ಕೊರೊನಾ ಮಹಾಮಾರಿಯಿಂದ ಡೊನಾಲ್ಡ್ ಟ್ರಂಪ್ ಆಪ್ತ ಸ್ನೇಹಿತ ಸಾವು

ನ್ಯೂಯಾರ್ಕ್, ಏ ೧೩,ಅಮೆರಿಕಾ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ  ಸ್ನೇಹಿತ ಸ್ಟಾನ್ಲಿ ಚೇರಾ (೭೮) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.    ಸ್ಟಾನ್ಲಿ  ಚೇರಾ  ನ್ಯೂಯಾರ್ಕ್  ಸಿಟಿ  ರಿಯಲ್ ಎಸ್ಟೇಟ್ ಡೆವಲಪರ್  ಆಗಿ   ಹೆಸರುವಾಸಿಯಾಗಿದ್ದರು. ಟ್ರಂಪ್  ಅವರ  ರಿಪಬ್ಲಿಕನ್ ಪಕ್ಷಕ್ಕೂ ಸ್ಟಾನ್ಲಿ ಭಾರಿ ಪ್ರಮಾಣದಲ್ಲಿ  ದೇಣಿಗೆ  ನೀಡಿದ್ದರು. ಅವರು ಕ್ರೌನ್ ಅಕ್ವಿಸಿಷನ್ಸ್  ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ  ನಡೆಸುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿ  ಈ ಸಂಸ್ಥೆ  ಹಲವು  ಬೃಹತ್  ಕಟ್ಟಡಗಳನ್ನು ನಿರ್ಮಿಸಿದೆ.ಅಮೆರಿಕಾ  ಅಧ್ಯಕ್ಷೀಯ ಚುನಾವಣೆ  ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ  ಪ್ರಚಾರಕ್ಕೆ  ಸ್ಟಾನ್ಲಿ ಸುಮಾರು ೪  ಲಕ್ಷ ಡಾಲರ್  ದೇಣಿಗೆ  ನೀಡಿದ್ದರು.  ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ಅವರೊಂದಿಗೆ ಸ್ಟಾನ್ಲಿ ವ್ಯವಹಾರ ಸಂಬಂಧಗಳನ್ನು ಹೊಂದಿದ್ದರು. ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದ  ಹಿರಿಯರ ದಿನಾಚರಣೆಯಲ್ಲಿ  ಪಾಲ್ಗೊಂಡಿದ್ದ  ಅಧ್ಯಕ್ಷ  ಡೋನಾಲ್ಡ್  ಟ್ರಂಪ್,  ಸ್ಟಾನ್ಲಿ   ತನ್ನ  ಅತ್ಯುತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದರು.  ಅಲ್ಲದೆ, ಇತ್ತೀಚೆಗೆ ನಡೆದ  ಮಾಧ್ಯಮ ಗೋಷ್ಟಿಯಲ್ಲಿ ತನ್ನ  ಸ್ನೇಹಿತ  ಸ್ಟಾನ್ಲಿ   ಕೊರೊನಾ  ಸೋಂಕಿಗೆ ಒಳಗಾಗಿದ್ದಾರೆ  ಎಂದು ಟ್ರಂಪ್ ಹೇಳಿದ್ದರು.