ಹಾವೇರಿ ಶಾಸಕರಾದ ರುದ್ರ್ಪ ಲಮಾಣಿ ಅವರ ಮನೆಯ ಮುಂದೆ ಅಂದು ಸಾಂಕೇತಿಕ ತಮಟೆ ಚುಳುವಳಿ ಸಭೆಯಲ್ಲಿ ತೀರ್ಮಾನ
ಹಾವೇರಿ 10 :ಸುಪ್ರೀಂಕೋರ್ಟಿನ ತೀರ್ು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೇ ಕಾಲಾಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಶಾಸಕರ ಮನೆಯ ಮುಂದೆ ದಿ,14 ರಂದು ಬೆಳಿಗ್ಗೆ 11 ಘಂಟೆಗೆ ತಮಟೆ ಚಳುವಳಿ ಮಾಡಲಾಗುವುದು ಎಂದು ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಂವಿಧಾನ ಬದ್ಧ ಸೌಲಭ್ಯಗಳನ್ನು ನೀಡಲು ಆಳುವ ಸರ್ಕಾರ ಹಿಂದೆ ಮುಂದೆ ನೀಡುತ್ತಿರುವುದು ಖಂಡನೀಯವಾಗಿದೆ.ಸರ್ಕಾರದ ವಿರುದ್ಧ ಡಿಸೆಂಬರ್ 16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನೆಡಸಲಾಗುವುದು.ಈ ನಿಮಿತ್ತವಾಗಿ ದಿ,14 ರಂದು ಶಾಸಕರ ಮನೆಯ ಮುಂದೆ ತಮಟೆ ಚಳಿವಳಿ ಮಾಡಲಾಗುತ್ತಿದ್ದು,ಹಾವೇರಿ ಶಾಸಕರಾದ ರುದ್ರ್ಪ ಲಮಾಣಿ ಅವರ ಮನೆಯ ಮುಂದೆ ಅಂದು ಸಾಂಕೇತಿಕ ತಮಟೆ ಚುಳುವಳಿ ಹಮ್ಮಿಕೊಳ್ಳಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಮುಖಂಡರಾದ ಡಿ ಎಸ್ ಮಾಳಗಿ ಮಾತನಾಡಿ ಕಾಟಾಚಾರಕ್ಕೆ ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ,2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು.ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ,ಆಯೋಗಕ್ಕೆ ಬೇಕಾದ ಕಛೇರಿ,ಸಿಬ್ಬಂದಿ, ಹಣಕಾಸಿನ ನೆರವು ಕೊಡದೆ ಕಾಲಾಹರಣ ನೆಡೆಸಲಾಗುತ್ತಿದೆ.ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ,ಸರಕಾರದ ಮುಂದೆ ನ್ಯಾ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿ ಇದೆ.ಶೀಘ್ರವಾಗಿ ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಉಡಚಪ್ಪ ಮಾಳಗಿ ಮಾತನಾಡಿ ಬೆಳಗಾವಿ ಸಮಾವೇಶದ ಮೊದಲು ರಾಜ್ಯದ ಎಲ್ಲ ಶಾಸಕರ ಮನೆಯ ಮುಂದೆ ಡಿಸೆಂಬರ್-14 ರಂದು ಶನಿವಾರ ತಮಟೆ ಚಳವಳಿ ನೆಡಸಿ ವಿಧಾನಸೌಧದಲ್ಲಿ ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತಲು ಆಗ್ರಹಿಸಲಾಗುವುದು. ಈ ತಮಟೆ ಚಳುವಳಿಗೆ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು,ಕಾರ್ಯಕರ್ತರು ಸಮಾಜದ ಮುಖಂಡರು, ಮಹಿಳೆಯರು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಎಂ ಆಂಜನೇಯ,ಪ್ರಕಾಶ ಪೂಜಾರ,ಚಂದ್ರ್ಪ ಹರಿಜನ,ಮೈಲಪ್ಪ ಗೊಣಿಬಸಮ್ಮನವರ,ಶಿವಣ್ಣ ಕನವಳ್ಳಿ,ಚಂದ್ರು ಪೂಜಾರ,ಸಂತೋಷ ದೊಡ್ಡಮನಿ,ಶ್ರೀಕಾಂತ ಲಕ್ಷ್ಮೇಶ್ವರ,ಮಂಜನಾಥ ಜೆ.ಡಿ,ನಾಗರಾಜ ಬಣಕಾರ,ಮಹೇಶ ಹರಿಜನ,ರಾಜು ಹರಿಜನ,ನೀಲಪ್ಪ ದೊಡ್ಡಮನಿ,ಸಂತೋಷ ಗುಡ್ಡಪ್ಪನವರ,ಮಾರುತಿ ಸೊಟ್ಟಪ್ಪನವರ,ರಾಮಣ್ಣ ಹರಿಜನ, ಮಂಜಪ್ಪ ದೊಡ್ಡಮರೆಮ್ಮನವರ,ಚಂದ್ರ್ಪ ಹರಿಜನ, ನಾಗರಾಜ ಬಂಕಾಪೂರ,ಹನಮಂತ ವರವಜ್ಜಿ,ಮೈಲಪ್ಪ ಹನಮಜ್ಜರ,ಶ್ರೀಕಾಂತ ಸಣ್ಮನಿ,ಜಗದೀಶ ಹರಿಜನ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.