ಹಿಂದುಸ್ತಾನಿ ಸೇವಾದಳದ ರೂವಾರಿ, ಸ್ವಾತಂತ್ರ್ಯ ಹೋರಾಟಗಾರ ಡಾ. ನಾ.ಸು.ಹರ್ಡೀಕರ
The founder of Hindustani Seva Dal, freedom fighter Dr. Na.Su.Hardikar
ಲೋಕದರ್ಶನ ವರದಿ
ಧಾರವಾಡ 29: ಕಾಲವು ತನಗೆ ಅಗತ್ಯವುಳ್ಳ ವ್ಯಕ್ತಿಗಳನ್ನು ಕಾಲಕಾಲಕ್ಕೆ ಸೃಷ್ಟಿಸುತ್ತಲೇ ಇರುತ್ತದೆಯಂತೆ. ಹಾಗೆ ಹುಟ್ಟಿಬಂದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರೆಂದರೆ ಸ್ವಾತಂತ್ರ್ಯಹೋರಾಟಗಾರ, ಹಿಂದುಸ್ತಾನೀ ಸೇವಾದಳದ ರೂವಾರಿ ಡಾಽಽ ನಾರಾಯಣ. ಸುಬ್ಬರಾವ. ಹರ್ಡೀಕರ ಅವರು. ಹುಟ್ಟಿನಿಂ ದ ಬಡತನವನ್ನೇ ಹಾಸಿ-ಹೊದ್ದು ಬೆಳೆದ ಈ ಶ್ರಮಜೀವಿ ಎತ್ತಿಕೊಂಡವರ ಕೈ ಕೂಸಾಗಿ ಬೆಳೆಯುತ್ತ ಬೆಳೆಯುತ್ತ ತಮ್ಮ 27ನೇ ವಯಸ್ಸಿನಲ್ಲಿ 1915ರಲ್ಲಿ ಹೆಚ್ಚಿನ ವೈದ್ಯಕೀಯ ಶಿಕ್ಷಣಕ್ಕಾಗಿ ಅಮೇರಿಕೆಗೆ ಹೋದರು. ಮಿಚಿಗನ್ ವಿಶ್ವವಿದ್ಯಾಲಯದಿಂದ ಸಾರ‌್ವಜನಿಕ ಆರೋಗ್ಯದಲ್ಲಿ ಎಂ.ಎಸ್.ಸಿ. ಪದವಿ ಪಡೆಯುತ್ತಾರೆ. ಬದುಕನ್ನು ಸ್ವಾತಂತ್ರ್ಯ ಚಳುವಳಿಗಾಗಿ ಮುಡುಪಿಟ್ಟ ಹರ್ಡೀಕರ ತಮ್ಮ 19ನೇ ವಯಸ್ಸಿನಲ್ಲೇ ತಾನು ಅವಿವಾಹಿತನಾಗಿಯೇ ಉಳಿಯುತ್ತೇನೆಂಬ ನಿರ್ಣಯಕ್ಕೆ ಬಂದುಬಿಡುತ್ತಾರೆ. ಅನ್ಯರ ಸೇವೆಯೊಳಗೇನೇ ಕೊನೆಯವರೆಗೂ ಬದುಕನ್ನು ರೂಪಿಸಿಕೊಂಡ ನಾ.ಸು.ಹರ್ಡೀಕರರ 87 ವರ್ಷಗಳ ಸಾರ್ಥಕ ಜೀವನ ಇಂದಿನ ಯುವ ಜನಾಂಗಕ್ಕೊಂದು ಮಾದರಿಯಾಗಿದೆ ಎಂದು ಖ್ಯಾತ ವೈದ್ಯ, ಚಿಂತಕ ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ದಿ. 28ರಂದು ಸಾಧನಕೇರಿಯ ‘ಚೈತ್ರ’ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸ್ವಾತಂತ್ರ್ಯ ಹೋರಾಟಗಾರ, ಸೇವಾದಳದ ರೂವಾರಿ ಡಾ. ನಾ.