ಆನೆಗೊಂದಿ ಉತ್ಸವ ಜ. 3ರಿಂದ ವಿವಿಧ ಕ್ರೀಡೆಗಳು: ಸುನೀಲ್ ಕುಮಾರ್
ಕೊಪ್ಪಳ 27: ಪ್ರಸಕ್ತ ಸಾಲಿನ ಆನೆಗೊಂದಿ ಉತ್ಸವ ಆಚರಣೆ ಅಂಗವಾರಿ 2020ರ ಜನವರಿ 03 ರಿಂದ ವಿವಿಧ ಕ್ರೀಡೆಗಳು ಜರುಗಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪುರಾತನ ಇತಿಹಾಸವುಳ್ಳ ಆನೆಗೊಂದಿಯ ಉತ್ಸವವನ್ನು ಕನರ್ಾಟಕ ಸಕರ್ಾರ ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 2020ರ ಜನವರಿ. 09 ಮತ್ತು 10 ರಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ. 03 ರಿಂದ 09 ರವರೆಗೆ ವಿವಿಧ ಕ್ರೀಡಾ, ಸಾಂಪ್ರದಾಯಿಕ ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಗ್ರಾಮೀಣ ಕ್ರೀಡೆ ಆಕರ್ಷಣೆಯಾದ ಕುಸ್ತಿ ಸ್ಪಧರ್ೆಯಲ್ಲಿ ಪುರುಷರಿಗೆ ಆನೆಗೊಂದಿ ಕುಮಾರ, ಆನೆಗೊಂದಿ ಕೇಸರಿ ಹಾಗೂ ಮಹಿಳೆಯರಿಗೆ ಆನೆಗೊಂದಿ ಕುಮಾರಿ, ಆನೆಗೊಂದಿ ಕಿಶೋರಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಆನೆಗೊಂದಿ ಉತ್ಸವದ ಪ್ರಚಾರಾಂದೋಲನ ಪ್ರಾರಂಭೋತ್ಸವ ಅಂಗವಾಗಿ ಬೈಕ್ ಸ್ಟಂಟ್ ಹಾಗೂ ಗಾಳಿಪಟ ಉತ್ಸವ ನೊಪಾಸನಾ ತಂಡದಿಂದ ಗಂಗಾವತಿಯ ಶ್ರೀ ಚನ್ನಬಸವೇಶ್ವರ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಅದೇ ದಿನ ಶಿಲ್ಪಕಲಾ ಸ್ಪರ್ದೇ ಫೋಟೋಗ್ರಫಿ ಸ್ಪರ್ಧೆ ಆನೆಗೊಂದಿಯಲ್ಲಿ ಪ್ರಾರಂಭವಾಗಲಿದೆ. ವಿಶೇಷ ಆಕರ್ಷಣೆಯಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಆನೆಗೊಂದಿ ಕುಮಾರ/ಕುಮಾರಿ ಹಾಗೂ ಆನೆಗೊಂದಿ ಕೇಸರಿ/ ಕಿಶೋರಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳ ವಿವರ ಈ ಕೆಳಗಿನಂತಿದೆ.
ಗ್ರಾಮೀಣ ಕ್ರೀಡೋತ್ಸವ: ಗ್ರಾಮೀಣ ಕ್ರೀಡೋತ್ಸವದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಕೆಸರು ಗದ್ದೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಮಲ್ಲಕಂಬ ಪ್ರದರ್ಶನ, ಕುಸ್ತಿ (ಆನೆಗೊಂದಿ ಕುಮಾರ/ ಕುಮಾರಿ/ ಕಿಶೋರಿ/ ಕೇಸರಿ ಸ್ಪಧರ್ೆ), ಪುರಷರಿಗೆ ಕಬಡ್ಡಿ, ಮಹಿಳೆಯರಿಗೆ ವಾಲಿಬಾಲ್, ಅಲ್ಲದೇ ಸ್ಲೋ ಸೈಕಲ್ ರೇಸ್, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ.
