ಒಂದು ಧರಣಿ ಸುಧೀರ್ಘವಾಗಿ ನಿಂತಿದ್ದೇ ತೀವ್ರಕ್ಕೆ ಸಾಕ್ಷಿ : ಎ. ಮುರಿಗೆಪ್ಪ
The fact that a sit-in has lasted for so long is proof of its seriousness: A. Murigappa
ಲೋಕದರ್ಶನ ವರದಿ
ಒಂದು ಧರಣಿ ಸುಧೀರ್ಘವಾಗಿ ನಿಂತಿದ್ದೇ ತೀವ್ರಕ್ಕೆ ಸಾಕ್ಷಿ : ಎ. ಮುರಿಗೆಪ್ಪ
ಕೊಪ್ಪಳ 05 : ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎ.ಮುರಿಗೆಪ್ಪ ಅವರು ಇಲ್ಲಿನ ನಗರಸಭೆ ಮುಂದುಗಡೆ 98 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಬಲ್ಡೋಟ ಹಠಾವೋ ಧರಣಿಗೆ ಬೆಂಬಲಿಸಿ ಮಾತನಾಡಿ, ಇಲ್ಲಿ ನಿರಂತರ ಮಾಸ್ಕ್ ಹಾಕಿಕೊಳ್ಳುವ ಪರಿಸ್ಥಿತಿ ಬರಬಾರದು ಎಂದರೆ ಅಗತ್ಯ ಮೀರಿ ಇರುವ ಕಾರ್ಖಾನೆಗಳು ಬಂದ್ ಆಗಲೇಬೇಕು, ಇಲ್ಲಿ ಬಲ್ಡೋಟ ಕಾರ್ಖಾನೆ ಬಂದು 27 ಹೊಗೆ ಕೊಳವೆಗಳು ಬಂದರೆ ಆ ವಿಷಾನಿಲ ಬದುಕು ಹಾಳು ಮಾಡುತ್ತದೆ. ಬದುಕನ್ನು ಬಣ್ಣಗೆಡಿಸುವ ಕೆಲಸ ನಡೆಯುತ್ತಿದೆ. ನಾವು ಕಾರ್ಖಾನೆಗಳ ವಿರೋಧಿಗಳಲ್ಲ. ಆರೋಗ್ಯ, ಜೀವ ತೆಗೆಯುವ ಯಾವ ಕಾರ್ಖಾನೆಗಳು ಬೇಡ. ಪರಿಸರ ಸರ್ವೆ ಆಗಬೇಕು. ಬಸಾಪುರ ಕೆರೆ ಜನ ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು.
ಹೋರಾಟಕ್ಕೆ ಸಹಮತವಿದೆ. ಮುಖ್ಯಮಂತ್ರಿಗಳು ಬೇಗ ಸ್ಪಂದಿಸಲಿ. ನಾನೂ ಕೂಡ ಸರ್ಕಾರಕ್ಕೆ ಪತ್ರ ಬರೆದು ಅಥವಾ ನೇರ ಭೇಟಿ ಮಾಡಿ ಬಲ್ಡೋಟ ನಿಲ್ಲಿಸಿ ಎಂದು ಕೇಳುತ್ತೇನೆ ಎಂದರು.
ಇದೇ ದಿನಾಂಕ: 07.02.2026ರ ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರ ಸಭೆಯ ಧರಣಿ ಸ್ಥಳದಲ್ಲಿ ಶ್ರೀಗವಿಮಠದಿಂದ ಉಪಹಾರ ವ್ಯವಸ್ಥೆ ಮಾಡುತ್ತದೆ. ಬೆ. 10 ಗಂಟೆಗೆ ಸರಿಯಾಗಿ ಸಾಣೆಹಳ್ಳಿ ಶ್ರೀಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಾಧಿತ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಜನರನ್ನು ಭೇಟಿ ಮಾಡಿ 11 ಗಂ. ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಇಸ್ಲಾಂ ದರ್ಗಾ ಹಳ್ಳಿ ಭೇಟಿ ಮಾಡುತ್ತಾರೆ. ಗದುಗಿನ ತೊಟದ ಸಿದ್ಧರಾಮ ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ ಸ್ವಾಮಿಗಳು ದದೇಗಲ್, ಹಿರೇಸಿಂದೋಗಿ, ಇಟಗಿ ಸ್ವಾಮಿಗಳು ಆಗಮಿಸುತ್ತಾರೆ. ಬೆ. 