ಆದ್ಧೂರಿಯಾಗಿ ಶೋಭಾಯಾತ್ರೆ ಮೂಲಕ ಜರುಗಿದ ಗಣೇಶ ಮೂರ್ತಿಗಳ ಸಂಭ್ರಮದ ವಿದಾಯ
The festive farewell of the Ganesh idols was celebrated with a grand procession.
ಆದ್ಧೂರಿಯಾಗಿ ಶೋಭಾಯಾತ್ರೆ ಮೂಲಕ ಜರುಗಿದ ಗಣೇಶ ಮೂರ್ತಿಗಳ ಸಂಭ್ರಮದ ವಿದಾಯ
ರಾಣಿಬೆನ್ನೂರ: 9 ನಗರದ ಇತಿಹಾಸದಲ್ಲಿಯೇ ಇದೇ ್ರ್ರಥಮ ಬಾರಿಗೆ ಬುಧವಾರ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ಬೃಹತ್ ಶೋಭಾಯಾತ್ರೆ ಮೆರವಣಿಗೆ ಐತಿಹಾಸಿಕವಾಗಿ ಅತ್ಯಂತ ಸಡಗರ ಸಂಭ್ರಮದಿಂದ. ಲಕ್ಷಾಂತರ ಜನ ಸಮುದಾಯದ ಮಧ್ಯೆ ಅದ್ದೂರಿಯಾಗಿ ಜರುಗಿತು.
ನಗರದ ಪೋಸ್ಟ್ ಸರ್ಕಲ್ ಬಳಿ ವಿರಾಟ ಹಿಂದೂ ಮಹಾಸಭಾ ಸಮಿತಿಯ ಗಣೇಶ, ಮೆಡ್ಲೇರಿ ರಸ್ತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿಯ ಅನ್ನದಾತ ಸಂಸ್ಥೆಯ ಗಣೇಶ ಹಾಗೂ ಕಾಕಿ ಗಲ್ಲಿಯ ವಿಜಯಲಕ್ಷ್ಮೀ ಹವ್ಯಾಸಿ ಕ್ರೀಡಾ ಸಂಘದ ಗಣೇಶ ಮೂರ್ತಿಗಳ ಶೋಭಾಯಾತ್ರೆಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಮಾತನಾಡಿದ ಅವರು, ನಗರದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದ್ದು ಕೂಡಲ ಸಂಗಮದಲ್ಲಿ ಮೂರು ನದಿಗಳ ತ್ರಿವೇಣಿ ಸಂಗಮದಂತಾಗಿದೆ. ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಯಾವುದೇ ಜಾತಿ, ಮತ, ಪಂಥ ಹಾಗೂ ಬೇಧ ಭಾವ ಎನ್ನದೇ ಶೋಭಾಯಾತ್ರೆಯಲ್ಲಿ ಜನರು ಸೇರಿರುವುದು ನಾವೆಲ್ಲ ಒಂದು ಭಾವೈಕ್ಯತೆಯ ಬಂಧುಗಳು ಎನ್ನುವ ಭಾವನೆ ಮೂಡಿಸಿದೆ. ನಮ್ಮ ಧರ್ಮ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.
ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಪುರುಷರ ನೃತ್ಯಕ್ಕಾಗಿ ಆಯೋಜಿಸಲಾಗಿದ್ದ ಪ್ರತ್ಯೇಕವಾಗಿ 06 ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಇನ್ನೂ ಮೆರವಣಿಗೆಯಲ್ಲಿ 11 ಜ್ಯೋತಿಲಿಂಗ ದೇವಸ್ಥಾನಗಳ ಕಲಾಕೃತಿಗಳು, ಸಂಗೋಳ್ಳಿ ರಾಯಣ್ಣ, ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ, ಭಾರತ ಮಾತೆಯ ಮೂರ್ತಿಗಳು ಮೆರವಣಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಮೆರವಣಿಗೆ ದಾರಿಯೂದ್ದಕ್ಕೂ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಗರದ ಅಂಚೆ ವೃತ್ತದಿಂದ ಮದ್ಯಾಹ್ನ 02ಗಂಟೆಗೆ ಪ್ರಾರಂಭವಾದ ಶೋಭಾಯಾತ್ರೆ ಸಂಗಮ್ ವೃತ್ತ, ರಂಗನಾಥ ನಗರ, ಕುಂಬಾರ ಓಣಿ, ಸುಭಾಶ ಚೌಕ್, ದೊಡ್ಡಪೇಟೆ, ತಳವಾರ ಗಲ್ಲಿ, ಚಕ್ಕಿಮಿಕ್ಕಿ ಸರ್ಕಲ್, ಎಮ್.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣಕ್ಕೆ ಬಂದು ಸೇರಿತ್ತು. ನಂತರ ಸಂಜೆ ಬಸ್ ನಿಲ್ದಾಣದ ಬಳಿ ಮಹಾ ಮಂಗಳಾರತಿಯೊಂದಿಗೆ ವಿಶೇಷ ಸಿಡಿಮದ್ದು ಪ್ರದರ್ಶನ ನೆರೆದ ಲಕ್ಷಾಂತರ ಜನರ ಮಧ್ಯ ಬಹು ವಿಬೃಂಜಣೆಯಿಂದ ನೋಡುಗರ ಗಮನ ಸೆಳೆಯಿತು. ಇದಾದ ನಂತರ ಮೆರವಣಿಗೆಯು ಎನ್.ವಿ.ಹೋಟೆಲ್ವರೆಗೆ ಸಾಗಿ, ಅಲ್ಲಿಂದ ತಾಲೂಕಿನ ಕೋಡಿಯಾಲ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ವಿರಾಟ ಹಿಂದೂ ಸಮಿತಿ ಅಧ್ಯಕ್ಷ ನಾಗರಾಜ ಪವಾರ, ಅನ್ನದಾತ ಸಂಸ್ಥೆಯ ಅಧ್ಯಕ್ಷ ನಾಗರಾಜ ಸಾಲಗೇರಿ, ಕಾಕಿಗಲ್ಲಿಯ ಹವ್ಯಾಸಿ ಕ್ರೀಡಾ ಸಂಘದ ಅಧ್ಯಕ್ಷ ಲಿಂಗರಾಜ ಬೂದನೂರು, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಚೋಳಪ್ಪ ಕಸವಾಳ, ಸಿದ್ದು ಚಿಕ್ಕಬಿದರಿ, ಶ್ರೀನಿವಾಸ ಸುರಹೊನ್ನೆ, ಅಭಿಷೇಕ ಗೌಡಶಿವಣ್ಣನವರ, ರಾಜು ಬೂದನೂರ, ಸೋಮಣ್ಣ ಗೌಡಶಿವಣ್ಣನವರ, ಪವನಕುಮಾರ ಮಲ್ಲಾಡದ, ಅಮೋಘ ಬಾದಾಮಿ, ಮಂಜುನಾಥ ಕಬ್ಬಿಣದ, ಮೈಲಪ್ಪ ಗೋಣಿಬಸಮ್ಮನವರ, ಮೌನೇಶ ತಳವಾರ, ಅಭಿಲಾಷ ಬಾದಾಮಿ, ಮೃತ್ಯುಂಜಯ ಕಾಕೋಳ, ಅಶೋಕ ಪಾಸಿಗಾರ, ಕೊಟ್ರೇಶ ಕಮದೋಡ, ಭಾರತಿ ಜಂಬಗಿ, ರಾಜು ಬಣಕಾರ, ಸುಜಾತ ಆರಾಧ್ಯಮಠ, ಭರಮಪ್ಪ ಪೂಜಾರ, ಕುಬೇರ್ಪ ಕೊಂಡಜ್ಜಿ, ಮಾಳಪ್ಪ ಪೂಜಾರ, ಬಸವರಾಜ ಹುಲ್ಲತ್ತಿ, ದಯಾನಂದ ಪಾಟೀಲ, ಮೃತ್ಯುಂಜಯ ಪಾಟೀಲ, ಜಗದೀಶ ಎಲಿಗಾರ, ಶಿವಕುಮಾರ ಹರ್ಕನಾಳ, ರವಿ ತಳವಾರ ಸೇರಿದಂತೆ ಮತ್ತಿತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 