ಗೋ ರಕ್ಷಣಾ ಹಿಂಸೆ ತಡೆಯುವ ಬಾಧ್ಯತೆ ರಾಜ್ಯಗಳದ್ದು: ಸುಪ್ರೀಂ
ಹೊಸದಿಲ್ಲಿ 03: ಗೋ ರಕ್ಷಣೆ ಹೆಸರಿನಲ್ಲಿ, ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಯಾರನ್ನೇ ಅಗಲೀ ಹೊಡೆದು ಚಚ್ಚಿ ಸಾಯಿಸುವುದು ಅಪರಾಧ. ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯಾಗಿರುವುದರಿಂದ, ಈ ರೀತಿಯ ಹಿಂಸೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಸರಕಾರಗಳ ಮೇಲಿದೆ ಎಂದು ಸುಪ್ರೀಂ ಕೋಟರ್್ ಇಂದು ಮಂಗಳವಾರ ಹೇಳಿದೆ.
ಗುಂಪು ಹಿಂಸೆಗಳನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗದಶರ್ಿ ಸೂತ್ರಗಳನ್ನು ರೂಪಿಸುವುದಕ್ಕಾಗಿ ಸೂಕ್ತ ನಿದರ್ೆಶ ನೀಡಬೇಕೆಂದು ಕೋರುವ ಅಜರ್ಿಯ ಮೇಲಿನ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋಟರ್್ ಈ ರೀತಿಯಾಗಿ ಹೇಳಿತು.
ಜನರ ಗುಂಪು ಶಂಕಿತರನ್ನು ಹೊಡೆದು ಚಚ್ಚಿ ಸಾಯಿಸುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆ; ಇದನ್ನು ತಡೆಯುವಲ್ಲಿನ ಆದೇಶವನ್ನು ಪಾಲಿಸದ ರಾಜ್ಯ ಸರಕಾರಗಳನ್ನು ಸುಪ್ರೀಂ ಕೋಟರ್್ ಪ್ರಶ್ನಿಸಬೇಕು ಎಂದು ಕೇಂದ್ರ ಸರಕಾರ ಸವರ್ೊಚ್ಚ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿತು.
ಸುಪ್ರೀಂ ಕೋಟರ್ಿನ ವರಿಷ್ಠ ನ್ಯಾಯಮೂತರ್ಿ ಜಸ್ಟಿಸ್ ದೀಪಕ್ ಮಿಶ್ರಾ ಮತ್ತು ನ್ಯಾಯಮೂತರ್ಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು "ಗುಂಪು ಹಿಂಸೆಯಂತಹ ಗಂಭೀರ ಅಪರಾಧಗಳನ್ನು ತಡೆಯುವಲ್ಲಿ ರಾಜ್ಯ ಸರಕಾರಗಳು ಜವಾಬ್ದಾರಿಯುತವಾಗಿರಬೇಕು; ಯಾರೊಬ್ಬರೂ ಕೂಡ ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಹೇಳಿತು. ಅಜರ್ಿಯಲ್ಲಿ ಮಾಡಿಕೊಂಡಿರುವ ನಿವೇದನೆಯ ಪ್ರಕಾರ ತಾನು ಆದೇಶವನ್ನು ಹೊರಡಿಸುವುದಾಗಿ ಮೂವರು ನ್ಯಾಯಮೂತರ್ಿಗಳ ಪೀಠ ಹೇಳಿತು.
ಗುಂಪು ಹಿಂಸೆಯ ಬಗ್ಗೆ ಕೇಂದ್ರ ಸರಕಾರ ಸಂಪೂರ್ಣ ಅರಿವನ್ನು ಹೊಂದಿದೆ; ಆದರೆ ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯಾಗಿರುವುದರಿಂದ ಆಯಾ ರಾಜ್ಯ ಸರಕಾರಗಳೇ ಅವುಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ ಎಸ್ ನರಸಿಂಹ ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 