ಮೈಲಾರಲಿಂಗೇಶ್ವರ ದೇವರ ಪ್ರಥಮ ವರ್ಷದ ಜಾತ್ರಾ ಮಹೋತ್ಸವ

ಮೈಲಾರಲಿಂಗೇಶ್ವರ ದೇವರ ಪ್ರಥಮ ವರ್ಷದ ಜಾತ್ರಾ ಮಹೋತ್ಸವ The first year of the festival of the Lord Mailaralingeshwara

ಮೈಲಾರಲಿಂಗೇಶ್ವರ ದೇವರ ಪ್ರಥಮ ವರ್ಷದ ಜಾತ್ರಾ ಮಹೋತ್ಸವ

ಶಿಗ್ಗಾವಿ 25  : ಪಟ್ಟಣದ ಪುರಾತನ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿದೇವರ ಪ್ರಥಮ ವರ್ಷದ ಜಾತ್ರಾ ಮಹೋತ್ಸವವು ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1947 ನೇ ಶ್ರೀ ವಿಶ್ವಾವಸು ನಾಮಸಂವತ್ಸರದಮಾಘ ಶುದ್ದ ನವಮಿ ಜ: 27 ಹಾಗೂ 28 ರ ದಶಮಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವರ ಮುಖ್ಯ ಮಹೋತ್ಸವಗಳು ವೈಭವದಿಂದ ಜರಗುವವು. ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿವಿಧ ಶ್ರೀಗಳಾದ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಗಂಜೀಗಟ್ಟಿ ಶ್ರೀ ಗುರುಚರಮೂರ್ತೇಶ್ವರ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಂಕಾಪುರ ಅರಳೇಲೆ ಹಿರೇಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿದ್ಯವಹಿಸುವರು.   ಜ: 27 ರ ಮಂಗಳವಾರ ಬೆಳಿಗ್ಗೆ 8 ಕ್ಕೆ ದ್ವಜಾರೋಹಣ, ಸಂಜೆ 6 ಕ್ಕೆ  ಮೈಲಾರಲಿಂಗೇಶ್ವರ ಸ್ವಾಮಿಯ ಚರಿತ್ರೆಯ ಪ್ರವಚನವನ್ನು ಲಕ್ಷೇಶ್ವರ ತಾಲೂಕಿನ ಗೋನಾಳ ಗ್ರಾಮದ ಪರಮಪೂಜ್ಯ ಶ್ರೀ ರಮೇಶ ಮಹಾಸ್ವಾಮಿಗಳು ಧ್ಯಾನಾಶ್ರಮ ಇವರಿಂದ ಜ : 28 ರಂದು ಬುಧವಾರ ಬೆಳಿಗ್ಗೆ ಗಣಪತಿ ಸ್ವಸ್ತಿ, ರುದ್ರಪವನ, ಕಲಾವೃದ್ಧಿಸೋಮ, ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಪೂರ್ಣಾಹುತಿ ಮಪಾಮಂಗಳಾರತಿ, ದೋಣಿ ತುಂಬಿಸುವುದು ಹಾಗೂ ಗೊರವಯ್ಯರವರಿಂದ ಸರಪಳಿ ಪವಾಡ, ಕಕ್ಕಡ ಪವಾಡ, ಪಾರಿ ಪವಾಡ ಮತ್ತು ಶಿವದಾರ ಪವಾಡನಂತರ ಅನ್ನ ಸಂತರೆ​‍್ಣ ಕಾರ್ಯಕ್ರಮ ಜರಗುವುದು.ಸರ್ವರಿಗೂ ಭಕ್ತಿ ಪೂರ್ವಕ ಸ್ವಾಗತ ಕೋರುವವರು ಶ್ರೀ ಮೈಲಾರಲಿಂಗೇಶ್ವರ ಸೇವಾ ಸಮಿತಿ (ರಿ) ಶಿಗ್ಗಾಂವ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಚೇತನ್ ಶಾಸ್ತ್ರೀಗಳು ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿರುವರು.  ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನುಮನ, ಧನಗಳಿಂದ ಸೇವೆ ಸಲ್ಲಿಸಿ ಮೈಲಾರಲಿಂಗೇಶ್ವರ, ಸ್ವಾಮಿಯ ಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 9945639170, 9844981007 ಕೋರಿದ್ದಾರೆ.