ವಾಲ್ಮೀಕಿ ರಚಿಸಿದ ರಾಮಾಯಣದ ಸಾರ ಅತ್ಯಮೂಲ್ಯ: ಬಸವರಾಜ ಗೊರವರ

 ವಾಲ್ಮೀಕಿ ರಚಿಸಿದ ರಾಮಾಯಣದ ಸಾರ ಅತ್ಯಮೂಲ್ಯ: ಬಸವರಾಜ ಗೊರವರ The essence of the Ramayana composed by Valmiki is invaluable: Basavaraja Goravara

ಲೋಕದರ್ಶನ ವರದಿ 

ವಾಲ್ಮೀಕಿ ರಚಿಸಿದ ರಾಮಾಯಣದ ಸಾರ ಅತ್ಯಮೂಲ್ಯ: ಬಸವರಾಜ ಗೊರವರ 


ಧಾರವಾಡ. 7: ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣದ ಸಾರ ನ್ಯಾಯ ನೀತಿ ಧರ್ಮದ ಜೀವನ ಅತ್ಯಮೂಲ್ಯ ವೆಂದು ಮತ್ತು ರಾಮ ರಾಜ್ಯ ಕಲ್ಪನೆ ಮೂಡುತ್ತದೆ ಎಂದು ಬಸವರಾಜ ಗೊರವರ ತಿಳಿಸಿದರು. 

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಧಾರವಾಡ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ  ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಮೌಲ್ಯವನ್ನು ಬಿತ್ತುವ ಮತ್ತು ತ್ಯಾಗ ಮನೋಭಾವ ಬೆಳೆಸುವ ಗುಣದ ಅರಿವು ರಾಮಾಯಣದ ಮೂಲಕ ಮೂಡುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ರೇವಣಸಿದ್ದಪ್ಪ ಹಾಗೂ ಎಚ್ ಎಸ್ ಬಡಿಗೇರ, ಎಸ್ ಎಚ್ ಪ್ರತಾಪ ಇವರು ಮಾತನಾಡಿದರು. ಕನ್ನಡ ಕನ್ನಡ ನಾಡು ನುಡಿ ಗೀತೆ ಯನ್ನು ಸವಿತಾ ನೆಲ್ಲಿಗಣಿ ಮತ್ತು ವಸಂತಾ ಬಿಸ್ಟಣ್ಣವರ ಪ್ರಸ್ತುತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ..ಲಿಂಗರಾಜ ಅಂಗಡಿ ಮಾತನಾಡಿದರು. 


ಪ್ರಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಇವರ ಭಾವಚಿತ್ರಕ್ಕೆ ಪುಷ್ಪ ಸಮರೆ​‍್ಣ ಮಾಡಲಾಯಿತು... ವಸಂತಾ ಜೈನ ಪ್ರಾರ್ಥಿಸಿದರು. ಪ್ರಮಿಳಾ ಜಕ್ಕನ್ನವರ ಸ್ವಾಗತಿಸಿದರು.ಮಹಾಂತೇಶ ನರೇಗಲ್ಲ ನಿರೂಪಿಸಿ ವಂದಿಸಿದರು. 


ಕಾರ್ಯಕ್ರಮದಲ್ಲಿ ಕೆ ಜಿ ದೇವರಮನಿ, ಸಿದ್ಧರಾಮ ಹಿಪ್ಪರಗಿ, ಎಮ್ ಜಿ ಸುಬೇದಾರ್, ಎಲ್ ಎಸ್ ಕಿಲ್ಲೇದಾರ , ಡಾ. ಜಿ ಜಿ ನೆಹಲಾನಿ, ಕೆ ಕೆ ತಳವಾರ ಮುಂತಾದವರು ಉಪಸ್ಥಿತರಿದ್ದರು.