ಬಿಸನಳ್ಳಿ ಗ್ರಾಮದ ಧರ್ಮ ವೇದಿಕೆಯಲ್ಲಿ ಪಂಚ ಪೀಠಗಳ ಸಮ್ಮಿಲನ ಭೂ ಕೈಲಾಸ ಸೃಷ್ಠಿಯಾದಂತಾಗಿದೆ

 ಬಿಸನಳ್ಳಿ ಗ್ರಾಮದ ಧರ್ಮ ವೇದಿಕೆಯಲ್ಲಿ ಪಂಚ ಪೀಠಗಳ ಸಮ್ಮಿಲನ ಭೂ ಕೈಲಾಸ ಸೃಷ್ಠಿಯಾದಂತಾಗಿದೆ  The convergence of the five shrines at the Dharma Vedike in Bisanalli village is like the creation o

           ಬಂಕಾಪುರ 02 : ದೇವಲೋಕವನ್ನು ನಾನು ಎಂದೂ ನೋಡಿಲ್ಲ. ನಾನು ಸಾಕ್ಷಾತ ದೇವಲೋಕವನ್ನು ಪ್ರಥಮಬಾರಿಗೆ ನೋಡುತ್ತಿರುವುದು  ಕಾಶಿ ಶಾಖಾಮಠದ ಬಿಸನಳ್ಳಿ ಗ್ರಾಮದ ಧರ್ಮ ವೇದಿಕೆಯಲ್ಲಿ ಎಂದು ಶಾಸಕ ಯಾಸೀರಹಮ್ಮದ ಖಾನ ಪಠಾಣ ಹೇಳಿದರು. 

     ಬಿಸನಳ್ಳಿ ಗ್ರಾಮದ ಕಾಶಿ ಶಾಖಾಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಪಂಚಪೀಠಗಳ ಸಾನಿಧ್ಯದಲ್ಲಿ ನಡೆದ, 5 ನೇ ದಿನದ ಧರ್ಮ ವೇದಿಕೆ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂಬ ಜಗದ್ಗುರು  ವೀರಗಂಗಾಧರರ ನುಡಿ ಇಂದು ಈ ವೇದಿಕೆಮೂಲಕ ಸತ್ಯವಾಗಿದೆ. ಆ ಹಿನ್ನಲೆಯಲ್ಲಿ ನಾನು ಕೂಡಾ ಇಲ್ಲಿ ನಿರ್ಮಾಣವಾಗುತ್ತಿರು  ಕಾಶಿ ವಿಶ್ವನಾಥ ಶಿಲಾಮಂದಿರಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿಕೊಡುವುದಾಗಿ ಬರವಸೆ ನೀಡಿದರು. 

     ಸಮಾರಮಭದ ಧಿವ್ಯ ಸಾನಿಧ್ಯವಹಿಸಿ ಆಶೀರ್ವಚನ ಕರುಣಿಸಿದ, ಬಾಳೆಹೊನ್ನೂರ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಭಗವತ್ಫಾದರು, ಪಂಚಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ತತ್ವ ಸಿದ್ದಾಂತದಡಿ ಎಲ್ಲ ಸಮೂದಾಯದ ಜನರನ್ನು ಧರ್ಮದ ದಾರಿಯಲ್ಲಿ ಕೊಂಡೋಯ್ಯುವ ಕೇಲಸವನ್ನು ಮಾಡಿಕೊಂಡು ಬರುತ್ತಿದೆ. ಶ್ರೀ ಕಾಶಿ ಜಗದ್ಗುರುಗಳು 35 ವರ್ಷಗಳಕಾಲ ಭೂಲೋಕದ ಶಿವನಾಗಿ ಸರ್ವಜನಾಂಗದವರ ವಳಿತಿಗಾಗಿ ಶ್ರಮಿಸುತ್ತಾ ಬರುತ್ತಿದ್ದಾರೆ. 

