ಯೋಜನೆಗಳು ಅರ್ಹ ಕಾರ್ಮಿಕ ಸಮುದಾಯಕ್ಕೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕ
The government's objectives are only meaningful when projects reach the eligible labor community.
ಹಾನಗಲ್ 15: ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳು ಅರ್ಹ ಕಾರ್ಮಿಕ ಸಮುದಾಯಕ್ಕೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಚಿದಂಬರ ನಗರದಲ್ಲಿ ಸೌಹಾರ್ದ ಕಟ್ಟಡ ಕಟ್ಟುವ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ನೂತನ ಕಚೇರಿ ಉದಚಿ್ಘಾಟಿಸಿ ಅವರು ಮಾತನಾಡಿದರು. ಸೌಲಭ್ಯಗಳು ಅರ್ಹರನ್ನು ತಲುಪುವಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ.
ಸಾಕಷ್ಟು ಸಂಖ್ಯೆಯ ನಕಲಿ ಕಾರ್ಮಿಕರ ಕಾರ್ಡ್ ರದ್ದುಗೊಳಿಸಬೇಕಿದ್ದು, ಈ ಕಾರ್ಯದಲ್ಲಿ ಕಾರ್ಮಿಕರ ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದ ಅವರು ಕಾರ್ಮಿಕರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಹಲವು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ಬಗ್ಗೆ ಸಂಘಟನೆ ಅರ್ಹರಿಗೆ ಸೂಕ್ತ ಮಾಹಿತಿ ನೀಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಮಂಜುನಾಥ ಕೂಸನೂರ, ಉಪಾಧ್ಯಕ್ಷ ಗೌಸ್ ಅಕ್ಕಿವಳ್ಳಿ,
ಪದಾಧಿಕಾರಿಗಳಾದ ಮುಕ್ತಾರ್ ಖೇಣಿ, ಮಂಜುನಾಥ ಪೂಜಾರ, ಮಕ್ಬೂಲ್ ಪಠಾಣ, ಮೈಲಾರೆಪ್ಪ ಪೂಜಾರ, ರಾಜೇಸಾಬ ಹೆಬ್ಬಳ್ಳಿ, ವಿನಾಯಕ ಬನವಾಸಿ, ಮಕ್ಬೂಲ್ ವಾಲಿಕಾರ, ಮಂಜುನಾಥ ತಳಗೇರಿ, ಗೌಸ್‌ಮೋದೀನ್ ಬಡಗಿ, ಸುರೇಶ ಕಟ್ಟಿಮನಿ, ರವಿ ದೇಶಪಾಂಡೆ, ರಾಜೂ ಗುಡಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 