ಗದುಗಿನ ಸಂಗೀತದ ಗದ್ದುಗೆ ಮಾಡಿದ ಕೀರ್ತಿ ಪಂಚಾಕ್ಷರಿ ಗವಾಯಿಗಳವರಿಗೆ ಸಲ್ಲುತ್ತದೆ - ಗುಂಜೀಕರ್

ಗದುಗಿನ ಸಂಗೀತದ ಗದ್ದುಗೆ ಮಾಡಿದ ಕೀರ್ತಿ ಪಂಚಾಕ್ಷರಿ ಗವಾಯಿಗಳವರಿಗೆ ಸಲ್ಲುತ್ತದೆ - ಗುಂಜೀಕರ್ The credit for making Gadugina's musical stage a home goes to the Panchakshari singers - Gunjikar

ಲೋಕದರ್ಶನ ವರದಿ 

ಗದುಗಿನ ಸಂಗೀತದ ಗದ್ದುಗೆ ಮಾಡಿದ ಕೀರ್ತಿ ಪಂಚಾಕ್ಷರಿ ಗವಾಯಿಗಳವರಿಗೆ ಸಲ್ಲುತ್ತದೆ - ಗುಂಜೀಕರ್ 

 

ಗದಗ 03 : ಗದುಗಿಗೆ ಸಂಗೀತದ ಗದ್ದಿಗೆಯ ಗೌರವ ತಂದು ಕೊಟ್ಟವರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು. ಸಂಗೀತದ ಮೂಲಕ ಅಂಧ ಅನಾಥರು ಸ್ವಾಭಿಮಾನದಿಂದ ಬದುಕಟ್ಟಿಕೊಳ್ಳುವ ಆತ್ಮ ವಿಸ್ವಾಸ ತುಂಬಿದವರು. ಸಂಗೀತ ಮನರಂಜನೆಯ ಮಾದ್ಯಮವಾಗಿರದೆ ಆತ್ಮಜ್ಞಾನದ ಮಾರ್ಗವೂ ಆಗಿದೆ. ಸಂಗೀತಕ್ಕೆ ಮನಸ್ಸನ್ನು ಶಾಂತವಾಗಿಡುವ ಶಕ್ತಿಯಿದೆ. ಸಂಗೀತ ಭಗವಂತನ ಆರಾಧನೆಯ ಮಾರ್ಗವೂ ಹೌದು. ಎಂದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಮತ್ತು ಕಲಾವಿಕಾಸ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷರವಿ ಗುಂಜಿಕರ ಹೇಳಿದರು.  

ಅವರು, ದಿನಾಂಕ02 ಫೆಬ್ರುವರಿ 2026. ಸೋಮವಾರ, ನಗರದ ಮುಂಡರಗಿ ರಸ್ತೆಯಲ್ಲಿ ಭಾರತೀಯ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಸಭಾ ಭವನದಲ್ಲಿ, ಉತ್ತರಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ, ಕಲಾ ವಿಕಾಸ ಪರಿಷತ್, ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ134 ನೆಯ ಜಯಂತಿ, ಅಮರ ಸ್ವರ ಸಮಾರೋಹವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. 

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ, ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್‌.ವಾಯ್‌. ಚಿಕ್ಕಟ್ಟಿಮಾತನಾಡಿ, ಕಲಾ ವಿಕಾಸ ಪರಿಷತ್ ನವರು ನಮ್ಮ ಶಾಲೆಯಲ್ಲಿ ಸುಮಾರು 20 ವರ್ಷಗಳಿಂದ ಪಂಚಾಕ್ಷರಿ ಗವಾಯಿಗಳವರ ಜಯಂತಿಯನ್ನು ಆಚರಿಸುತ್ತಾ ಬಂದಿದ್ದಾರೆ ಇದು ಬಯಸದೇ ಬಂದನಮ್ಮ ಭಾಗ್ಯವೆಂದು ಹೇಳಿದರು. ಕಲಾವಿಕಾಸ ಪರಿಷತ್ತಿನಅಧ್ಯಕ್ಷ, ಸಿ. ಕೆ. ಹೆಚ್‌. ಶಾಸ್ತ್ರೀ(ಕಡಣಿ) ಪೂಜ್ಯಗುರು ಪಂಚಾಕ್ಷರಿ ಗವಾಯಿಗಳವರಿಗೆ ನುಡಿ ನಮನ ಸಲ್ಲಿಸಿ ಪರಿಷತ್ ನಡೆದು ಬಂದದಾರಿ ವಿವರಿಸಿ ರಜತ ಸಂಭ್ರಮಾಚರಣೆ ಸಮಾರೋಪ ಸಮಾರಂಭವು ಐತಿಹಾಸಿಕವಾಗಿ ಹಮ್ಮಿಕೊಳ್ಳಲು ನಿರ್ಧರಿಸಿದ್ದು ಅವಳಿ ನಗರದ ಕಲಾ ಆಸಕ್ತರು ಉದಾರ ಸಹಾಯ ಸಹಕಾರ ನೀಡಲು ವಿನಂತಿಸಿಕೊಂಡರು. 