ವಿಶ್ವದ ಭೂ ಪುಟದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿದವರು. ರಂಭಾಪುರಿ ಪೀಠದ ಲಿಂ.ವೀರಗಂಗಾಧರ ಶಿವಾಚಾರ್ಯರು. ಧರ್ಮದ ವಿಚಾರ ಬಂದಾಗ  ಪಂಚಪೀಠಗಳು ಒಂದಾಗಿ ಕೇಲಸ ಮಾಡುತ್ತಾ ಬಂದಿವೆ. ಕೇವಲ 11 ವರ್ಷಗಳಲ್ಲಿ ಈ ಬಿಸನಳ್ಳಿ ಗ್ರಾಮದಲ್ಲಾದ ಬದಾಲಾವಣೆಯನ್ನು ಕಂಡು ನನಗೆ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಇದಕ್ಕೆ ಕಾಶಿ ಜಗದ್ಗುರುಗಳವರ ಪ್ರೇರಣೆಯೇ ಕಾರಣವಾಗಿದೆ. ಬರುವ ದಿನಗಳಲ್ಲಿ ಬಿಸನಳ್ಳಿ ಗ್ರಾಮ ದಕ್ಷಿಣದ  ಕಾಶಿ ಸು ಕ್ಷೇತ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನುಡಿದರು. 

     ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜ.ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಮಾತನಾಡಿ, ಕಾಶೀ ಡಾ.ಚಂದ್ರಶೇಖರ ಶಿವಾಚಾರ್ಯರು ನಿಸ್ವಾರ್ಥತೆಯಿಂದ ಸ್ಥಾಪಿಸಿದ ಈ ಗುರುಕುಲ ಪಾಠಶಾಲೆ ಉತ್ತರೋತ್ತರವಾಗಿ ಅಭಿವೃದ್ಧಿಹೊಂದಿ ದಕ್ಷಿಣ ಕಾಶಿಯಾಗುತ್ತಲಿದೆ. ಪಂಚಪೀಠಗಳಲ್ಲಿ ರಂಭಾಪುರಿ ಪೀಠ ಪ್ರಥಮ ಪೀಠವಾದರೆ, ಕಾಶಿ ಪೀಠ ಕೊನೆಯಪೀಠವಾಗಿದೆ. ಕಾಶಿ ಹಾಗು ರಂಭಾಪುರಿ ಪೀಠಗಳು ಸಮನ್ವಯವಾಗಿದ್ದರೆ, ಎಲ್ಲ ಪೀಠಗಳು ಸಮನ್ವಯವಾಗಿರಲು ಸಾದ್ಯವಿದೆ. ವಜ್ರಕಾಯ, ದೃಡಕಾಯ, ಆರೋಗ್ಯಕಾಯರಾಗಿ ಕಾಶಿ, ರಂಭಾಪುರಿ ಪೀಠಗಳು ಧರ್ಮದ ದೃವತಾರೆಗಳಾಗಿ ಸಮಾಜದವಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. 

      ಕಾಶಿ ಕಿರಿಯ ಜ.ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಭಾರತದೇಶ ಪರಿಪೂರ್ಣ ಹಿಂದೂ ರಾಷ್ಟ್ರ ವಾಗಬೇಕಾದರೆ, ಪಠ್ಯದಲ್ಲಿ ಧರ್ಮ ಭೋದನೆ ಬರಬೇಕು. ಸರ್ವರಿಗೂ ಸಮನಾಗಿ ಬಾಳಲು ಇಲ್ಲಿ ಅವಕಾಶವಿದೆ. ಆದರೆ ರಾಷ್ಟ್ರ ದ್ರೋಹಿಗಳಿಗೆ ಕಠಿಣ ಶಿಕ್ಷೆಯ ಕಾನೂನು ರಚನೆಯಾಗಬೇಕು. ಧರ್ಮದ ಅಭಿಮಾನ ಮಕ್ಕಳಲ್ಲಿ ಮೂಡಬೇಕಾದರೆ, ಇಂತಹ ಧರ್ಮ ಸಮಾರಂಭಕ್ಕೆ ಮಕ್ಕಳನ್ನು ಕರೆ ತರಬೇಕು. ಭಾರತೀಯ ಶರೀರದಿಂದ ಮಾತ್ರ ಭಾರತೀಯ ನಾಗಿರದೇ ಮಾನಸಿಕವಾಗಿಯೂ ಕೂಡಾ ಭಾರತೀಯ ನಾಗಿರಬೇಕು ಎಂದು ಹೇಳಿದರು. 

     ಶೈಲ ಪೀಠದ ಜ.ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು.  ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯರು ಸಭೆಯ ಸಾನಿಧ್ಯವಹಿಸಿದ್ದರು. 

     ಮಾಜಿ ಸಂಸದ ಮಂಜುನಾಥ ಕುನ್ನೂರ, ಎಸ್‌.ಕೆ.ಅಕ್ಕಿ ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಗಣ್ಯಮಾನ್ಯ ಪ್ರತಿಷ್ಠಿತರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಯಳಮಲ್ಲಿಮಠ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.