ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಸಮಾರೋಪ

ಲೋಕದರ್ಶನ ವರದಿ

ಅಥಣಿ 09: ವಿದ್ಯಾರ್ಥಿಗಳಿಂದು ಮೊಬೈಲ್ ಗೀಳನ್ನು ಅತಿಯಾಗಿಸಿಕೊಂಡು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ಶ್ರೇಯಸ್ಕರವಲ್ಲ. ಅವರು ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತುಂಬಿಕೊಂಡು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಹಾಸ್ಯ ಸಾಹಿತಿ ರವಿ ಭಜಂತ್ರಿ ಕರೆ ನೀಡಿದರು.

ಅವರಿಂದು ಕೆ.ಎಲ್.ಇ. ಸಂಸ್ಥೆಯ ಎಸ್.ಎಸ್.ಎಮ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ 2019-20ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಮನಸ್ಸನ್ನು ಮೃಗಿಯವಾಗಿಸಿಕೊಳ್ಳದೇ ಹದಿಹರೆಯದ ವಯಸ್ಸನ್ನು ಹದವಾಗಿಸಿಕೊಂಡು ವಿವೇಕಾನಂದ, ಅಬ್ದುಲ್ ಕಲಾಮರಂತೆ ದೇಶ ಸೇವೆ ಮಾಡಿ ಸಾರ್ಥಕತೆಯ ಬದುಕನ್ನು ಬಾಳಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು ಹಿರಿಯ ನ್ಯಾಯವಾದಿಗಳು ಆದ ಎಚ್.ಆರ್. ಚಮಕೇರಿ ಅವರು ಮಾತನಾಡಿ, ವಿದ್ಯಾಥರ್ಿಗಳು ವಿದ್ಯಾಭ್ಯಾಸ ಹಾಗೂ ಜೀವನವನ್ನು ತಪಸ್ಸನ್ನಾಗಿಸಿಕೊಳ್ಳಬೇಕು, ಯಾಕೆಂದರೆ ತಪಸ್ಸೇ ಸಾಧನೆಗೆ ಮೂಲ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

  2018-19ನೇ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ 100 ಕ್ಕೆ 98 ಅಂಕ ಗಳಿಸಿದ ಅಮೀತ ಪಾಟೀಲ, ವ್ಯವಹಾರ ಅಧ್ಯಯನ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ಪವಾಡಿ ಹವಾಲ್ದಾರ,  ರಾಜ್ಯಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ಅಂಜಲಿ ಜಂಬಗಿ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ವೇದಿಕೆಯ ಮೇಲೆ ಕನ್ನಡ ಅಧ್ಯಾಪಕರಾದ ಡಾ. ಎಸ್.ಎಮ್. ಜನಗೌಡ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು, ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ ಸ್ವಾಗತಿಸಿ ಪರಿಚಯಿಸಿದರು.

  ಡಾ. ವಿಜಯ ಕಾಂಬಳೆ, ಪ್ರೊ. ಸ್ಮಿತಾ ಪಾಟೀಲ, ಪ್ರೊ. ಸಂಜೋತಾ ಜನಜ ಬಹುಮಾನ ವಿತರಣೆ ನಡೆಸಿಕೊಟ್ಟರು. ಡಾ. ಆರ್.ಎನ್. ಇನಾಮದಾರ ನಿರೂಪಿಸಿದರು, ಪ್ರೊ. ಕೆ.ಎಸ್. ಚಂಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.