ವಿದ್ಯೆ ಮೌಲ್ಯ ಸಾರಿದ ಪುಲೆ ಸಿದ್ಧಾಂತ ದಿವ್ಯತೆ ಮೇರು ಜಿ.ಎಂ.ಕೋಟ್ಯಾಳ
The divinity of Pule Siddhanta, who preached the value of education, is the great G.M. Kotya.
ಆಲಮಟ್ಟಿ 07: ಅಂದು ನಾರಿಮಣಿಗಳಿಗೆ ಗಗನ ಕುಸಮವಾಗಿದ್ದ ಶಿಕ್ಷಣ ವಿದ್ಯಾಭ್ಯಾಸಕ್ಕೆ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರೇರೆಪಿಸಿದ್ದಾರೆ. ಹೆಣ್ಣು ಕುಲಕ್ಕೆ ಧೈರ್ಯದಿಂದ ಅಕ್ಷರ ಕಲಿಕಾ ಮುನ್ನುಡಿ ಬರೆದಿರುವ ದಿಟ್ಟತನದ ಸಾಧಕಿ ಪುಲೆ ಅವರು ಪುರುಷ ಪ್ರಧಾನ ಸಮಾಜದಲ್ಲಿ ಎದೆಗುಂದದೆ ಮಾನವೀಯತೆ ನೆಲೆಗಟ್ಟಿನ ಮೇಲೆ ಶಿಕ್ಷಣದ ಪ್ರೀತಿಧಾರೆ ತೋರಿದ್ದಾರೆ. ಸಾವಿತ್ರಿಬಾಯಿ ಅವರ ಅಚಲ ಛಲದಿಂದಲೇ ವಿದ್ಯೆಯನ್ನು ಇಂದು ಹೆಣ್ಣು ಮಕ್ಕಳು ಪಡೆಯುವಂತಾಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.
ಸ್ಥಳೀಯ ಆರಿ್ಬ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಪ್ರಯುಕ್ತ ಸಾಧಕಿ ಪುಲೆ ಹಾಗೂ ವೈಚಾರಿಕ ಸಂತ ಲಿಂ,ತೋಂಟದ ಡಾ,ಸಿದ್ದಲಿಂಗ ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾಲ್ಕು ಗೋಡೆಗಳ ಮಧ್ಯೆ ಮಹಿಳೆಯರು ಸೀಮಿತವಾಗಿದ್ದ ಕಾಲದಲ್ಲಿ ನವಕ್ರಾಂತಿ,ಭ್ರಾಂತಿಯನ್ನು ಶಿಕ್ಷಣದ ಮೂಲಕ ಸಾವಿತ್ರಿಬಾಯಿ ಪುಲೆ ಸೃಜಿಸಿದ್ದಾರೆ. ಮಹಿಳಾ ಸಾಕ್ಷರತೆಗೆ ನವಭಾಷ್ಪ ಬರೆದು ಸಾಕಾರತೆ ಮೆರೆದಿದ್ದಾರೆ. ವೀರನಾರಿ ಪುಲೆ ನಿಜಕ್ಕೂ ಭಾರತೀಯ ಅಕ್ಷರಮ್ಮ ಎಂದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಶೋಷಣೆಗೆ ತುತ್ತಾಗಿ, ಶಿಕ್ಷಣದಿಂದ ವಂಚಿತರಾಗಿದ್ದರು. ಹೆಣ್ಣು ಗ್ರಹ ಬಂಧನದ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಂಥ ಸನ್ನಿವೇಶದಲ್ಲಿ ಮಹಿಳೆಯರಿಗೆ ವಿದ್ಯೆಯ ಪರಧಿಯನ್ನು ಮುಕ್ತವಾಗಿ ತೆರೆದಿಟ್ಟು ಹೊಸ ನಾಂದಿಯೊಂದಿಗೆ ಸಾಮಾಜಿಕ ಸಮಾನತೆ ಕಳಕಳಿಯನ್ನು ಮೆರೆದಿದ್ದಾರೆ. ಕ್ರಾಂತಿಕಾರಿ ನಿಲುವಿನೊಂದಿಗೆ ಹೆಜ್ಜೆಯನ್ನಿಟ್ಟು ಹೆಣ್ಣು ಸಮೂಹಕ್ಕೆ ವಿದ್ಯಾದಾನ ಗೈದು ನವ ಮನ್ವಂತರತೆ ಪರಿಮಳ ಬೀರಿದ್ದಾರೆ. ಆ ಕಾರಣ ಅಡೆತಡೆಗಳನ್ನು ಮೀರಿ ಬೆಳೆದ ಸಾವಿತ್ರಿಬಾಯಿ ಪುಲೆಯವರಂತೆ ವೀರೋಚಿತ ಹೆಜ್ಜೆ ಗುರುತುಗಳನ್ನು ಇಟ್ಟುಕೊಂಡು ಶಿಕ್ಷಣ ವಿದ್ಯೆ ಪಡೆದು ಭವಿಷ್ಯದಲ್ಲಿ ಇಚ್ಛಿತ ಗುರಿ ಮಹೋನ್ನತವಾಗಿ ಸಾಧಿಸಬೇಕು ಎಂದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿ, ಸಾವಿತ್ರಿಬಾಯಿ ಪುಲೆ ಹೆಣ್ಣು ಮಕ್ಕಳ ಕಲಿಕೆಗೆ ಪುಲೆ ಸ್ಪೂರ್ತಿಯಾಗಿದ್ದಾರೆ. ಸಮಾಜದ ಹೀಯಾಳಿಕೆ, ಬಹಿಷ್ಕಾರ, ಅವಮಾನ ಪ್ರತಿ ಹೆಜ್ಜೆಯಲ್ಲೂ ಸಂಯಮತೆಯಿಂದ ಅನುಭವಿಸಿದ ಛಲಗಾರ್ತಿ ಪುಲೆ ಸಾಧನೆ ಮರೆಯಲಾಗದು. ಮಹಿಳಾ ಕಲ್ಯಾಣಕ್ಕಾಗಿ ನೋವುಗಳನ್ನು ನುಂಗಿ ದುಡಿದಿದ್ದಾರೆ. ಅಕ್ಷರ ಪ್ರಕಾಶೆಯಾಗಿ ಮಿಂಚಿದ್ದಾರೆ. ಇಂತಹ ಆದರ್ಶ ಹೆಗ್ಗುರುತಿನ ಸಾಧಕಿಯಾಗಿರುವ ಪುಲೆ ಅಕ್ಷರದಾತೆಯ ಆದರ್ಶಗಳನ್ನು ಹೆಣ್ಣು ಮಕ್ಕಳು ಅಳವಡಿಸಿಕೊಂಡು ಮುನ್ನಡತೆ ಸಾಧಿಸಬೇಕು. ಪುಲೆಬಾಯಿಯ ಸ್ಥೈರ್ಯ, ಪವಿತ್ರ ಶಿಕ್ಷಣ ಪ್ರೀತಿ ಅಪರೂಪವಾಗಿದೆ. ಇಂಥ ಸಾಧಕಿ ಭಾವಕ್ಕೆ ಹೃದಯ ಮನದಿಂದ ಕೃತಜ್ಞತೆ ಸಲ್ಲಿಸೋಣ ಎಂದರು. ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರಿ್ಸಂಧೆ, ಶ್ರೀಧರ ಚಿಮ್ಮಲಗಿ, ಸಚೀನ ಹೆಬ್ಬಾಳ, ಜಿ.ಆರ್.ಜಾಧವ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 