'45' ಚಿತ್ರದಲ್ಲಿ ಸೇರ್ಪಡೆ ಆಯ್ತು 'ಆಫ್ರೋ ಟಪಾಂಗ್' ಹಾಡು

'45' ಚಿತ್ರದಲ್ಲಿ ಸೇರ್ಪಡೆ ಆಯ್ತು 'ಆಫ್ರೋ ಟಪಾಂಗ್' ಹಾಡು The film releasesin Hindi, Tamil, Telugu and Malayalam.

ಲೋಕದರ್ಶನ ವರದಿ 

ಇಂದು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ಬಿಡುಗಡೆ 

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ '45' ಚಿತ್ರ ಕಳೆದವಾರ ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿದ್ದ ಈ ಸಿನಿಮಾ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೂ ಮುನ್ನವೇ ಕೆನಡಾ ಸೇರಿದಂತೆ ವಿದೇಶದ ಅನೇಕ ಸ್ಥಳಗಳಲ್ಲಿ ಪ್ರೀಮಿಯರ್ ಕಂಡು ಮೆಚ್ಚುಗೆ ವ್ಯಕ್ತವಾಗಿದ್ದ ಈ ಸಿನಿಮಾಕ್ಕೆ ಕರ್ನಾಟಕದಲ್ಲೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಕರ್ನಾಟಕದಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿರುವ '45' ಸಿನಿಮಾದಲ್ಲಿ ಹಾಡೊಂದು ಸೇರೆ​‍್ಡಗೊಂಡಿದೆ. ಹೌದು ಗಿಟ್ಟೋ ಕಿಡ್ಸ್‌ ಸ್ಟೆಪ್ ಹಾಕಿದ್ದ 'ಆಫ್ರೋ ಟಪಾಂಗ್' ಪ್ರಮೋಷನಲ್ ಹಾಡಿನಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸಹ ಹೆಜ್ಜೆ ಹಾಕಿದ್ದರು. ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಮೂಡಿಬಂದಿದ್ದ ಈ ಹಾಡು ಮಿಲಿಯನ್‌ಗಟ್ಟಲೆ ಹಿಟ್ಸ್‌ ದಾಖಲಿಸಿತ್ತು. ಆದರೆ ಸಿನಿಮಾದಲ್ಲಿ ಈ ಹಾಡು ಇರಲಿಲ್ಲ. ಇದೀಗ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಆಫ್ರೋ ಟಪಾಂಗ್' ಹಾಡನ್ನು ಚಿತ್ರದಲ್ಲಿ ಸೇರಿಸಲಾಗಿದೆ. 

ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ '45' ಅದ್ದೂರಿಯಾಗಿ ನಿರ್ಮಾಣವಾಗುವುದರ ಜತೆಗೆ ಕರ್ನಾಟಕ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ 'ಕೆವಿಎನ್ ಪ್ರೊಡಕ್ಷನ್ಸ್‌' ಬಿಡುಗಡೆ ಮಾಡಿತ್ತು. ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿರುವ '45' ಸಿನಿಮಾ ಇಂದು (ಜ. 1) ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತೆರೆಕಾಣಲಿದೆ. ಈಗಾಗಲೇ ಆಯಾ ಸ್ಥಳಗಳಲ್ಲಿ ಭರ್ಜರಿ ಪ್ರಚಾರ ಮಾಡಿರುವ ಚಿತ್ರತಂಡ, ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದೆ. ನಾಲ್ಕೂ ಭಾಷೆಗಳಲ್ಲೂ ಪ್ರತಿಷ್ಠಿತ ಸಂಸ್ಥೆಗಳೇ ವಿತರಣೆ ಮಾಡಲಿದ್ದು, ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ರೀಲೀಸ್ ಆಗಲಿದೆ '45' ಸಿನಿಮಾ. ತೆಲುಗಿನಲ್ಲಿ 'ಮೈತ್ರಿ ಮೂವಿ ಮೇಕರ​‍್ಸ‌' ಡಿಸ್ಟ್ರಿಬ್ಯೂಷನ್ ಹಕ್ಕು ಪಡೆದುಕೊಂಡಿದೆ. ತಮಿಳಿನಲ್ಲಿ 'ಎಜಿಎಸ್ ಎಂಟರ್‌ಟೈನ್‌ಮೆಂಟ್', ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಒಡೆತನದ 'ವೇಫರರ್ ಫಿಲಂಸ್' ಹಾಗೂ ಹಿಂದಿಯಲ್ಲಿ ಜೀ ಸ್ಟೋಡಿಯೋಸ್ ವಿತರಣೆ ಮಾಡಲಿದೆ.