ಅದ್ಧೂರಿಯಾಗಿ ಜರುಗಿದ ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಸಿದ್ದಾರೂಢರ ತೆಪ್ಪೋತ್ಸವ
The grand Theppotsava of Sri Kalmeshwara and Sri Siddharudha swamiji
ಹಾವೇರಿ 11:ಪಶ್ಚಿಮ ವಾಹಿನಿ ಎಂದೇ ಪ್ರಸಿದ್ಧವಾದ ತಾಲೂಕಿನ ಸುಕ್ಷೇತ್ರ ಕೋಣನತಂಬಗಿ ಗ್ರಾಮದ ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಸಿದ್ದಾರೂಡರ ತೆಪ್ಪೋತ್ಸವವು ಬಹಳ ಅದ್ಧೂರಿಯಾಗಿ ಜರುಗಿತು. ತೆಪ್ಪೋತ್ಸವದ ಅಂಗವಾಗಿ ಏಳು ದಿನಗಳ ಕಾಲ ಓಂ ನಮ ಶಿವಾಯ ಎಂಬ ಶಿವನಾಮ ಸ್ಮರಣೆಯನ್ನು ಭಕ್ತರು ಹಗಲಿರುಳು ಸ್ಮರಿಸಿದರು. ಪ್ರತಿದಿನ ಅಭಿಷೇಕ, ಪ್ರಸಾದ ವ್ಯವಸ್ಥೆ ನಿರಂತರವಾಗಿ ನೆರವೇರಿತು.
ಶನಿವಾರ ಮಧ್ಯಾಹ್ನ 5 ಘಂಟೆಗೆ ತುಂಬಿದ ವರದೆಯಲ್ಲಿ ಎಲ್ಲಭಕ್ತರು ಟ್ಯೂಬ್ ಮತ್ತು ಈಜು ಕುಂಬಳ ಕಟ್ಟಿಕೊಂಡು ಓಂ ನಮ ಶಿವಾಯ ಶಿವನಾಮ ಸ್ಮರಣೆ ಮಾಡುತ್ತಾ, ಜಯಘೋಷ ಹಾಕುತ್ತ ತೆಪ್ಪವನ್ನ ಎಳೆಯುವ ದೃಶ್ಯ ತುಂಬಾ ರೋಮಾಂಚನಕಾರಿಯಾಗಿತ್ತು.ಪಕ್ಕದ ಗ್ರಾಮ ನದೀನೀರಲಗಿ ಗ್ರಾಮದ ಸಮಸ್ತ ಭಕ್ತರಿಂದ ಪೂಜೆ ಸಲ್ಲಿಸಿ ಪುನಃ ಕೋಣನತಂಬಗಿ ದಡ ಸೇರಿತುನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ,ಕೋಲಾಟ ಮೇಳ, ಜಾಂಜ್ ಮೇಳ, ಇತ್ಯಾದಿ ವಾದ್ಯಗಳಿಂದ ಸುಂದರವಾದ ಮೆರವಣಿಗೆ ಜರುಗಿತು.
ಪ್ರತಿ ವರ್ಷ ನೂಲಹುಣ್ಣಿಮೆಯಂದು ನಡೆಯುವ ಈ ವಿಶೇಷ ತೆಪ್ಪೋತ್ಸವಕ್ಕೆ ಜಿಲ್ಲೆ, ರಾಜ್ಯವಲ್ಲದೆ ಅಂತರ ರಾಜ್ಯಗಳಾದ, ಗೋವಾ, ಆಂದ್ರ ಪ್ರದೇಶ, ತಮಿಳುನಾಡ ಕೇರಳ ಮುಂತಾದ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ತೆಪ್ಪೋತ್ಸವ ನೋಡಿ ಸಂತಸಪಟ್ಟರು.ಗ್ರಾಮದ ಹಿರಿಯ ಕಿರಿಯ ಸಮಸ್ತ ಭಕ್ತರು ಸೇರಿ ತೆಪ್ಪೋತ್ಸವ ಸಂಭ್ರಮ ಸವಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 