ಬದುಕಿನಲ್ಲಿ ಮಾಡಿದ ಕಾರ್ಯಗಳು ಶಾಶ್ವತ: ಲಿಂಗ ನಾಯಕನಹಳ್ಳಿ ಶ್ರೀಗಳು

 ಬದುಕಿನಲ್ಲಿ ಮಾಡಿದ ಕಾರ್ಯಗಳು ಶಾಶ್ವತ: ಲಿಂಗ ನಾಯಕನಹಳ್ಳಿ ಶ್ರೀಗಳು   The deeds done in life are eternal: Linga Nayakanahalli Sri

ರಾಣೇಬೆನ್ನೂರು  30 :  ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಭೂಮಿಗೆ ಬಂದ ಪ್ರತಿಯೊಬ್ಬ ಮಾನವ ಜೀವಿಯು ತನ್ನ ಕಾಯಕವನ್ನು ಮರೆಯದೆ ಮಾಡಿದರೆ ಅವರು ತಮ್ಮ ಸಾವಿನ ನಂತರವೂ ಜೀವಂತವಾಗಿ ಇರುತ್ತಾರೆ ಎನ್ನುವುದಕ್ಕೆ ಅಜ್ಜೋಡಿಮಠ ಕುಟುಂಬದ ವಿಶ್ವರಾಧ್ಯ ಅವರು ಸಾಕ್ಷಿಯಾಗಿದ್ದಾರೆ ಎಂದು ಲಿಂಗನಾಯಕನಹಳ್ಳಿ ಕ್ಷೇತ್ರದ ಶ್ರೀ ಚನ್ನವೀರ ಮಹಾಸ್ವಾಮಿಗಳು ನುಡಿದರು. ಅವರು ಇಲ್ಲಿನ ಶ್ರೀ ಗುರು  ಕೊಟ್ಟೂರೇಶ್ವರ ದೇವಸ್ಥಾನ, ಭನದಲ್ಲಿ ಆ ಅಜ್ಜೇವಡಿಮಠ ಕುಟುಂಬದವರು ಆಯೋಜಿಸಿದ್ದ, ಲಿಂಗೈಕ್ಯ ವಿಶ್ವರಾಧ್ಯ ( ಈಶಣ್ಣ )  ಅಜ್ಜೇವಡಿಮಠ, ಅವರ ಶ್ರದ್ಧಾಂಜಲಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.      

ಸಮಾಜದಲ್ಲಿ ಶರಣ ತತ್ವ, ಸಮಾಜ ತತ್ವ ಮತ್ತು ಧಾರ್ಮಿಕ ತತ್ವ ಶಾಶ್ವತವಾಗಿ ಇರಬೇಕಾದರೆ, ಇಂತಹ ಶರಣ ಪರಂಪರೆಯ ವ್ಯಕ್ತಿಗಳು ಸಮಾಜಕ್ಕೆ ಇಂದಿನ ಅಗತ್ಯ ಎಂದರು      ವಿಶ್ವರಾಧ್ಯ ಅವರು ತಮ್ಮ ಜೀವನದುದ್ದಕ್ಕೂ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದರು. ಯಾರಿಗೂ ಕೇಡನ್ನು ಬಯಸದೆ, ಸದಾ ಹಸನ್ಮುಖಿಯಾಗಿ ಜನಮಾನಸದಲ್ಲಿ ನೆಲೆ ನಿಂತವರು,ಇಂದು ನಮ್ಮ ಮಧ್ಯೆ ಅವರು ಭೌತಿಕವಾಗಿ ಇಲ್ಲದೇ ಇದ್ದರೂ ಅವರ ಸಮಾಜಮುಖಿ ಸೇವೆಗಳು ಜೀವಂತವಾಗಿವೆ ಎಂದರು.    ದಿವ್ಯ ಸಮ್ಮುಖದಲ್ಲಿದ್ದ, ಶನೇಶ್ವರ ಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯರು, ಲಿಂಗದಹಳ್ಳಿ ಶ್ರೀ ವೀರಭದ್ರೇಶ್ವರ ಶಿವಾಚಾರ್ಯರು, ಮಣಕೂರ ಹಾಲಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಗುಡ್ಡದ ಆನ್ವೇರಿ ಶ್ರೀ ಶಿವಯೋಗಿಶ್ವರ ಸ್ವಾಮಿಗಳು ಸೇರಿದಂತೆ ಮತ್ತಿತರ ಹರ ಗುರು ಚರಮೂರ್ತಿಗಳು ಪಾಲ್ಗೊಂಡು ತಮ್ಮ ದಿವ್ಯ ಸಂದೇಶಾಮೃತವನ್ನು ನೀಡಿದರು. ಪ್ರಾಸ್ತಾವಿಕವಾಗಿ  ಮಾತನಾಡಿದ ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ್ ಅವರು, ಈಶಣ್ಣ( ವಿಶ್ವರಾಧ್ಯ) ಗ್ರಾಮೀಣ ಪ್ರದೇಶಗಳಲ್ಲಿ, ತಮ್ಮ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡವರು. ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ,ಅಭಿಮಾನ ಹೊಂದಿದೆ ಮಹಾನ್ ನಾಯಕ. ಅಂತವರ ಬದುಕು, ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ, ಕುಟುಂಬದ ಶ್ರೀಮತಿ ಸರೋಜಮ್ಮ ಅಜ್ಜೇವಮಠ, ಅರವಿಂದ, ಅರುಣ, ಕಿರಣ, ಬಸಣ್ಣ ಹುಚ್ಚಗೊಂಡರ, ರಾಜಶೇಖರ ಸುರಳಿಕೇರಿ ಮಠ, ಅಜ್ಜಪ್ಪ ಮಣಕೂರ, ರಾಜು ಮುಸ್ಟೂರು, ಮತ್ತಿತರರು, ರಾಜಕೀಯ ಗಣ್ಯರು ವರ್ತಕರು, ಉಪಸ್ಥಿತರಿದ್ದರು  ಶ್ರೀ ಗುರುಕೊಟ್ಟೂರೇಶ್ವರ ಮಠದ ಅರ್ಚಕರಾದ ಶಾಂತಯ್ಯ ಕೋಟ್ನಿಕಲ್ ಮಠ ಸಂಗಡಿಗರು ಪ್ರಾರ್ಥಿಸಿ, ವೇದಘೋಷ ಮಾಡಿದರು. ಸೇವಾಕರ್ಥ ಪರಮೇಶ ಯಡಿಯಾಪುರ ಸ್ವಾಗತಿಸಿ ನಿರೂಪಿಸಿದರು. ವರ್ತಕ ಸತೀಶ್ ಅಜ್ಜೇವಡಿಮಠ ವಂದಿಸಿದರು.