ಭಾರೀ ಮಳೆಗೆ ಬಿದ್ದ ಮನೆ ಪ್ರಾಣಾಪಾಯದಿಂದ ಪಾರಾದ ಕುಟುಂಬಸ್ಥರು

ಭಾರೀ ಮಳೆಗೆ ಬಿದ್ದ ಮನೆ ಪ್ರಾಣಾಪಾಯದಿಂದ ಪಾರಾದ ಕುಟುಂಬಸ್ಥರು The family members escaped from the danger of their lives when the house fell due to the heavy rain

ವರದಿ: ಸಚೀನ ಇಂಡಿ  

ಇಂಡಿ, 27 : ತಾಲ್ಲೂಕಿನಾದ್ಯಂತ ಎರಡೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.ಜನರು ಹೋರಗಡೆ ಬರದ ಹಾಗೆ ಮಾಡಿದೆ. ಹಾಗೂ ರೈತರ ಬೆಳೆಗಳು ಕೂಡಾ ನೀರಲ್ಲಿ ಮುಳುಗಿ ಹೋಗುವಿಗೆ. ರೈತರ ಬದುಕು ಅಲ್ಲೊಲ್ಲ ಕಲ್ಲೊಲ್ ಆಗಿದೆ.ಇದೆ ರೀತಿ ಮಳೆ ಮುಂದುವರಿದರೆ ಕೆಲಸ ಇಲ್ಲದೆ ಜೀವನ ಮಾಡಬಹುದು ಹೇಗೆ ಹಾಗೂ ಮುಂದೆ ಏನು ಮಾಡಬೇಕು ಎಂಬ ಚಿಂತೆಯಲ್ಲಿ ಇದ್ದಾರೆ ಸಾರ್ವಜನಿಕರು ಹಾಗೂ ರೈತರು. ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆ ಸುಮಾರು ಮನೆಗಳು ಸಂಪೂರ್ಣ ಬಿದ್ದಿವೆ.ತಡವಲಗಾ ಗ್ರಾಮದ ವಾರ್ಡ್‌ ನಂಬರ 6 ರಲ್ಲಿ ಕೆಲವು ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದು ಮನೆಯಲ್ಲಿ ಇದ್ದ ಕುಟುಂಬಸ್ಥರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಗ್ರಾಮದಲ್ಲಿ ಸುಮಾರು ಹದಿನೈದು ಮನೆಗಳು ಬಿದ್ದಿವೆ.ಹಾಗೂ ವಾರ್ಡ್‌ ನಂಬರ ಒಂದರಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿ ಇದ್ದ ಜನರು ನೀರು ಹೋರಹಾಕುವುದರಲ್ಲಿ ನಿರಂತರವಾಗಿದ್ದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದರು. ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ಗುರುಬಟ್ಟಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ  ನಡೆಸಿದರು. ಹಾಗೂ ಕುಸಿತಗೊಂಡ ಮನೆಗಳ ಬಗ್ಗೆ ಮಾಹಿತಿ ಮೇಲಾಧಿಕಾರಿಗಳ ಸಲ್ಲಿಸಲಾಗುವುದು ಎಂದು ಹೇಳಿದರು.1)  ನಾವು ರಾತ್ರಿ ವೇಳೆ ನಿದ್ರೆಯಲ್ಲಿ ಇದ್ದೆವು. ರಾತ್ರಿ ಎರಡು ಗಂಟೆಯ ಸಮಯದಲ್ಲಿ ಬೆಕ್ಕು ಸಪ್ಪಳ ಮಾಡಿತ್ತು. ಮಹಾನಾಮಿ ನಿಮಿತ್ತ ಮನೆಯಲ್ಲಿ ದೀಪ ಇರುತ್ತವೆ ತಕ್ಷಣ ಎದ್ದು ನೋಡುವುದರಷ್ಟರಲ್ಲಿ ಮನೆ ಕುಸಿದು  ಬಿಳಲು ಆರಂಭವಾಯಿತ್ತು ತಕ್ಷಣ ನಾವು  ಮನೆಯಿಂದ ಹೊರಗೆ ಬಂದು ಪ್ರಾಣ ಉಳಿಸಿಕೊಂಡೆವು.ಆ ಬೆಕ್ಕೆ  ನಮ್ಮ ಪಾಲಿಗೆ ದೇವರ ರೂಪದಲ್ಲಿ ಬಂದು ನಮ್ಮ ಜೀವ ಉಳಿಸಿದೆ. 

*ಸುಸಲಾಬಾಯಿ ಆಳೂರ ಮನೆ ಕಳೆದುಕೊಂಡ ನೋಂದ ಮಹಿಳೆ* 

2) ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಹಾಗೂ ಅನೇಕ ಮನೆಗಳು ಬಿದ್ದಿದ್ದು ಹಾಗೂ ಕೆಲವು ಮನೆಗಳಿಗೆ ಸೋರುತ್ತಿವೆ.ಅವರಿಗೆ ಸರ್ಕಾರಿ ಶಾಲೆಯಲ್ಲಿ ಆಶ್ರಯ ನೀಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕಾಳಜಿ ಕೇಂದ್ರ ತೆರೆಯಲು ಹೇಳುತ್ತೆನೆ. 

ಮತಿ ಸುನಂದಾ ವಾಲಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಡವಲಗಾ3) ತಡವಲಗಾ ಗ್ರಾಮದಲ್ಲಿ ನಿರಂತರವಾಗಿ ಮಳೆ ಆಗಿದ್ದರಿಂದ ಸುಮಾರು  ಮನೆಗಳು ಬಿದ್ದಿವೆ.ನಾನು ಖುದ್ದಾಗಿ ಮನೆಗಳಿಗೆ ಭೇಟಿ ಪರೀಶೀಲನೆ ಮಾಡಿ ಸೂಕ್ತ ಪರಿಹಾರಕ್ಕಾಗಿ ಮೇಲಾಧಿಕಾರಿಗಳಿಗೆ ಹಾಳಾದ ಮನೆಗಳ ಮಾಹಿತಿ ಸಲ್ಲಿಸುತ್ತೆನೆ  

*ಮಂಜುನಾಥ ಗುರುಬಟ್ಟ ತಡವಲಗಾ ಗ್ರಾಮ ಆಡಳಿತ ಅಧಿಕಾರಿ* 

4) ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆಲವು ಮನೆಗಳಿಗೆ ನೀರು ನುಗ್ಗಿದ್ದು.ಹಾಗೂ ಜೆಸಿಬಿ ಮೂಲಕ ಗಿಟಾರ್ ತೆಗೆದು ನೀರು ಹೋರಹಾಕುವ ಕೆಲಸ ಮಾಡುತ್ತಿದ್ದೆವೆ*ಮಂಜುನಾಥ ಡೊಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಡವಲಗಾ*