ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪರಿಶ್ರಮ ಮತ್ತು ಸೇವೆ ಅಪಾರವಾಗಿದೆ: ಗವಿಸಿದ್ದಪ್ಪ ಹಂಡಿ
The dedication and service of civic workers in maintaining cleanliness is immense: Gavisiddappa Hand
ಕೊಪ್ಪಳ 27: ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಮತ್ತು ಪರಿಶ್ರಮ ಅಪಾರವಾಗಿದೆ ಅವರ ಸೇವೆ ಮೆಚ್ಚುವಂತದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಹಂಡಿ ಹೇಳಿದರು.
ಅವರು ನಗರದ ಸಾಹಿತ್ಯ ಭವನ ಆವರಣದಲ್ಲಿ ಕೊಪ್ಪಳ ನಗರ ಸಭೆಯ ಪೌರ ಕಾರ್ಮಿಕರ ದಿನಾಚರಣೆ.ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಸರ್ವ ಸದಸ್ಯರು ಸೇರಿ ಪೌರಕಾರ್ಮಿಕರಿಗೆ ದಿನಾಚರಣೆ ಪ್ರಯುಕ್ತ ಹೂ ಕೊಡುವುದರ ಮೂಲಕ ಅವರಿಗೆ ಶುಭ ಕೋರಿ ಮಾತನಾಡಿ ಅವರ ಸೇವೆಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದರು, .ಮುಂದುವರಿದು ಮಾತನಾಡಿ ವರ್ಷದ 365 ದಿನಗಳೂ ಶ್ರಮವಹಿಸಿ ದುಡಿಯುವ ಕಾಯಕಯೋಗಿ ಗಳು ನಮ್ಮ ಪೌರಕಾರ್ಮಿಕರು,ಅವರು ಪಟ್ಟಣ ಗ್ರಾಮಗಳನ್ನು ಸ್ವಚ್ಛವಾಗಿ ಮಾಡಲು ಶ್ರಮಿಸುತ್ತಾ ಬಂದಿದ್ದಾರೆ, ಪೌರ ಕಾರ್ಮಿಕರು ಸೇರಿ ಪೌರಕಾರ್ಮಿಕರ ದಿನಾಚರಣೆಯನ್ನು ಒಂದು ದೊಡ್ಡ ಹಬ್ಬದಂತೆ ಆಚರಿಸಬೇಕು ಬಸವಣ್ಣನವರು ಹೇಳಿದಂತೆ ಕಾಯಕವೆ ಕೈಲಾಸ ಎಂಬಂತೆ ನಮ್ಮ ಪೌರಕಾರ್ಮಿಕರು ಬಿಡುವಿಲ್ಲದೆ ಪ್ರತಿದಿನ ಕಾಯಕದಲ್ಲಿ ನಿರತ ವಾಗಿರುತ್ತಾರೆ, ಪೌರ ಕಾರ್ಮಿಕರಿಲ್ಲದ ಗ್ರಾಮವನ್ನು ಊಹಿಸಲು ಸಾಧ್ಯವಿಲ್ಲ ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು, ಜನರು ಅವರನ್ನು ಗೌರವಿಸಬೇಕು ಹಾಗೂ ಪೌರ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು ವಿದ್ಯಾವಂತರಾದರೆ ಮಾತ್ರ ಸ್ವಾಭಿಮಾನಿಗಳಾಗಲು ಸಾಧ್ಯ ಮಕ್ಕಳಿಗೆಲ್ಲಾ ಶಿಕ್ಷಣ ಕೊಡಿಸಿ ಪ್ರತಿಯೊಬ್ಬರು ಪ್ರತಿಭಾವಂತರಾದರೇ ಒಳ್ಳೆಯ ಅವಕಾಶ ಸಿಗುವುದು ಎಂದರು, ಪೌರಕಾರ್ಮಿಕರ ದಿನಾಚರಣೆಯನ್ನು ನಗರ ಸ್ವಚ್ಛತೆ, ಸಾರ್ವಜನಿಕರ ಆರೋಗ್ಯ ರಕ್ಷಣೆ, ಮತ್ತು ಪಟ್ಟಣ ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ ಅವಿರತ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಆಚರಿಸಲಾಗುತ್ತದೆ, ಈ ದಿನದ ಮಹತ್ವವು ಪೌರಕಾರ್ಮಿಕರ ಕಠಿಣ ಪರಿಶ್ರಮಕ್ಕೆ ಗೌರವ ನೀಡುವುದು ಅವರ ಅವರ ಕಾರ್ಯಗಳನ್ನು ಶ್ಟಾಘಿಸುವುದು ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸುವುದಾಗಿದೆ ಇದರ ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಉತ್ತಮ ಸೌಲಭ್ಯಗಳನ್ನು ಸರ್ಕಾರವು ಕೂಡ ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಹಂಡಿ ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷರಾಧ ಬೋರಮ್ಮ ತಳಗಡೆ, ಕಾರ್ಮಿಕ ಘಟಕದ ತಾಲೂಕು ಉಪಾಧ್ಯಕ್ಷ.ಪರಶುರಾಮ್ ತಳಗಡೆ ಅಬ್ದುಲ್ ಸಮದ , ಪ್ರಭು ಶೆಟ್ಟರ್ ಕಾವೇರಿ, ರುದ್ರಮನಿ ಮಲ್ಲಿಕಾರ್ಜುನ್, ಅಜ್ಜಪ್ಪ ಜಾದವ್ ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 