ಸು. ಹರ್ಡೀಕರ-ಒಂದು ನೆನಪು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ಲಾಲಾ ಲಜಪತರಾಯ, ಲೋಕಮಾನ್ಯ ಟಿಳಕರಂಥ ಮಹಾಮಹಿಮರ ಸಂಪರ್ಕಕ್ಕೆ ಬಂದ ನಂತರ ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಜೀವನ ಮುಡುಪಿಟ್ಟ ಡಾಽಽ ಹರ್ಡೀಕರ, ಚಾರಿತ್ರ್ಯ ನಿರ್ಮಾಣಕ್ಕಾಗಿ ಯುವಪಡೆಯನ್ನು ಹುಟ್ಟುಹಾಕುತ್ತಾರೆ. ದೇಶವನ್ನೆಲ್ಲ ಸುತ್ತಾಡಿ 1923ರಲ್ಲಿ ಹಿಂದುಸ್ತಾನಿ ಸೇವಾದಳ ಸ್ಥಾಪಿಸುತ್ತಾರೆ. ಸ್ವಾತಂತ್ರ್ಯಾನಂತರ ಘಟಪ್ರಭಾದಲ್ಲಿ ಕನಾಟಕ ಆರೋಗ್ಯ ಸಂಸ್ಥೆ ಸ್ಥಾಪಿಸುವಲ್ಲಿ ಸಹಾಯ ಮಾಡುತ್ತಾರೆ. ಇಂಥ ಅನೇಕ ರಚನಾತ್ಮಕ ಕಾರ್ಯಗಳ ಮೂಲಕ ಸಾರ್ಥಕ ಬದುಕು ಕಂಡ ಡಾಽಽ ನಾ.ಸು.ಹರ್ಡೀಕರ ಸದಾ ಪ್ತಾತ: ಸ್ಮರಣೀಯರಾಗಿದ್ದಾರೆ ಎಂದು ಡಾಽಽ ಸಂಜೀವ ಕುಲಕರ್ಣಿ ವಿದ್ವತ್‌ಪೂರ್ಣ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಶಿವಾನಂದ ಶೆಟ್ಟರ ಮಾತನಾಡಿ ಗಾಂಧೀಜಿ ಕೊಟ್ಟ ಪರ್ಯಾಯಗಳಾದ ಸಂಘರ್ಷ, ಸೇವೆ ಮತ್ತು ನಿರ್ಮಾಣ ಗಳಿಗೆ ವಾಸ್ತವದಲ್ಲಿ ಅವೆಲ್ಲವನ್ನು ಆಗುಮಾಡಿ ತೋರಿಸಿದವರೆಂದರೆ ಡಾ. ನಾ.ಸು.ಹರ್ಡೀಕರರು. ಧ್ವಜವಂದನೆಯ ಕಲ್ಪನೆಯನ್ನು ಈ ದೇಶಕ್ಕೆ ಮೊದಲು ಕೊಟ್ಟವರೇ ಅವರು ಎಂದು ನಾ.ಸು.ಹರ್ಡೀಕರರ ದೇಶಸೇವೆಯನ್ನು ಕೊಂಡಾಡಿದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಅನಿಲ ಕಾಖಂಡಿಕಿ, ರಾಜೀವ ಪಾಟೀಲಕುಲಕರ್ಣಿ, ಅನಂಥ ಥಿಟೆ, ಹಿರಿಯ ಚಿತ್ರಕಲಾವಿದ ಎಮ್.ಆರ್.ಬಾಳೀಕಾಯಿ, ಡಾ. ಬಸವರಾಜ ಅಕ್ಕ್ಕಿ, ಡಾ. ಮೋಹನ ಸುಂಕದ, ಹರ್ಷ ಡಂಬಳ, ಗೋವಿಂದ ಕುಮಶಿಕರ, ಪ್ರಹ್ಲಾದ ಯಾವಗಲ್ಲ, ಬಿ.ಆಯ್. ಈಳಿಗೇರ, ಎಚ್.ಎಮ್.ಪಾಟೀಲ, ಅನಂತ ದೇಶಪಾಂಡೆ, ಆರ್.ಎಮ್.ದೊಡ್ಡಮನಿ, ಆರ್.ಆರ್.ಹೊಸಮನಿ, ಅನಂತ ಸಿದ್ಧೇಶ್ವರ, ವಿ.ಸಿ.ನಾಯಕ, ಎಮ್.ಎ.ಕಾಮಟೆ, ಕುಮಾರಸ್ವಾಮಿ ಪುರಾಣಿಕಮಠ, ಪ್ರತಿಭಾ ಕುಲಕರ್ಣಿ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 