ವೀರೇಶ್ವರ ಪುಣ್ಯಾಶ್ರಮದ ಕುಮಾರ ಹಿರೇಮಠ ಗುತ್ತರಗಿ,ಶಾಸ್ತ್ರೀಯ ಸಂಗೀತ, ಧಾರವಾಡದ ಆಕಾಶವಾಣಿ ದೂರದರ್ಶನ ಕಲಾವಿದೆ, ಕಲಾ ವಿಕಾಸ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ, ಡಾ. ಸುಮಾ ಬಸವರಾಜ, ವಚನ ಸಂಗೀತ, ಕಲಾ ವಿಕಾಸ ಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಾವೇರಿಯ ಮಮತಾ ನಂದಿಹಳ್ಳಿ ಭಕ್ತಿ ಸಂಗೀತ ನಡೆಸಿಕೊಟ್ಟರು. ಶ್ರೀಕಾಂತ ಗಂಗಾವತಿ ಇವರು ತಬಲಾದಲ್ಲಿ, ಹಣಮಂತ ಹಾರೋ​‍್ಮನಿಯಂನಲ್ಲಿ ಸಾಥ ನೀಡಿದರು. ಬೆಟಗೇರಿಯ ಉದಯೋನ್ಮುಖ ಕಲಾವಿದೆ, ತನಿಷಾ ಸತೀಶಕುಮಾರ ವಜ್ರೇಶ್ವರಿ, ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾರ್ಥನೆ ರೇಖಾ ಬಾಳಿಹಳ್ಳಿಮಠ, ಸ್ವಾಗತ, ಗಣೇಶ ಬಡ್ನಿ ವಂದನಾರೆ​‍್ಣಯನ್ನು ಶಂಕರ ಸರ್ ನಡೆಸಿಕೊಟ್ಟರು. ಮಾಡಿದರು ಕನ್ನಡ ಪ್ರಾಧ್ಯಪಕ ಸಾಹಿತಿ ಶ್ರೀಶೈಲ ಬಡಿಗೇರ ಕಾರ್ಯಕ್ರಮ ನಡೆಸಿಕೊಟ್ಟರು.ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾದ, ಡಾ. ಬಸವರಾಜ ಬಳ್ಳಾರಿ ನಿವೃತ್ತ ಉಪನ್ಯಾಸಕ ಪ್ರೊ. ಅನ್ನದಾನಿ ಹಿರೇಮಠ, ಸುರೇಶಅಂಗಡಿ, ಪ್ರಾಚಾರ್ಯ ಬಸವರಾಜಗಿರಿ ತಮ್ಮಣ್ಣವರ, ಸತೀಷ ವಜ್ರೇಶ್ವರಿ, ಪ್ರಾಚಾರ್ಯಡಾ. ಬಿಪಿನ್ ಚಿಕ್ಕಟ್ಟಿ,ಉಪ ಪ್ರಾಚಾರ್ಯರರಾದ ಶೋಭಾ ಸ್ಥಾವರಮಠ. ಅದ್ಯಾಪಕಿರಿಯಾನಾ ಮುಲ್ಲಾ, ಮೊದಲಾದವರು ಉಪಸ್ಥಿತರಿದ್ದರು.