ಪ್ರಕೃತಿ ವಿಕೋಪಕ್ಕೆ ತುತ್ತಾದ ರೈತರಿಗೆ ಪರಿಹಾರ ನೀಡುವಲ್ಲಿ ಸರಕಾರ ಸದಾ ಸಿದ್ಧ

 ಪ್ರಕೃತಿ ವಿಕೋಪಕ್ಕೆ ತುತ್ತಾದ ರೈತರಿಗೆ ಪರಿಹಾರ ನೀಡುವಲ್ಲಿ ಸರಕಾರ ಸದಾ ಸಿದ್ಧ The government is always ready to provide relief to farmers affected by natural disasters.

ಲೋಕದರ್ಶನ ವರದಿ 

ಪ್ರಕೃತಿ ವಿಕೋಪಕ್ಕೆ ತುತ್ತಾದ ರೈತರಿಗೆ ಪರಿಹಾರ ನೀಡುವಲ್ಲಿ ಸರಕಾರ ಸದಾ ಸಿದ್ಧ 

ಮುದ್ದೇಬಿಹಾಳ 07: ಭೀಕರ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾದ ರೈತರ ಬೆಳೆ ಪರಿಹಾರ, ಮನೆ ಕಳೆದುಕೊಂಡ ಸಂತ್ರಸ್ಥ ಕುಟುಂಬಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿದ ದನ ಕರುಗಳಿಗೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಸದಾ ಸಿದ್ಧವಿದೆ ಅದು ನಮ್ಮ ಜವಾಬ್ದಾರಿ ಕೂಡ ಹೌದು. ಆದರೇ ಯಾರೇ ಆಗಲಿ ಇಂತಹ ವಿಷಯದಲ್ಲಿ ನಾನು ಮಾಡಿದೆ ಎಂದು ಮೂಗುತೋರಿಸುವ ಮೂಲಕ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಹೇಳಿದರು. 

ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ನಮ್ಮ ಮತಕ್ಷೇತ್ರವೂ ಸೇರಿದಂತೆ ಇಡೀ ರಾಜ್ಯದಾಧ್ಯಂತ  ಅಗತ್ಯಕ್ಕಿಂತ ಹೆಚ್ಚು ಭೀಕರ ಮಳೆ ಸುರಿದು  ರೈತರು ತೀವೃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆ ನೋವು ನಮ್ಮಲ್ಲೂ ಇದೇ ಹಾಗಂತ ನಮ್ಮ ಸರಕಾರವೇನು ಕೈಕಟ್ಟಿ ಕುಳಿತಿಲ್ಲ ನಮ್ಮ ಕೃಷಿ ಅಧಿಕಾರಿ , ಕಂದಾಯ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಪ್ರತಿ ರೈತನ ಹೊಲಗಳಿಗೆ ತೆರಳಿ ಸಮೀಕ್ಷೆ ನಡೆಸಿ ಯಾವ ರೈತರ ಹೊದಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎಷ್ಟು ಹಾನಿ ಸಂಭವಿಸಿದೆ ಎಂಬುದರ ಬಗ್ಗೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿದ್ದಾರೆ.  ಈಗಾಗಲೇ ತಾಲೂಕಿನಲ್ಲಿ ಒಟ್ಟು 145 ಕಚ್ಚಾ ಮನೆಗಳು ಬಿದ್ದು ಹಾನಿ ಸಂಭವಿಸಿವೆ. ಇದರಲ್ಲಿ 94 ಮನೆಗಳಿಗೆ ಸರಕಾರ ನಿಗದಿ ಪಡಿಸಿದಂತೆ  ಅದರಲ್ಲಿ 89 ಮನೆಗಳಿಗೆ ಪ್ರತಿ ಮನೆಗೆ 6.500ರೂಗಳಂತೆ, ಹೆಚ್ಚಿಗೆ ಹಾನಿಯಾದ 5 ಮನೆಗಳಿಗೆ 30 ಸಾವಿರದಂತೆ  ಪರಿಹಾರ ಹಣ ವಿತರಿಸಲಾಗಿದೆ ಇನ್ನುಳಿದ ಬಿದ್ದು ಹೋದ ಮನೆಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ರೈತರು ಪ್ರಮುಖವಾಗಿ ಬೆಳೆ ವಿಮೆ ಮಾಡಿಸಲು ಮುಂದಾಗಬೇಕು ಅಂದಾಗ ಮಾತ್ರ ವಿಮೆ ಹಣವನ್ನಾದರೂ ಪಡೆದು ಕೊಂಚ ನೆಮ್ಮದಿಯಿಂದ ಇರಬಹುದು. ಆದರೇ ಬೆಳೆ ವಿಮೆ ಮಾಡಿಸದೇ ನಿರ್ಲಕ್ಷ ವಹಿಸಿದರೆ  ನಷ್ಟ ಅನುಭವಿಸಬೇಕಾಗುತ್ತದೆ ಎಂದರು.  

