ಬಸವಣ್ಣನವರ ಕಾಯಕ ತತ್ವವನ್ನು ನೈಜವಾಗಿ ಅನುಸರಿಸುತ್ತಿರುವವರು ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು!
The drivers and operators of transport companies are the ones who truly follow Basavanna's Kayaka ph
ಸಂಕೇಶ್ವರದಲ್ಲಿ ವಿಭ್ರಂಜನೆಯಿಂದ ಬಸವ ಜಯಂತಿ ಆಚರಣೆ
ಸಂಕೇಶ್ವರ 21: ಕಾಯಕ ಹಾಗೂ ದಾಸೋಹದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ ಬಸವಣ್ಣನವರ 893 ನೇ ಜಯಂತಿಯನ್ನು ಗಡಿ ಪಟ್ಟಣ ಸಂಕೇಶ್ವರದಲ್ಲಿ ವಿಭ್ರಂಜನೆಯಿಂದ ಆಚರಿಸಲಾಯಿತು. ಪಟ್ಟಣ ಪುರಸಭೆಗೆ ಕೂಡಲ ಸಂಗಮದಿಂದ ಬಂದ ಜ್ಯೋತಿಯನ್ನು ಪಟ್ಟಣದ ವಿವಿಧ ಸಮುದಾಯದ ಧುರಿಣರಾದ ಸುನೀಲ ಪರ್ವತರಾವ,ಶಿವಾನಂದ ಮುಡಸಿ,ಚಿದಾನಂದ ಕರ್ದನ್ನವರ, ಅಮರ ನಲವಡೆ, ಶ್ರೀಕಾಂತ ಹತನೂರಿ, ಅವಿನಾಶ ನಲವಡೆ, ಗಜಾನನ ಕ್ವಳ್ಳಿ, ವಿಕ್ರಂ ಕರನಿಂಗ, ದೀಲೀಪ ಹೊಸಮನಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ ಮುಂತಾದವರು ಸ್ವಾಗತಿಸಿದರು. ನಂತರ ಜ್ಯೋತಿಯು ಪಟ್ಟಣದ ವಿವಿಧ ಮಾರ್ಗಗಗಳಲ್ಲಿ ಸಂಚರಿಸಿತು.
ಪಟ್ಟಣದ ಬಸ್ ನಿಲ್ದಾಣದ ಬಳಿ ಸಹಕಾರಿ ಧುರೀಣ ವಿನಯಗೌಡ ಪಾಟೀಲ ಅವರು ಬಸವೇಶ್ವರರ ಮೂರ್ತಿಗೆ ಹೂಹಾರ ಹಾಕಿ ನಮನ ಸಲ್ಲಿಸಿದರು. ಬಸವ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಬಸವಣ್ಣನವ ಮೂರ್ತಿ ಸೇರಿದಂತೆ ಇತರೆ 8 ಶರಣರ ಮೂರ್ತಿಗಳಿಗೂ ಪೂಜೆ ಸಲ್ಲಿಸಲಾಯಿತು. ವಾಯವ್ಯ ಸಾರಿಗೆ ಸಂಸ್ಥೆಯ ಸಂಕೇಶ್ವರ ಘಟಕದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಘಟಕ ವ್ಯವಸ್ಥಾಪಕ ವಿಜಯಕುಮಾರ ಕಾಗವಾಡೆ ಅವರು ಮಾತನಾಡಿ,ನಿಜವಾಗಿಯೂ ಬಸವಣ್ಣನವರ ಕಾಯಕ ತತ್ವವವನ್ನು ಪಾಲಿಸುವವರು ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು. ಇವರಿರ್ವರು ದಿನದ 24 ತಾಸು ಸಹಿತ ಕಾಯಕ ಮಾಡಿ ಬಸವೇಶ್ವರ ತತ್ವವವನ್ನು ತಮ್ಮ ಬದುಕಿನಲ್ಲಿ ಪಾಲಿಸುತಿದ್ದಾರೆ ಎಂದರು. ಕೆ.ಆರ್.ಬಸ್ತವಾಡೆ, ಸುವರ್ಣಾ ಪಾಟೀಲ, ಶಾಂತಾದೇವಿ ಪಾಟೀಲ, ದಯಾನಂದ ಲಠ್ಠಿ, ಕಾಡೇಶ ಬಸ್ತವಾಡಿ, ನಂದಕುಮಾರ ನಡಗದಗಲ್ಲಿ ಮುಂತಾದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 