ಗ್ರಾಮೀಣ ಸಂಸ್ಕೃತಿ, ಆಚಾರ ವಿಚಾರ, ಕಲಿತಾಗ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ: ಡಾ. ಮೃತ್ಯುಂಜಯ

ಗ್ರಾಮೀಣ ಸಂಸ್ಕೃತಿ, ಆಚಾರ ವಿಚಾರ, ಕಲಿತಾಗ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ:  ಡಾ. ಮೃತ್ಯುಂಜಯ The dream of a great India can be realized by learning about rural culture, customs and traditions:

ರಾಣೇಬೆನ್ನೂರು 26: ಗ್ರಾಮೀಣ ಸಂಸ್ಕೃತಿ ಮತ್ತು ಇಲ್ಲಿನ ಆಚಾರ ವಿಚಾರ ಸಂಸ್ಕಾರವನ್ನು ಕಲಿತಾಗ ಮಾತ್ರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯವಾಗುವುದು ಎಂದು ಬಿ. ಎ. ಜೆ.ಎಸ್‌. ಎಸ್‌. ಶಿಕ್ಷಣ ಮಹಾವಿದ್ಯಾಲಯದ ಬಿ. ಇಡಿ ಕಾಲೇಜು ಪ್ರಾಚಾರ್ಯ ಡಾ. ಎಂ. ಎಂ ಮೃತ್ಯುಂಜಯ ಹೇಳಿದರು.  

ಅವರು, ಇಲ್ಲಿನ ಕಾಲೇಜು ಸನದಿ  ಭವನದಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ ಸೇವಾ ಯೋಜನೆ ದಿನ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

 ಶಿಕ್ಷಕರು ಈ ದೇಶದ ಮಹಾನ್ ಶಿಲ್ಪಿಗಳು ಗುರುಗಳಿಗೆ ಸಮಾಜದಲ್ಲಿ ಸದಾವಕಾಲವು, ಗೌರವ ಸ್ಥಾನವಿದೆ, ಶಿಕ್ಷಣ ಪರಿಪೂರ್ಣತೆಗೆ ಶಿಕ್ಷಕರಾದ ನಾವುಗಳೆಲ್ಲರೂ ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸುವುದರ ಮೂಲಕ ಮಕ್ಕಳ ಉತ್ತಮ ಶಿಕ್ಷಣ  ಭವಿಷ್ಯಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದರು.  

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ,ಕಾ. ನಿ.ಪ. ಕಾರ್ಯದರ್ಶಿ ಮಂಜುನಾಥ ಹೊಸಪೇಟೆ ಅವರು, ಇಂದಿನ ವಿದ್ಯಾರ್ಥಿಗಳಲ್ಲಿ, ನೈತಿಕ ಮೌಲ್ಯಗಳ ಕೊರತೆ ಎದ್ದು ಕಾಣುತ್ತಲ್ಲಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಹೆಚ್ಚಾಗಿ ಮೌಲ್ಯಗಳನ್ನು ಬಿತ್ತುವ ಕಾರ್ಯವು ಶಿಕ್ಷಕರಿಂದಾಗಬೇಕಾಗಿದೆ ಎಂದರು.  

ಶಿಕ್ಷಣ ಮತ್ತು ಸಂಸ್ಕೃತಿ ವಿಚಾರವಾಗಿ, ಸಾಹಿತಿ ಪ್ರೊ, ಹೆಚ್‌.ಎ. ಭಿಕ್ಷಾವರ್ತಿಮಠ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ, ಡಾಕ್ಟರೆಟ್ ಪದವಿಗೆ ಭಾಜನರಾದ ಪ್ರೊ, ಡಾ.ರಾಜೀವ ಕೆ. ಎಂ, ಮತ್ತು ವಯೋ ನಿವೃತ್ತಿ ಹೊಂದಿದ ಶ್ರೀಮತಿ ಪದ್ಮಾವತಿ ಹುಗ್ಗಿ ಅವರನ್ನು, ಕಾಲೇಜು ಮತ್ತು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.  

 ವೇದಿಕೆಯಲ್ಲಿ ಉಪನ್ಯಾಸಕರಾದ ಎ. ಶಂಕರ ನಾಯ್ಕ್‌, ಡಾ. ಎಚ್‌.ಐ. ಬ್ಯಾಡಗಿ, ಶ್ರೀಕಾಂತ್ ಗೌಡಶಿವಣ್ಣನವರ, ಶ್ರೀಮತಿ ಸುನಿತಾ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬೀರ​‍್ಪ ಲಮಾಣಿ, ಎನ್‌.ಎಸ್‌.ಎಸ್‌. ಪದಾಧಿಕಾರಿಗಳಾದ, ಉಮಾ ಕಂಬಳಿ, ಲಕ್ಷ್ಮಿ ಹಣಚಿಕ್ಕಿ ಮತ್ತಿತರರು ಉಪಸ್ಥಿತರಿದ್ದರು. ಸುಮಿತ್ರಾ ಸಂಗಡಿಗರು ಪ್ರಾರ್ಥಿಸಿದರು. ಅನುಷಾ ಸಿ. ಜಿ, ಸ್ವಾಗತಿಸಿ, ಕಾರ್ಯಕ್ರಮಾಧಿಕಾರಿ ಪರಶುರಾಮ ಪವಾರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯ ದೇವಗಿರಿಮಠ ಪರಿಚಯಿಸಿ, ರುಕ್ಮಿಣಿ ನಿರೂಪಿಸಿ, ಸುನೀತಾ ಹುಲಿಗೆಮ್ಮನವರ, ವಂದಿಸಿದರು.