ಸದ್ಯ ಪ್ರಕೃತಿ ವಿಕೋಪದಡಲ್ಲಿ ಬೆಳೆ ವಿಮೆ ಮಾಡಿಸದೇ ಇರುವವರನ್ನು ಗುರ್ತಿಸಿ ಅವರಿಗೂ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಚಿಂತನೆ ನಡೆಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾತ್ರವಲ್ಲದೇ ರೈತರ ಹೊಲಗಳಿಗೆ ತೆರೆಳಿ ನೈಜ ಮಾಹಿತಿ ಪಡೆದು ಪರಿಹಾರ ಘೋಷಿಸಲಿದ್ದಾರೆ. ಆದರೇ ಕೇಂದ್ರ ಸರಕಾರವೂ ಕೂಡ ನಮ್ಮ ರಾಜ್ಯಕ್ಕೆ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಲು ವಿಶೇಷ  ಪ್ಯಾಕೇಜ್ ಅನುದಾನ ಕೋಡಲು ಮುಂದಾಗಬೇಕು. ಕೇಂದ್ರದವರು ಅನುದಾನ ನೀಡಲು ಮುಂದಾಗುತ್ತಿಲ್ಲ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ನಿಯೋಗವೂ ದೆಹಲಿಗೆ ತೆರಳಿ ಪ್ರದಾನಿ ನರೇಂದ್ರ ಮೋದಿಯವರನ್ನು ಬೇಟಿ ಮಾಡಿ ರೈತರ ಸಮಸ್ಯೆ ಕುರಿತು ಮಾತುಕತೆ ಮೂಲಕ ಅನುದಾನ ನೀಡುವಂತೆ ಕೋರಲಿದ್ದಾರೆ. ಅಧಿಕಾರಿಗಳ ಸಮೀಕ್ಷೆ ಮುಗಿದ ನಂತರ ಇನ್ನುಮುಂದೆ ನಾನೂ ಕೂಡ ಮತಕ್ಷೇತ್ರದ ರೈತರ ಹೊಲಗಳಿಗೆ ತರಳಿ ಬೆಳೆ ಹಾನಿ ಪರಿಶಿಲನೆ ನಡೆಸಲಿದ್ದೇನೆ. ಬಳಿಕ ಸರಕಾರಕ್ಕೆ ನಾನೇ ಖುದ್ದಾಗಿ ವರದಿ ಸಲ್ಲಿಸಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೋಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಈ ವೇಳೆ ಸಮೀಕ್ಷೆಯಲ್ಲಿ  ಆಕಸ್ಮೀಕವಾಗಿ ನಿಜವಾದ ಹಾನಿಗೊಳಗಾದ ರೈತರ ಹೆಸರು ಬಿಟ್ಟುಹೊಗಿದ್ದರೆ ಅಂತಹವರು ತಕ್ಷಣದಲ್ಲಿಯೇ ತಾಲೂಕಾ ಕೃಷಿ ಅಧಿಕಾರಿಗಳಿಗಾಗಲಿ ಅಥವಾ ತಹಶಿಲ್ದಾರವರಿಗೆ ಭೇಟಿ ಮಾಡಿ ಬೆಳೆ ಹಾನಿಯ ಕುರಿತು ಮಾಹಿತಿ ಸಲ್ಲಿಸಬೇಕು ಆಗ ಅವರಿಗೂ ಕೂಡ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು. ಇದರಲ್ಲಿ ಯಾವೂದೇ ತಾರತಮ್ಯ ಮಾಡುವ ಪ್ರಶ್ನೇಯೇ ಇಲ್ಲ ಎಂದರು 

ಸಧ್ಯ ತಾಲೂಕಿನ ಕುಂಟೋಜಿ ಗ್ರಾಮದ  ರೈತನೊಬ್ಬ ಸಾಲಭಾಧೆಯಿಂದ ಆತ್ಮ ಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿದ ತಕ್ಷಣದಲ್ಲಿಯೇ ನಮ್ಮ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ಸರಕಾರಕ್ಕೆ ವರದಿ ಸಲ್ಲಿ ಸೂಚಿಸಿದ್ದೇ  ಅದರಂತೆ  ಅಧಿಕಾರಿಗಳು ಮಾಹಿತಿ ಪಡೆದು ವರದಿ ಊಡು ಸಲ್ಲಿಸಿದ್ದಾರೆ ಆದಷ್ಟು ಬೇಗ 5 ಲಕ್ಷ ರೂಗಳ ಪರಿಹಾರ ವಿತರಿಸಲಾಗುವುದು ಎಂದರು. 

