ಓಷಧ ಕ್ಷೇತ್ರ ಸೇವಾ ಕ್ಷೇತ್ರ: ರಘುರಾಮ್

ಓಷಧ ಕ್ಷೇತ್ರ ಸೇವಾ ಕ್ಷೇತ್ರ: ರಘುರಾಮ್  The field of medicine is a field of service: Raghuram

ಲೋಕದರ್ಶನ ವರದಿ 

ಹಾರೂಗೇರಿ 28 : ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರ ಆದಾಯ ಗಳಿಸುವ ವ್ಯಾಪಾರವಲ್ಲ; ಅದು ಸಾರ್ವಜನಿಕರ ಜೀವ ರಕ್ಷಿಸುವ ಸೇವಾ ಕ್ಷೇತ್ರವಾಗಿದೆ ಎಂದು ಬೆಳಗಾವಿ ಓಷಧ ನಿಯಂತ್ರಕ ಸಹಾಯಕ ರಘುರಾಮ್ ಎನ್‌.ವಿ. ಹೇಳಿದರು. ಹಾರೂಗೇರಿ ಕ್ರಾಸ್‌ನ ಎಸ್‌.ಎಂ. ನಾಗರಗೌಂಡ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಾರೂಗೇರಿ ಸರ್ಕಲ್ ಓಷಧ ವ್ಯಾಪಾರಿಗಳ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಫಾರ್ಮಾಸಿಸ್ಟ್‌ ದಿನಾಚರಣೆ ಹಾಗೂ ಉತ್ತಮ ಫಾರ್ಮಾಸಿಸ್ಟ್‌ ಐಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಆರೋಗ್ಯಕರ ಭವಿಷ್ಯಕ್ಕಾಗಿ ಫಾರ್ಮಾಸಿಸ್ಟ್‌ಗಳನ್ನು ಸಬಲೀಕರಣಗೊಳಿಸುವುದು ಅಗತ್ಯ. ಡಿಜಿಟಲ್ ಹಾಗೂ ಎಐ ಯುಗದಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಮೀರಿ ತಂತ್ರಜ್ಞಾನ ಮತ್ತು ಸುಧಾರಿತ ಜ್ಞಾನವನ್ನು ಅಳವಡಿಸಿಕೊಳ್ಳಲು ನಿರಂತರ ತರಬೇತಿ ಅಗತ್ಯ ಎಂದು ಅವರು ಹೇಳಿದರು.

ತೇರದಾಳದ ಸಹ ಪ್ರಾಧ್ಯಾಪಕ ಸನತಕುಮಾರ ನ್ಯಾಮಗೌಡ ಮಾತನಾಡಿ, ಅತಿಯಾದ ರೋಗನಿರೋಧಕ ಓಷಧಿಗಳ ಬಳಕೆಯಿಂದ ಜಾಗತಿಕವಾಗಿ ಶೇ.70ರಷ್ಟು ಜನರಲ್ಲಿ ರೋಗ ನಿಯಂತ್ರಣ ಶಕ್ತಿ ಕುಂದುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಓಷಧಿಗಳ ಮಿತ ಬಳಕೆ ಹಾಗೂ ಸರಿಯಾದ ಉಪಯೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ಓಷಧಗಾರನ ಕರ್ತವ್ಯ ಎಂದರು. ಬೆಳಗಾವಿ ಓಷಧ ಪರೀವೀಕ್ಷಕ ದಯಾನಂದ ಕಾಡದೇವರ ಮಾತನಾಡಿ, ವೈದ್ಯರು ನೀಡುವ ಶಿಫಾರಸು ಚೀಟಿಯ ಆಧಾರದ ಮೇಲೆಯೇ ಓಷಧ ನೀಡಬೇಕು.

ಯುವಕರು ಹಾಗೂ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು. ಸಮಾರಂಭದಲ್ಲಿ ತೇರದಾಳದ ಸನತಕುಮಾರ ನ್ಯಾಮಗೌಡ ಹಾಗೂ ಸುನೀಲ ಜಲಾಲಪುರ ಅವರಿಗೆ ಉತ್ತಮ ಫಾರ್ಮಾಸಿಸ್ಟ್‌ ಐಕಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷ ಬಸವರಾಜ ತುಳಸಿಗೇರಿ ಅಧ್ಯಕ್ಷತೆ ವಹಿಸಿದ್ದರು. ವಿವೇಕ ನಾಗರಗೌಂಡ, ಹನಮಂತ ಕುಲಗೋಡ, ರಾಮು ದರೂರ, ಷಣ್ಮುಖ ತೇರದಾಳ, ಕಾರ್ಯದರ್ಶಿ ಪರಮೇಶ ಬಾಡಗಿ, ಖಜಾಂಚಿ ಅನೀಲ ಬಾಗೇವಾಡಿ ಸೇರಿದಂತೆ ಹಲವು ಓಷಧ ವ್ಯಾಪಾರಿಗಳು ಉಪಸ್ಥಿತರಿದ್ದರು.