂದ ಡಾ. ಅಂಬೇಡ್ಕರ ವ್ರತ್ತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಯ, ಭಕ್ತಿಯಿಂದ ಪೂಜಿಸಿ ಗಣಪತಿಯ ಕೃಪೆಗೆ ಪಾತ್ರರಾಗುತ್ತಿರುವ ಸೇವಾಕಾರ್ಯ ಮೆಚ್ಚುವಂತಹದಾಗಿದೆ ಎಂದು ಬೆಟಗೇರಿ ಯುವ ಧುರೀಣ ಸುಭಾಷ ಮುಧೋಳ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗಜಾನನ ಗೆಳೆಯರ ಬಳಗದವರ ಸಹೋಗದಲ್ಲಿ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ ಪ್ರಯುಕ್ತ ಸೆ.18ರಂದು ಅನ್ನ ಸಂತರೆ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಅನ್ನನೀಡುವ ಕೈಗೆ ಯಾವಾಗಲೂ ಅನ್ನ ಕಡಿಮೆ ಆಗುವುದಿಲ್ಲಾ, ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅನ್ನ ನೀಡುವ ಪ್ರವೃತ್ತಿ ಮೈಗೊಡಿಸಿಕೊಳ್ಳಬೇಕು ಎಂದರು.
ಸೆ.14ರಿಂದ ಸೆ.19ತನಕ ಸತತ 7ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನೆಗೆ ಪೂಜೆ-ಪುನಸ್ಕಾರ, ಆರಾಧನೆ ಭಕ್ತಿಯಿಂದ ಜರುಗಿತು. ಸೆ.18ರಂದು ಮಧ್ಯಾಹ್ನ 12ಗಂಟೆಯಿಂದ ಸಾಯಂಕಾಲ4 ಗಂಟೆ ತನಕ ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗಿತು. ಸೆ.19 ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಲಿದೆ.
ಈ ವೇಳೆ ಸುಭಾಷ ಮುಧೋಳ, ಸದಾಶಿವ ದಂಡಿನ, ಸಂತೋಷ ಕುಡಚಿ, ಚೆನ್ನಪ್ಪ ದಂಡಿನ, ಶಂಕರ ಕಡಕಭಾಂವಿ, ಮಲ್ಲಿಕಾರ್ಜುನ ದಂಡಿನ, ಶಿವಾನಂದ ಮುಧೋಳ, ಈರ್ಪ ದೇಯಣ್ಣವರ, ಪ್ರಕಾಶ ಹಾದಿಮನಿ, ಈಶ್ವರ ಮೇಳೆಣ್ಣವರ, ರಾಜು ದಂಡಿನ, ಮಲ್ಲಿರ್ಕಾಜುನ ಬಳಿಗಾರ, ಚಂದು ಕುಡಚಿ, ರಮೇಶ ದೇಯಣ್ಣವರ, ರವಿ ಬೆನ್ನಾಳೆ, ರಮೇಶ ಬಳಿಗಾರ, ಶಂಕರ ಮುಧೋಳ, ವಿನೋದ ಬಳಿಗಾರ, ಇಲ್ಲಿಯ ಗಜಾನನ ಗೆಳೆಯರ ಬಳಗದ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 