ಈ ವೇಳೆ ತಾಲೂಕಾ ಕೃಷಿ ಇಲಾಖೆ ಸಹಾಯಕ ನಿರ್ಧೇಶಕ ಸುರೇಶ ಭಾವಿಕಟ್ಟಿ ಅವರು ಮಾತನಾಡಿ ಪ್ರಸಕ್ತ 2025-26ನೇ ಸಾಲಿನಲ್ಲಿ ಜನೇವರಿ ಯಿಂದ ಅಕ್ಟೋಬರ 2ರವರೆಗೆ 496.3 ರಷ್ಟು ವಾಡಿಕೆ ಮಳೆಯಾಗಬೇಕಿತ್ತು, ಆದರೇ 796.6 ಮಿಮಿ ಮಳೆಯಾಗಿದ್ದರಿಂದ 61 ರಷ್ಟು ಮಳೆ ಹೆಚ್ಚಾಗಿದೆ. ಅಗಷ್ಟ, ವಾಡಿಕೆ ಮಳೆ 84.5 ಮಿಮಿ ಮೇಳೆಯಾಗಬೇಕಿತ್ತು. 257.8 ಮಿಮಿ ರಷ್ಟು ಮಳೆಯಾಗಿರುತ್ತದೆ. ವಾಡಿಕೆಗಿಂತ ಶೇಕಡಾ 205 ರಷ್ಟು ಮಳೆ ಹೆಚ್ಚಾಗಿದೆ. ಸಪ್ಟೆಂಬರ ತಿಂಗಳಲ್ಲಿ 156.5 ಮಿಮಿ ರಷ್ಟು  ವಾಡಿಕೆ ಮಳೆಯಾಬೇಕಿತ್ತು. ಆದರೇ 169.1 ಮಿಮಿ ರಷ್ಟು ಶೇಕಡಾ 8 ರಷು ಅಗಷ್ಟ ತಿಂಗಳಲ್ಲಿ 526.78 ಹೇಕ್ಟರ್, ತಾಳಿಕೋಟಿಯಲ್ಲಿ, 1692.07ಹೇಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಸರಕಾರ ವರಸದಿ ಸಲ್ಲಿಸಲಾಗಿದ್ದು. ಸಪ್ಟೆಂಬರ್ ತಿಂಗಳಲ್ಲಿ ಮಳೆ ಮುಂದು ವರೆದು ಜಂಟಿ ಸಮೀಕ್ಷೇ ಕಾರ್ಯ ನಡೆದಿದ್ದು ಅಂದಾಜು 14625 ಹೇಕ್ಗಟರ್ ಮುದ್ದೇಬಿಹಾಳತಾಲೂಕಿನಲ್ಲಿ, ಹಾಗೂ 17112 ಹೆಕ್ಟರ್ ತಾಳಿಕೋಟಿ ತಾಲೂಕಿನಲ್ಲಿ ಬೆಳೆ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ  ಸಂಪೂರ್ಣ ಸಮೀಕ್ಷೆ ಕಾರ್ಯ ಮುಗಿದ ಬಳಿಕ  ವಾಸ್ತವ ಬೆಳೆ ಹಾನಿಯ ವರದಿಯನ್ನು ಸರಕಾರಕ್ಕೆ ಸರಕಾರಕ್ಕೆ ಸಲಿಸಲಾಗುವುದು. ಈ ವೇಳೆ ಜಂಟಿ ಸಮೀಕ್ಷೆಡ ಕೈಗೊಂಡು ಹಾನಿಗೊಳಗಾದ ರೈತರ ಹೆಸರಿನ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಒಂದುವೇಳೆ ರೈತರ ಹೆಸರು ಕೈಬಿಟ್ಟು ಹೋದಲ್ಲಿ ಹಾಗೂ ಆಕ್ಷೇಪಣೆ ಇದ್ದಲ್ಲಿ ಏಳು ದಿನಗಳೋಳಗಾಗಿ ಕೃಷಿ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸುವ ಮೂಲಕ ತಮ್ಮ ಹೆಸರನ್ನು ನೋದಾಯಿಕೊಳ್ಳಬಹುದಾಗಿದೆ ಎಂದರು. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿಯಲ್ಲಿ ಹತ್ತಿ ಮತ್ತು ತೊಗರಿ ಬೆಳೆಗಳಿಗೆ ವಿಮಾ ಮಾಡಿಸಿದ ಎಲ್ಲ ರೈತರಿಗೆ ಮದ್ಯ ಋತುವಿನ ಪ್ರತಿಕೂಲತೆ ಅವಾಹನೆ ಮಾಡಲಾಗಿದೆ. ವಿಮೆ ಮಾಡಿದ ರೈತರಿಗೆ ವಿಮೆ ಮೊತ್ತದ ಶೇಕಡಾ 25 ರಷ್ಟು ಪರಿಹಾರವನ್ನು ನೇರವಾಗಿ ಆಯಾ ರೈತರ ಖಾತೆಗಳಿಗೆ ವಿಮೆ ಸಂಸ್ಥೆಯು ಜಮಾ ಮಾಡುತ್ತದೆ ರೈತರು ಪರಿಶಿಲಿಸಿಕೊಳ್ಳಬೇಕು ಎಂದರು. 

ಈ ವೇಳೆ ತಹಶಿಲ್ದಾರ ಕೀರ್ತಿ ಚಾಲಕ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಕೃಷಿ ಅಧಿಕಾರಿ ಗೋವಿಂದಗೌಡ ಮೆದಕಿನಾಳ, ಮುಖಂಡರಾದ ವಾಯ್ ಎಚ್ ವಿಜಯಕರ, ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ ಸೇರಿದಂತೆ ಹಲವರು ಇದ್ದರು.