ನಾಡು ನುಡಿ ಕಟ್ಟುವ ಮತ್ತು ಬೆಳೆಸುವ ಪ್ರಕ್ರಿಯೆಯಲ್ಲಿ ಪತ್ರಿಕೋದ್ಯಮದ ಕೊಡುಗೆ
The contribution of journalism in the process of building and cultivating a national language
ಚಿಕ್ಕೋಡಿ 25: ದ್ರಾವಿಡ್ ಭಾಷೆಗಳಲ್ಲಿ ಕನ್ನಡ ಭಾಷೆ ಪುರಾತನವಾಗಿದೆ. ಇತಿಹಾಸ ದಾಖಲೆ ಯಲ್ಲಿ ಕರ್ನಾಟಕ ಏಕೀಕರಣ, ನಾಡು ನುಡಿ ಕಟ್ಟುವ ಮತ್ತು ಬೆಳೆಸುವ ಪ್ರಕ್ರಿಯೆಯಲ್ಲಿ ಪತ್ರಿಕೋದ್ಯಮದ ಕೊಡುಗೆ ಅತ್ಯುತ್ತಮವಾದ ಪಾತ್ರವಹಿಸಿದೆ. ಮಂಗಳೂರು ಸಮಾಚಾರದಿಂದ ಇಲ್ಲಿಯವರಿಗೆ ಕನ್ನಡ ಪತ್ರಿಗಳು ನಾಡು ನುಡಿ ಜಲ ವಿಷಯಗಳಲ್ಲಿ ಸಾಕ್ಷಿ ಪ್ರಜ್ಞೆ ಆಗಿ ವಿಶ್ವಾಸಾರ್ಹತೆಯಿಂದ ಜನರ ನಾಡಿಮಿಡಿತ ಜಾಗೃತಿಗೊಳಿಸುತ್ತಿದೆ ಎಂದು ಸಾಹಿತಿ ಡಾ. ಹೊಂಬಯ್ಯ ಹೊನ್ನಲಗೆರೆ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ, ವಿಜ್ಞಾನ, ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಕನ್ನಡ ಭಾಷೆ-ಪತ್ರಿಕೋದ್ಯಮ ಹಾಗೂ ಡಿಜಿಟಲ್ ಮಾಧ್ಯಮ ವಿಷಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಟಿವಿ ಪತ್ರಕರ್ತ ಶ್ರೀಕಾಂತ್ ಕುಬಕಡ್ಡಿ ಮಾತನಾಡಿ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ಸುದ್ದಿ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಬ್ರಾಡ್ಕಾಸ್ಟ್ ಮಾಧ್ಯಮ, ಡಿಜಿಟಲ್ ಮಾಧ್ಯಮದಲ್ಲಿ ವಿಫುಲವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ವಿದ್ಯಾರ್ಥಿಗಳು ಪುಸ್ತಕದ ಅಧ್ಯಯನದ ಜೊತೆಗೆ ಬರವಣಿಗೆ,ಸಾಹಿತ್ಯ ತಂತ್ರಜ್ಞಾನದಲ್ಲಾಗುತ್ತಿರುವ ಆವಿಷ್ಕಾರದೊಂದಿಗೆ ಜಾಗತಿಕ ಸ್ಪರ್ಧಾತ್ಮಕತೆಗಳಿಗೆ ಸಿದ್ದವಾಗಬೆಕೆಂದರು. ಪತ್ರಿಕೋದ್ಯಮದಲ್ಲಿನ ಬ್ರೇಕಿಂಗ್ ನ್ಯೂಸ್, ನಮ್ಮಲ್ಲೇ ಮೊದಲು ಎಂಬ ಸುದ್ದಿ ಪ್ರಕಟಿಸುವ ಪ್ರಕ್ರಿಯೆಗಳಲ್ಲಿ ಸಮರ್ಕ ಮಾಹಿತಿ ಕೊರತೆಯಿಂದ ಆಚಾತುರ್ಯಗಳು ಆಗುವ ಮೂಲಕ ಮುಜುಗರಗೊಳ್ಳುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ. ವೃತ್ತಿಯಲ್ಲಿ ಸಮಯದ ಮಹತ್ವ ಸಮಯೋಚಿತ ಸೂಕ್ಷ್ಮ ಗ್ರಾಹಿಯಾಗಿ ವಿಷಯ ತಿಳಿದುಕೊಂಡು ವರದಿಯನ್ನು ಮಾಡುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಬಿ.ಜಿ ಕುಲಕರ್ಣಿ ಪತ್ರಿಕೋದ್ಯಮವು ಸಮಾಜ, ಸರ್ಕಾರ , ಯುವಜನತೆಗೆ , ಮಾರ್ಗದರ್ಶಿಯಾಗಿ ಧನಾತ್ಮಕ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಮುದಾಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಾದ ಎಸ್ ಎಲ್ ಭೈರ್ಪ, ಗೀರೀಶ್ ಕಾರ್ನಾಡ್, ಯು ಆರ್ ಅನಂತಮೂರ್ತಿ, ಅವರ ಸಮಗ್ರ ಸಾಹಿತ್ಯ ಅಧ್ಯಯನವು ಯುವ ಪತ್ರಕರ್ತರಿಗೆ ಸ್ಪೂರ್ತಿ ಮತ್ತು ಧೈರ್ಯದ ಅನುಭವವನ್ನು ಮೂಡಿಸಲು ಮಹತ್ವದ ಶಕ್ತಿಯಾಗಿದೆ ಎಂದರು.
ಮಹಾ ಶ್ವೇತಾ ಭೀಷ್ಠೆ ಪ್ರಾರ್ಥನಾ ಗೀತೆ ಹಾಡಿದರು. ಲೆಫ್ಟಿನೆಂಟ್ ಸಿದ್ದಣ್ಣ ನಾಯಕ್ ಸ್ವಾಗತಿಸಿ ಅತಿಥಿ ಪರಿಚಯಿಸಿದರು. ಐ ಕ್ಯೂಎಸಿ ಸಂಯೋಜಕ ವಿನಾಯಕ ಮಂಜಲಾಪುರ , ಕನ್ನಡ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಜೆ.ಎಲ್.ಕದಂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ. ಪ್ರೊ. ಮಹೇಶ್ ಮದಭಾವಿ.ಡಾ.ಬಿ. ಎಂ ಪಾಟೀಲ್.ಪ್ರೊ.ಪೂಜಾ ರೋಹಿದಾಸ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 