ನವದೆಹಲಿ, ಮಾ 20, ದೇಶದ ಪುತ್ರಿಯರಿಗೆ ನ್ಯಾಯ ಸಿಕ್ಕಿದೆ. ಕಳೆದ ಏಳು ವರ್ಷಗಳಿಂದ ನಮಗೆ ಬೆಂಬಲ ನೀಡಿದ ದೇಶದ ಜನತೆಗೆ, ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ನಿರ್ಭಯ ತಾಯಿ ಆಶಾದೇವಿ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ . ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ಮುಂಜಾನೆ 5.30ಕ್ಕೆ ನೇಣುಗಂಬಕ್ಕೇರಿಸಲಾಗಿದೆ. ಈ ಕ್ಷಣದಲ್ಲಿ ಭಾವುಕರಾದ ನಿರ್ಭಯಾ ತಾಯಿ ಆಶಾದೇವಿ, ಜೆಸ್ಟಿಸ್ ಡಿಲೇಡ್, ಬಟ್ ನಾಟ್ ಡಿನೈಡ್ (ನ್ಯಾಯ ವಿಳಂಬವಾಗಿದೆ; ಆದರೆ ನಿರಾಕರಿಸಿಲ್ಲ) ಎಂದು ಭಾವುಕರಾಗಿ ಹೇಳಿದರು. ಉದಯಿಸುವ ಕೆಂಪು ಸೂರ್ಯ ದೇಶಕ್ಕೆ ಇತಿಹಾಸ ಬರೆದಿದ್ದಾನೆ.ಸಂದೇಶ ನೀಡಿದ್ದಾನೆ ನಿರ್ಭಯಾಗೆ ಇಂದು ನ್ಯಾಯ ಒದಗಿಸಿದ್ದಕ್ಕಾಗಿ ನ್ಯಾಯಾಂಗ ವ್ಯವಸ್ಥೆಗೆ ಕೃತಜ್ಞತೆ.
ವಿಳಂಬ ತಂತ್ರವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರಪತಿಗಳಿಗೆ ಹಾಗೂ ಇಬ್ಬರು ವಕೀಲರಿಗೆ ಮೇಲಾಗಿ ಈಡಿ ಪ್ರಕರಣಲ್ಲಿ ನಮ್ಮ ಜೊತೆ ಬೆಂಬಲವಾಗಿ ನಿಂತ ಕೋಟ್ಯಾಂತರ ಜನರಿಗೂ ಅಭಾರಿಯಾಗಿರುವುದಾಗಿ ಹೇಳಿದರು.