11 ಗಂ. ಪ್ರತಿಭಟನೆ ಸಮಾವೇಶ ಆರಂಭವಾಗುತ್ತದೆ. ಸರ್ವ ಜನರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು, ಇದುವರೆಗೆ ಬೆಂಬಲಿಸಿ ಹೋರಾಡಿದ ಸಂಘ, ಸಂಸ್ಥೆಯ ಪ್ರಮುಖರು, ಸರ್ವಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಚಂದ್ರಶೇಖರ ಕವಲೂರು, ಎಂ.ಎಂ.ಮದರಿ, ಮಲ್ಲಿಕಾರ್ಜುನ ಬಿ.ಗೋನಾಳ, ಶಿವಕುಮಾರ ಕುಕನೂರು, ಮಂಜುನಾಥ ಜಿ ಗೊಂಡಬಾಳ, ರಮೇಶ ತುಪ್ಪದ, ಶರಣು ಗಡ್ಡಿ, ಸಂತೋಷ ದೇಶಪಾಂಡೆ, ಶರಣು ಶೆಟ್ಟರ್, ಕಾಶಪ್ಪ ಚಲವಾದಿ, ಬಿ.ಜಿ.ಕರಿಗಾರ, ಸಿ.ಬಿ.ಪಾಟೀಲ್, ಜಿ.ಬಿ.ಪಾಟೀಲ್, ಗಂಗಾಧರ ಖಾನಾಪೂರ, ಜ್ಯೋತಿ ಗೊಂಡಬಾಳ, ಮಂಜುನಾಥ ಅಂಗಡಿ, ಪುಷ್ಪಲತಾ ಏಳುಭಾವಿ, ಶರಣು ಡೊಳ್ಳಿನ, ಜಿ.ಎಸ್.ಕಡೇಮನಿ, ಮಹಾದೇಪಪ್ಪ ಮಾವಿನಮಾಡು, ಕರಿಗಾರ, ಎಸ್.ಬಿ.ರಾಜೂರು, ಶಿವಪ್ಪ ಜಲ್ಲಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರ್ಪ ಹಾಲಳ್ಳಿ ಬಸಾಪುರ, ಬಸವರಾಜ ನರೇಗಲ್, ರಾಜಶೇಖರ ಏಳುಬಾವಿ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಿಸಿದ್ದಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ತಾವು ಇದುವರೆಗೂ ಕಾರ್ಖಾನೆ ಕುರಿತಾಗಿ ಮಾಡಿದ ವಿಷಯಗಳನ್ನು, ಸರಕಾರದ ಗಮನಕ್ಕೆ ತಂದ ಮಾಹಿತಿ ಪ್ರಸ್ತಾಪಿಸಿದರು. ಧರಣಿ ನಿರತರೂ ಸಹ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಒತ್ತಾಯಿಸಿದರು.
ಜಿಲ್ಲಾಡಳಿತ ಧರಣಿ ವೇದಿಕೆಗೆ ಬಂದು ಬಲ್ಡೋಟ ಒಳಗೊಂಡು ಎಲ್ಲಾ ಕಾರ್ಖಾನೆ ಬಾಧಿತ ಹಳ್ಳಿಯಲ್ಲಿ ಎ.ಐ.ಐ.ಎಂ.ಎಸ್ ನಿಂದ ಆರೋಗ್ಯ ಸರ್ವೆಗೆ ಸರಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಬಸಾಪುರ ಕೆರೆ ವಿಷಯದಲ್ಲಿ ಕಾನೂನು ತಜ್ಞರು ಸಲಹೆ ನೀಡಬೇಕು, 2 ಎಕರೆ ಕೆರೆ ಬಲ್ಡೋಟ ಕಾರ್ಖಾನೆ ರಸ್ತೆಗೆ ಬಳಸಿದ್ದಾರೆ ಎಂದು ಸರ್ವೆಯಿಂದ ಗುರ್ತಿಸಿದಾಗ ಇಲ್ಲಿ ಕೆರೆ ಇರಲಿಲ್ಲ ಎಂದು ಕಾರ್ಖಾನೆ ಉತ್ತರ ಕೊಟ್ಟಿದೆ. ಇದನ್ನು ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಅಲ್ಲಮಪ್ರಭು ಬೆಟ್ಟದೂರು ಅವರು ಕೆರೆ ಸರ್ಕಾರ ಮಾರಾಟ ಮಾಡಲು ಬರುವುದಿಲ್ಲ. ಅದು ಗ್ರಾಮದ ಸಮುದಾಯದ ಆಸ್ತಿ ನೀವೇಕೆ ಮಾರಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಅವರು ಉತ್ತರ ಕೊಡುವಲ್ಲಿ ವಿಫಲರಾದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 