ಸಂಪ್ರದಾಯಿಕ ಸ್ಪರ್ಧೆಗಳು: ಸಾಂಪ್ರದಾಯಿಕ ಸ್ಪಧರ್ೆಗಳಲ್ಲಿ ಶಿಲ್ಪಕಲೆ, ರಂಗೋಲಿ (ಮಹಿಳೆ), ತಳಿರುತೋರಣ ಅಲಂಕಾರ (ಆನೆಗೊಂದಿ ವಾರ್ಡವಾರು), ಚಿತ್ರಕಲಾ, ಫೋಟೋಗ್ರಫಿ, ಪಗಡೆಯಾಟ, ಅಡಿಗೆ ರಾಣಿ ಕಾರ್ಯಕ್ರಮದಡಿ ವಿಜಯನಗರ ಕಾಲದ ಪಾರಂಪರಿಕ ಅಡುಗೆ ಹಾಗೂ ಸ್ಥಳೀಯ ಪದ್ಧತಿ ಅಡುಗೆ, ಎರಡು ಪ್ರಕಾರಗಳಲ್ಲಿ ಅಡುಗೆ ಸ್ಪರ್ಧೆ ಜರುಗಲಿದೆ.
ಭೂ ಸಾಹಸ ಕ್ರೀಡೆ: ಭೂ ಸಾಹಸ ಕ್ರೀಡೆಯಲ್ಲಿ ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಲ್ಯಾಡರ್ ಕ್ಲೈಂಬಿಂಗ್, ಟಾಗರ್ೆಟ್ ಶೂಟಿಂಗ್, ಝಿಪ್ಲೈನ್, ಅಬ್ಸ್ಟ್ಯಾಕಲ್ಸ್, ರ್ಯಾಪೆಲಿಂಗ್, ಸ್ಪೋಟ್ಸ್ ಕ್ಲೈಂಬಿಂಗ್, ರೋಪ್ ಕ್ಲೈಂಬಿಂಗ್, ಅಲ್ಪೈನ್ ನೆಟ್ ಕ್ರೀಡೆ ನಡೆಯಲಿವೆ.
ಜಲ ಸಾಹಸ ಕ್ರೀಡೆಗಳು: ಜಲ ಸಾಹಸ ಕ್ರೀಡೆಗಳಲ್ಲಿ ಬೋಟಿಂಗ್, ಸರ್ಫ ಮಾಡ್ಯೂಲ್, ಕಯಾಕಿಂಗ್, ವಾಟರ್ ಸಫರ್ಿಂಗ್, ರೋಯಿಂಗ್, ಕೆನೊಯಿಂಗ್, ಮೋಟಾರ್ ಬೋಟ್ ರೈಡ್, ಬನಾನ ರೈಡ್ ಹಾಗೂ ವಾಟರ್ ಸ್ಕೂಟರ್ ಸ್ಪಧರ್ೆ ಜರುಗಲಿದೆ.
ಮ್ಯಾರಾಥಾನ: ಪುರುಷರಿಗೆ 12 ಕಿ.ಮೀ ಹಾಗೂ ಮಹಿಳೆಯರಿಗೆ 6 ಕಿ.ಮೀ. ಮ್ಯಾರಾಥಾನ್, ವಿಶೇಷ ಚೇತನರಿಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಹೀಲ್ ಚೇರ್ ಸ್ಪಧರ್ೆ ಮತ್ತು ವಿಶೇಷ ಕ್ರೀಡೆಗಳಲ್ಲಿ ಬೈಕ್ ಸ್ಟಂಟ್, ಹೆರಿಟೇಜ್ ವಾಕ್, ಸೈಕಲ್ ಜಾಥಾ ಹಾಗೂ ಗಾಳಿಪಟ ಪ್ರದರ್ಶನ ನಡೆಯಲಿದೆ. ಆನೆಗೊಂದಿ ಉತ್ಸವದ ನಿಮಿತ್ತ ನಡೆಯಲಿರುವ ವಿವಿಧ ಸ್ಪಧರ್ೆಗಳು ಹಾಗೂ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾ ಆಸಕ್ತರು, ಸ್ಪಧರ್ಾಳುಗಳು ಹಾಗೂ ಅರ್ಹರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಈ ಕುರಿತಾದ ಮಾಹಿತಿಗಾಗಿ ಗ್ರಾಮೀಣ ಕ್ರೀಡೋತ್ಸವ ಹಾಗೂ ಮ್ಯಾರಾಥಾನಗೆ ಸಂಬಂಧಿಸಿದಂತೆ ಸಹಾಯಕ ನಿದರ್ೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಧ್ಯಕ್ಷರು ಕ್ರೀಡಾ ಸಮಿತಿ ಆನೆಗೊಂದಿ ಉತ್ಸವ ಮೊ.ಸಂ. 8197058425, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಮೊ.ಸಂ. 6360541175, ತಾಲೂಕ ಕ್ರೀಡಾಧಿಕಾರಿಗಳು ಗಂಗಾವತಿ ಮೊ.ಸಂ. 7411755523, ಕೊಪ್ಪಳ ಮೊ.ಸಂ. 9036773070, ಯಲಬುಗರ್ಾ ಮೊ.ಸಂ. 8970288857, ಕುಷ್ಟಗಿ ಮೊ.ಸಂ. 9945501033 ಹಾಗೂ ಗಂಗಾವತಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮೊ.ಸಂ. 9945300713, ಇವರನ್ನು ಸಂಪಕರ್ಿಸಬಹುದು. ಸಾಂಪ್ರದಾಯಿಕ ಸ್ಪರ್ದೇ ಹಾಗೂ ವಿಶೇಷ ಚೇತನರ ಸ್ಪಧರ್ೆಗಳಿಗೆ ಸಂಬಂಧಿಸಿದಂತೆ ಉಪನಿದರ್ೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಪ್ಪಳ ಮೊ.ಸಂ. 8722420781, ಸಹಾಯಕ ನಿದರ್ೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊ.ಸಂ. 9481715941, ಗಂಗಾವತಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೊ.ಸಂ. 9538373948, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ, ವಿಶೇಷ ಚೇತನ ಇಲಾಖೆ ಸಹಾಯಕ ನಿರ್ದೇಶಕ ಮೊ.ಸಂ. 9900124253 ಕ್ಕೆ ಹಾಗೂ ಜಲಸಾಹಸ, ಭೂಸಾಹಸ ಹಾಗೂ ವಿಶೇಷ ಕ್ರೀಡೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಜಿಲ್ಲಾ ಉಪಾಧೀಕ್ಷಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರು ಮೊ.ಸಂ. 8197058425, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೊ.ಸಂ. 9731042063, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೊ.ಸಂ. 9686397868, ಗಂಗಾವತಿ ತಾಲೂಕ ಕ್ರೀಡಾಧಿಕಾರಿ ಮೊ.ಸಂ. 7411755523 ಹಾಗೂ ನೊಪಾಸನಾ ತಂಡ ಮೊ.ಸಂ. 9845145046 ಮತ್ತು ಯುವ ಸ್ಪಂದನಾ ತಂಡ ಮೊ.ಸಂ. 9535993848 ಕ್ಕೆ ಸಂಪಕರ್ಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿದರ್ೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಧ್ಯಕ್ಷರು ಕ್ರೀಡಾ ಸಮಿತಿ ಆನೆಗೊಂದಿ ಉತ್ಸವ, ಇವರಿಗೆ ಅಥವಾ ಮೊ.ಸಂ. 8197058425, ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಆನೆಗೊಂದಿ ಉತ್ಸವ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 