ಶಾಲೆಗೆ ಕೀರ್ತಿ ತರುವ ಛಲ ಎಲ್ಲ ಮಕ್ಕಳಲ್ಲಿ ಮೂಡಬೇಕು: ತೇರದಾಳ

ಶಾಲೆಗೆ ಕೀರ್ತಿ ತರುವ ಛಲ ಎಲ್ಲ ಮಕ್ಕಳಲ್ಲಿ ಮೂಡಬೇಕು: ತೇರದಾಳ The desire to bring glory to the school should be instilled in all children: Teradala

ಜಮಖಂಡಿ 28: ಜೀವನದಲ್ಲಿ ಸಾಧನೆ ಮಾಡಬೇಕೆಂಬ ಛಲ ಮನಸಿನಲ್ಲಿ ಇರಬೇಕು. ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಯನ್ನು ಮಾಡುವ ಮೂಲಕ ಶಾಲೆ ಮತ್ತು ಊರಿನ ಕೀರ್ತಿಯನ್ನು ತರುವ ಛಲ ಎಲ್ಲ ಮಕ್ಕಳಲ್ಲಿ ಮೂಡಬೇಕು ಎಂದು ಕರ್ನಾಟಕ ಪ್ರೇಸ್ ಕ್ಲಬ್ ಅಧ್ಯಕ್ಷ ಶಶಿಕಾಂತ ತೇರದಾಳ ಹೇಳಿದರು. 

ತಾಲೂಕಿನ ಕಡಪಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆಯ ಸಹೈಒಗದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಮತ್ತು ಪೆನ್ನು, ನೋಟಬುಕ್‌ಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಪ್ರಬಂಧ ಸ್ಪರ್ಧೆಯಲ್ಲಿ ಎಲ್ಲ ಮಕ್ಕಳು ಪಾಲ್ಗೊಂಡು ಅದರಲ್ಲಿ ಕೆಲವು ಮಕ್ಕಳು ಮಾತ್ರ ವಿಜೇತರಾಗಿದರು ಸಹ ಉಳಿದವರು ಬೇಸರ ಮಾಡಿಕೊಳ್ಳದೆ. ತಾವುಗಳು ಸಹ ಮುಂದಿನ ಸ್ಪರ್ಧೆಗಳಲ್ಲಿ ಸಾಧನೆ ಮಾಡಬೇಕೆಂಬ ಛಲ ತಮ್ಮಲ್ಲಿ ಮೂಡಬೇಕು. ಶಾಲೆಯಲ್ಲಿ ಕಲಿತವರು ಶಾಲೆಯ ಕೀರ್ತಿ ಹಾಗೂ ಊರಿನ ಕೀರ್ತಿಯನ್ನು ತರುವಂತ ಮಕ್ಕಳು ತಾವಾಗಬೇಕೆಂದು ಸಲಹೆಯನ್ನು ನೀಡಿದರು. 

ಪತ್ರಕರ್ತ ದೀಲೀಪ ದಾಶ್ಯಾಳ ಮಾತನಾಡಿ, ಸಂಘಟನೆಯು ಬಹಳ ಮುಖ್ಯವಾದ ಕೆಲಸಗಳನ್ನು ಮಾಡುತ್ತಾ ಬಂದಿದೆ. ಶಾಲೆಯ ಮಕ್ಕಳಲ್ಲಿ ಹುಮಸ್ಸು ಮೂಡಿಸುವ ಜೊತೆಗೆ ಪ್ರಬಂಧ ಸ್ಪರ್ಧೆಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುತ್ತಾರೆ. ಪ್ರತಿಯೊಂದು ಮಕ್ಕಳಿಗೆ ಪೆನ್ನು, ನೋಟಬುಕ್‌ಗಳನ್ನು ನೀಡುವ ಪತ್ರಕರ್ತರ ರಕ್ಷಣಾ ಸಂಘಟನೆಯು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆಯ ರಾಜ್ಯಾಧ್ಯಕ್ಷ ರವಿ ದೊಡಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಶೋಕ ಮೀಶಿ ಸಂವಿಧಾನ ದಿನಾಚರಣೆಯ ಪೀಠಿಗೆಯ ಬಗ್ಗೆ ವಿವರಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಅಶೋಕ ವನಮಾನೆ, ಪತ್ರಕರ್ತೆ ಸರೋಜನಿ ಅರಗೆ ಮಾತನಾಡಿದರು,  

ಪತ್ರಕರ್ತರಾದ ಶ್ರೀಕಾಂತ ಮಠಪತಿ, ಲಕ್ಷಣ ಕಾಂಬಳೆ, ರವಿ ಶಿಂಗೆ ,ಕಲ್ಮೇಶ ಚಿನಗುಂಡಿ, ಎಂ,ಎಂ,ಬೀಳಗಿ, ಜಾವೀಧ ಅಂಬಿ, ಪ್ರಶಾಂತ ನೀಲನಾಯಕ , ಸಹ ಶಿಕ್ಷಕರಾದ ಎ,ಕೆ,ಗಾವಡೆ ನಿರೂಪಿಸಿದರು, ವಿ,ಆರ್, ನಾಗನೂರ ವಂದನಾರೆ​‍್ಣ,